ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸಿಂಗನಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 12ನೇ ಶತಮಾನದ ಬಸವಣ್ಣನವರ ವಚನ ಸಂರಕ್ಷಕರಾದ ಮಡಿವಾಳ ಮಾಚಿದೇವ ಜಯಂತಿಯನ್ನು ಶಾಲೆಯಲ್ಲಿ ಸಂಭ್ರಮದಿಂದ ಆಚರಣೆ ಮಾಡಲಾಯಿತು.
ನಂತರ ಶಾಲಾ ಶಿಕ್ಷಕರಾದ ಸೋಮರಾಜ ಮಾತನಾಡಿ 12ನೇ ಶತಮಾನದ ಮಡಿವಾಳ ಮಾಚಿದೇವರು ಬಸವಣ್ಣನವರ ತತ್ವವಾದಿಗಳಾಗಿದ್ದರು,
ಮೇಲು-ಕೀಳು ತಾರತಮ್ಯ,ಅಸೃಶ್ಯತೆ,ಮೂಢ ನಂಬಿಕೆಗಳ ಸೃಷ್ಟಿ,ಶಿಕ್ಷಣದಲ್ಲಿ ಅವಕಾಶ ವಂಚನೆ ಹೀಗೆ ಅನೇಕ ಸಾಮಾಜಿಕ ಅಸಮಾನತೆಯಿಂದ ಜನರು ತುಳಿತಕ್ಕೆ ಒಳಗಾಗಿದ್ದರು.ಇವುಗಳೆಲ್ಲವುಗಳಿಂದ ಮಹಿಳೆಯರು,ವೃತ್ತಿ ನಿರತ ಶ್ರಮಜೀವಿಗಳು,ಬಡವರು, ದೀನ ದಲಿತರು ನಿರಾಶೆ-ಹತಾಶೆಗೊಂಡು ಅಸಹನೀಯ ಬದುಕಿಗೆ ತುತ್ತಾಗಿದ್ದರು.ಸರ್ವರಿಗೂ ಸಮಪಾಲು -ಸಮಬಾಳು ಒದಗಿಸಲು ಬಸವ-ಮಾಚಿದೇವಾದಿ ಶರಣರು ಸಾಮಾಜಿಕ ಕ್ರಾಂತಿಯನ್ನೇ ಕೈಗೊಂಡರು. ಶರಣರ ಅಗ್ರ ಗಣ್ಯ ಬಳಗದಲ್ಲಿ ಮಡಿವಾಳ ಮಾಚಿದೇವ’ ಅತ್ಯಂತ ಪ್ರಕಾಶಮಾನವಾಗಿ ಕಂಡುಬರುವರು.
ವೀರನಿಷ್ಠೆಯ ಶರಣನೀತ ವಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ‘ದೇವರ ಹಿಪ್ಪರಗಿಯಲ್ಲಿ’ ಪರುವತಯ್ಯ -ಸುಜ್ನಾನವ್ವ ದಂಪತಿಗಳ ಪುತ್ರ ರತ್ನ -ಶರಣ ಕಿರಣ ಮಡಿವಾಳ ಮಾಚಿದೆವರು.ದೇವರ ಹಿಪ್ಪರಗಿ ಈತನ ಜನ್ಮಸ್ಥಳ.ಕಾರ್ಯಕ್ಷೇತ್ರ ಕಲ್ಯಾಣ ಆರಾಧ್ಯದೈವ ಕಲ್ಲಿನಾಥ.ಕಾವ್ಯ ಪುರಾಣಗಳಲ್ಲಿ ಈತನನ್ನು ವೀರಭದ್ರನ ಅವತಾರವೆಂದು ಬಣ್ಣಿಸಲಾಗಿದೆ.ಶಾಸನ ಶಿಲ್ಪಗಳಲ್ಲಿಯೂ ಇವನಿಗೆ ಎಡೆ ಲಭಿಸಿದೆ.ಶರಣರ ಬಟ್ಟೆಗಳನ್ನು ತೊಳೆಯುವುದು (ಶುಚಿ ಮಾಡುವುದು) ಈತನ ಕಾಯಕ.
ಮಡಿವಾಳ ಮಾಚಿದೇವರ ಬಗ್ಗೆ ಹಲವು ಐತಿಹ್ಯಗಳು ಪ್ರಚಾರದಲಿ ಇವೆ ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ತಿಮ್ಮಣ್ಣ ಕನಕ ರೆಡ್ಡಿ,ಚತ್ರಪ್ಪ ನಾಯಕ,ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಲ್ಲಿಕಾರ್ಜುನಗೌಡ,ಎಸ್ ಡಿ ಎಂ ಸಿ ಸದಸ್ಯರಾದ,ಮಲ್ಲನಗೌಡ,ನಾಗೇಶ್ ಬೋವಿ, ಹನುಮೇಶ್ ಅಂಗಡಿ,ಲಕ್ಷ್ಮಣ ಹರಿಜನ,ಗ್ರಾಮ ಪಂಚಾಯತಿ ಸದಸ್ಯರಾದ ಅನಿಮೇಶ್ ತಳವಾರ್, ಶಾಲಾ ಮುಖ್ಯೋಪಾಧ್ಯಾಯರು ಶ್ರೀನಿವಾಶ, ಶಿಕ್ಷಕರಾದ ಸಂತೋಷ ಪಿ.ಡಿ,ಬಸವರಾಜ,ಹನುಮೇಶ, ಶಿಕ್ಷಕಿಯರು,ಗ್ರಾಮದ ಯುವಕರಾದ ವೆಂಕೋಬ ಬಿ, ನಿಂಗನಗೌಡ,ಪಂಪಾಪತಿ ಅಡಪದ್,ದುರ್ಗಮ್ಮ ದೇವಿ ಯುವಕ ಮಂಡಳಿಯವರು,ಗ್ರಾಮದ ಯುವಕರು, ಶಾಲಾ ವಿದ್ಯಾರ್ಥಿಗಳು ಕಾಲೇಜಿ ವಿದ್ಯಾರ್ಥಿಗಳು,ಶ್ರೀ ಬಸವ ಮಡಿವಾಳ ಮಾಚಿದೇವ ಸಮಾಜದವರು ಭಾಗಿಯಾಗಿದ್ದರು.




















