ಹೊನ್ನಾಳಿ ಕಾಯಕ ನಿಷ್ಠೆ,ಭಕ್ತಿಯ ಪರಾಕಾಷ್ಠೆ ತೋರಿದವರು ಶ್ರೀ ಮಡಿವಾಳ ಮಾಚಿದೇವರು ಫೆ.1: ಕರ್ನಾಟಕದಲ್ಲಿ 12ನೇ ಶತಮಾನದಲ್ಲಿ ಹಲವಾರು ಕ್ರಾಂತಿ ಪುರುಷರ ಜನನವಾಗಿದ್ದು,ಅಂದಿನ ಶೋಷಣೆ, ಆಸ್ಪೃಶ್ಯತೆ,ಅನಕ್ಷರತೆ,ಜಾತೀಯತೆ ವಿರುದ್ಧ ಹೋರಾಟ ಮಾಡಿದರು.ಅವರಲ್ಲಿ ಕಾಯಕ ನಿಷ್ಠೆ-ಭಕ್ತಿಯ ಪರಾಕಾಷ್ಮೆ ತೋರಿದ ವ್ಯಕ್ತಿ ಅಂದರೆ ಶ್ರೀ ಮಡಿವಾಳ ಮಾಚಿದೇವರು ಎಂದು ಉಪ ವಿಭಾಗಾಧಿಕಾರಿ ತಿಮ್ಮಣ್ಣ ಹುಲ್ಮನಿ ತಿಳಿಸಿದರು.ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಹಬ್ಬಗಳ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಮಡಿವಾಳ ಮಾಚಿದೇವ,ಜಯಂತಿ ಉತ್ಸವ ಆಯೋಜಿಸಲಾಗಿದ್ದ ವಚನ ಸಂರಕ್ಷಕ,ವೀರ ಗಣಾಚಾರಿ ಶ್ರೀ ಮಡಿವಾಳ ಮಾಚಿದೇವರ ಕಾರ್ಯಕ್ರಮದಲ್ಲಿ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಹಲ್ದಾರ್ ಪಟ್ಟರಾಜ್ ಗೌಡ್ರು ಮಾತನಾಡಿದರು.ಶೋಷಣೆಯ ವಿರುದ್ಧ ಅದರ ನಿರ್ಮೂಲನೆ ಮಾಡುವ
ಸಲುವಾಗಿ ಅನುಭವ ಮಂಟಪ ಕಟ್ಟಿ ಕ್ರಾಂತಿಕಾರಿ ಬದಲಾವಣೆ ಮಾಡಿದರು.ಉತ್ತಮ ಸಮಾಜ ನಿರ್ಮಾಣ ಮಾಡಿ,ಜಾತಿಯತೆ,ಶೋಷಣೆ ವಿರುದ್ಧ ದನಿ ಎತ್ತಿದರು.ಸಿಂದಗಿ ತಾಲ್ಲೂಕಿನ ದೇವರ ಹಿಪ್ಪರಗಿ ಗ್ರಾಮದಲ್ಲಿ ಜನಿಸಿದ ಮಡಿವಾಳ ಮಾಚಿದೇವರು ಕಾಯಕ ನಿಷ್ಠೆ, ಭಕ್ತಿಯ ಪರಾಕಾಷ್ಠೆಯಲ್ಲಿ ಹಿಮಾಲಯ ಪರ್ವತ ಇದ್ದಂತೆ ಎಂದು ಹೇಳಿದರು.ಮಾಚಿದೇವರ ಕುರಿತಾದ ಉಪನ್ಯಾಸವನ್ನು
ಸಮಾಜದ ಬಾಂಧವರಾದ ಗಣೇಶ್ ಮಾಸ್ಟರ್ ನೀಡಿದರು ವೀರ ಶರಣರಾಗಿದ್ದ ಮಡಿವಾಳ ಮಾಚಿದೇವರು ತನ್ನ ಕುಲದ ಕಾಯಕ ಮಾಡುತ್ತಲೇ ಸಮಾಜದ ಅನಿಷ್ಟ ಪಿಡುಗುಗಳ ವಿರುದ್ಧ ಹೋರಾಟ ಮಾಡಿ ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು. ಅಂತಹ ಶ್ರೇಷ್ಠ ವ್ಯಕ್ತಿತ್ವ ಉಳ್ಳವರು ಇಂಥವರ ಜಾತಿಯಲ್ಲಿ ಹುಟ್ಟಿರುವ ನಾವುಗಳೇ ಪುಣ್ಯವಂತರು ಎಂದರು.
ಸರ್ಕಾರಗಳು ನಮ್ಮನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಮುಂದಾಗಿಲ್ಲ ಕಾರಣ ಈ ನಿಟ್ಟಿನಲ್ಲಿ ಉಪ ವಿಭಾಗಾಧಿಕಾರಿಗಳು ಸರ್ಕಾರದ ಗಮನಕ್ಕೆ ತರುವಂತೆ ಮನವಿ ಮಾಡಿದರು.
ಮಾಚಿದೇವರ ಆದರ್ಶದಲ್ಲಿ ಸಾಗುವ
ಮೂಲಕ ಬದುಕಿನ ಬಗ್ಗೆ ಅವರು ಹಾಕಿಕೊಟ್ಟಿ ಮಾರ್ಗದರ್ಶನ,ಬೋಧನೆ ಅನುಸರಿಸಿ,ಮುಂದಿನ ಪೀಳಿಗೆಗೆ ಉತ್ತಮ ವೇದಿಕೆ ನಿರ್ಮಾಣ ಮಾಡಬೇಕಾಗಿದೆ ಎಂದು ಸಲಹೆ ನೀಡಿದರು. ಹೊನ್ನಾಳಿ ತಾಲೂಕುಮಡಿವಾಳ ಮಾಚಿದೇವ ಸಂಘದ ಅಧ್ಯಕ್ಷರಾದ ಎಂ ಆರ್ ಮಾಂತೇಶ್ ಮಾತನಾಡಿ, ಶೋಷಿತ ಸಮಾಜದಲ್ಲಿ ಕಟ್ಟಕಡೆಯ ಸಮಾಜ ನಮ್ಮದು ನಮ್ಮ ಸಮುದಾಯವನ್ನು ಸಮಯದ ಕೊರತೆ ಇದೆ ಸಮಾಜದ ಬಾಂಧವರು ಸರಿಯಾದ ಸಮಯಕ್ಕೆ ಬಂದರೆ ಸಮಾಜದ ಒಗ್ಗಟ್ಟನ್ನು ಅಧಿಕಾರಿಗಳಿಗೆ ತೋರಿಸಬಹುದು ಈ ಮಡಿವಾಳ ಮಾಚಿದೇವ ಜನಾಂಗದಲ್ಲಿ ಹುಟ್ಟಿದ ನಾವುಗಳೇ ಪುಣ್ಯವಂತರು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಅದೇ ನೀವು ಅವರಿಗೆ ಕೊಡುವ ಆಸ್ತಿ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸುವ ಸಲುವಾಗಿ ಅನ್ನಪೂರ್ಣಮ್ಮ ವರದಿ ಕೂಡ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿ ಹಲವಾರು ವರ್ಷಗಳೇ ಆಗಿವೆ ಆದರೆ,ಯಾವುದೇ ಪ್ರಯೋಜನವಾಗಿಲ್ಲ ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ತಿಮ್ಮಣ್ಣ ಹೊಲ್ಮನಿ ತಾಲೂಕು ದಂಡಾಧಿಕಾರಿ ಪಟ್ಟರಾಜ್ ಗೌಡ್ರು,ಉಪತಹಶಿಲ್ದಾರ್ ಸುರೇಶ ನಾಯಕ್,ವಿಎ ಅಶೋಕ್ ನಾಯಕ್,ಮಡಿವಾಳ ಮಾಚಿದೇವ ಸಂಘದ ಅಧ್ಯಕ್ಷರಾದ ಎಂಆರ್ ಮಾಂತೇಶ್,ಉಪಾಧ್ಯಕ್ಷರು ಮಂಜು ಕಾರ್ಯದರ್ಶಿ ವೆಂಕಟೇಶ್,ಖಜಾಂಚಿ ದೇವರಾಜ್ ಲೋಕೇಶಪ್ಪ ಮಾಜಿ ಅಧ್ಯಕ್ಷರು ಸುರೇಶ್, ಶಾಂತಮ್ಮ ಗ್ರಾಮ ಪಂಚಾಯತಿ ಸದಸ್ಯರು ರಮೇಶ್ ಗ್ರಾಮ ಪಂಚಾಯತಿ ಸದಸ್ಯರು ಇನ್ನು ಅನೇಕ ಸಮಾಜದ ಮುಖಂಡರು ಭಾಗವಹಿಸಿದ್ದರು.
ವರದಿ ಪ್ರಭಾಕರ ಹೊನ್ನಾಳಿ




















