ಕಲಬುರಗಿ:ನೇಹಾ ಹತ್ಯೆ ಕೃತ್ಯವನ್ನು ಎಸಗಿದ ಫಯಾಜ್ ಎಂಬ ವ್ಯಕ್ತಿಗೆ ಗಲ್ಲು ಶಿಕ್ಷೆ ಆಗಬೇಕು ಮತ್ತು ಮುಂದೆ ಇಂತಹ ಯಾವುದೇ ಘಟನೆ ನಡೆಯದಂತೆ ಮಹಿಳೆಯರಿಗೆ ಯುವತಿಯರಿಗೆ ಮತ್ತು ನಾಗರಿಕರಿಗೆ ರಕ್ಷಣೆ ಸಿಗಬೇಕು,ಲವ್ ಜಿಹಾದ್ ಮುಖಾಂತರ ಈ ರೀತಿ ಕೊಲೆ ಮಾಡಿದ್ದು ಇದರ ಹಿಂದೆ ಲವ್ ಜಿಹಾದ್ ಕಂಡುಬರುತ್ತಿದ್ದು,ಪೂರ್ಣ ತನಿಖೆಯನ್ನು ಸೂಕ್ತವಾಗಿ ಮಾಡಿ ಸೂಕ್ತ ನ್ಯಾಯ ಒದಗಿಸಬೇಕು ಈ ಪ್ರಕರಣ ಸಂಬಂಧಿಸಿದಂತೆ ಗೃಹ ಸಚಿವರು ಮುಖ್ಯಮಂತ್ರಿಗಳು ಸತ್ಯಾನು ಸತ್ಯತೆಯನ್ನು ತಿಳಿಯಲಾರದೆ ಪೂರ್ವಾಗ್ರಹ ಪೀಡಿತರಾಗಿ ಕೊಡುತ್ತಿರುವ ಹೇಳಿಕೆಯನ್ನು ನೋಡಿದರೆ ತನಿಖೆಯ ದಾರಿ ತಪ್ಪಿಸುವ ಸಂಶಯ ವ್ಯಕ್ತವಾಗಿದೆ ನಾಗರಿಕ ಸಮಾಜದ ಪರವಾಗಿ ನಾವು ಯಾವುದೇ ರೀತಿಯ ತನಿಖೆ ದಾರಿ ತಪ್ಪದೇ ಸೂಕ್ತ ತನಿಖೆ ಆಗಬೇಕು ಮತ್ತು ನೀವು ಈ ಸಂಬಂಧಪಟ್ಟವರಿಗೆ ಸೂಚನೆ ಕೊಡಬೇಕು ಎಂದು ಹೈದರಾಬಾದ್ ಕರ್ನಾಟಕ ಬೇಡ ಜಂಗಮ ಸಮಾಜ ಸಂಸ್ಥೆ ವತಿಯಿಂದ ತಾಲೂಕ ಅಧ್ಯಕ್ಷರಾಗಿರುವಂತಹ ವಿರೂಪಾಕ್ಷಯ್ಯ ಸ್ವಾಮಿ ಮನವಿ ಪತ್ರ ನೀಡಿದರು.ಈ ಸಂದರ್ಭದಲ್ಲಿ ಪ್ರಮುಖ ಬೇಡ ಜಂಗಮ ಕುಲಬಾಂಧವರು ಉಪಸ್ಥಿತರಿದ್ದರು.
ವರದಿ ಮೊಹಮ್ಮದ್ ಅಲಿ ಚಿತ್ತಾಪುರ