ಹನೂರು : ತಾಲ್ಲೂಕಿನ ಶಾಲಾ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಲು ವಿಧ್ಯಾರ್ಥಿಗಳು ಪಟ್ಟಣವನ್ನು ಆಶ್ರಯಿಸಬೇಕಾಗಿದೆ ಆದರೆ ಸಮಯಕ್ಕೆ ಸರಿಯಾಗಿ ಬಸ್ಸುಗಳ ವ್ಯವಸ್ಥೆಯನ್ನು ಮಾಡಬೇಕಾಗಿದೆ ಎಂದು ವಿದ್ಯಾರ್ಥಿ ಮದನ್ ತಿಳಿಸಿದರು .
ಪಟ್ಟಣದ ಬಸ್ ನಿಲ್ದಾಣದ
ಮುಂಭಾಗದಲ್ಲಿ ನೂರಾರು ವಿದ್ಯಾರ್ಥಿಗಳು ದೂರದ ಊರುಗಳಿಗೆ ಸಂಚಾರ ಮಾಡುವ ಬಸ್ಸುಗಳನ್ನು ತಡೆದು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆ ಮಾಡಿದರು .
ಸ್ಥಳೀಯ ನಿವಾಸಿಗಳು ಮಾತನಾಡಿ ನೂರಾರು ವಿದ್ಯಾರ್ಥಿಗಳು ದಿನ ನಿತ್ಯ ಹಳ್ಳಿಗಳಿಂದ ಕೊಳ್ಳೇಗಾಲ,ಮೈಸೂರು,ಚಾಮರಾಜನಗರ ಇನ್ನಿತರ ಪಟ್ಟಣಗಳ ಕಡೆ ಶಾಲಾ ಕಾಲೇಜಿಗೆ ತೆರಳಲು ಬೆಳಿಗ್ಗೆಯಿಂದಲೂ ಕಾದರೂ ಬಸ್ ನಿಲ್ಲಿಸುತ್ತಿಲ್ಲ ಜೊತೆಗೆ ಬಸ್ ನಿರ್ವಾಹಕರು ಸರಿಯಾಗಿ ಸ್ಪಂದಿಸುತ್ತಿಲ್ಲ ಅಲ್ಲದೆ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಬಸ್ ಬಿಡಬೇಕು ಎಂದು ಒತ್ತಾಯಿಸಿದರು
ಮಾರ್ಟಳ್ಳಿ ಭಾಗದ ವಿದ್ಯಾರ್ಥಿಗಳು ಮಾತನಾಡಿ ಎಲ್ಲಾ ಸರ್ಕಾರಿ ಬಸ್ಸುಗಳಲ್ಲಿ
ಪಾಸ್ ಹೊಂದಿರುವ ವಿದ್ಯಾರ್ಥಿಗಳಿಗೆ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದು ಕೂತರು.ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಗಳು ವಿದ್ಯಾರ್ಥಿಗಳನ್ನು ಬಸ್ ಗೆ ಹತ್ತಿಸುತ್ತಿಲ್ಲ ಎಂದು ದೂರಿದರು.
ವಿದ್ಯಾರ್ಥಿಗಳು ದಿಡೀರ್ ಪ್ರತಿಭಟನೆ ಕಕ್ಕಬಿಕ್ಕಿಯಾದ ಅಧಿಕಾರಿಗಳು:
ಶಾಲಾಕಾಲೇಜಿಗೆ ಹೊರಡಬೇಕಾದ ವಿದ್ಯಾರ್ಥಿಗಳು ದಿಡಿರ್ ಪ್ರತಿಭಟನೆ ನಡೆಸಿದ್ದರಿಂದ ಎಲ್ಲಾ ಅಧಿಕಾರಿಗಳು ಕೆಲ ಸಮಯ ಕಕ್ಕಾಬಿಕ್ಕಿಯಾಗಿ ಪ್ರಯಾಣಿಕರಿಂದ ಶಾಪ ಹಾಕಿಸಿಕೊಂಡ ಘಟನೆ ಶನಿವಾರ ಹನೂರು ಪಟ್ಟಣದಲ್ಲಿ ಜರುಗಿತು.
ರಸ್ತೆಯುದ್ದಕ್ಕೂ ವಾಹನ ದಟ್ಟಣೆಯಾಯಿತು .ವಿದ್ಯಾರ್ಥಿಗಳು
ಕೆ ಎಸ್ ಆರ್ ಟಿ ಸಿ ಬಸ್ ಗಳನ್ನು ತಡೆದ ಪರಿಣಾಮ ರಸ್ತೆಯುದ್ಧಕ್ಕೂ ಹಾಗೂ ಬಸ್ ನಿಲ್ದಾಣದ ತುಂಬಾ ಬಸ್ ಗಳು ಸಾಲುಗಟ್ಟಿ ನಿಂತಿದ್ದು ಸಾಕಷ್ಟು ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ಮಾದಪ್ಪನ ಭಕ್ತಾದಿಗಳು ಹಾಜರಿದ್ದು ತೊಂದರೆ ಅನುಭವಿಸುವಂತಾಯಿತು ಶುಕ್ರವಾರ ಅಮಾವಾಸ್ಯೆಯ ಪ್ರಯುಕ್ತ ಹೆಚ್ಚುವರಿ ಬಸ್ ಬಿಟ್ಟಿದ್ದು ಎಲ್ಲಾ ಬಸ್ ಗಳು ಸಹ ಸಾಲುಗಟ್ಟಿ ನಿಂತಿದ್ದವು ರಾಮಪುರ ಹಾಗೂ ಎಲ್ಲೇಮಾಳ
ಮಾರ್ಗವಾಗಿ ಬರುವ ಕೆ ಎಸ್ ಆರ್ ಟಿ ಸಿ ಬಸ್ ಗಳು ಸಮಯಕ್ಕೆ ಬರುತ್ತಿಲ್ಲ ಅಲ್ಲದೆ ಬರುವ ಬಸ್ ಗಳು ಸಹ ಇತ್ತೀಚಿನ ದಿನಗಳಲ್ಲಿ ರಸ್ತೆ ಸರಿಯಿಲ್ಲ ಎಂಬ ಕಾರಣದಿಂದ ಬರುತ್ತಿಲ್ಲ ಈಗಾಗಿ ನಾವು ಶಾಲಾ ಕಾಲೇಜಿಗೆ ಸೇರುವುದಾದರೂ ಹೇಗೆ ಎಂದು ವಿದ್ಯಾರ್ಥಿಗಳು ಘಟಕ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರು.
ಸ್ಥಳಕ್ಕೆ ಬಂದ ಘಟಕ ವ್ಯವಸ್ಥಾಪಕ ಮುತ್ತುರಾಜು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ ಇದಕ್ಕೆ ಪ್ರತಿಕ್ರಿಯೆ ನೀಡಿದ ಕೆಲವು ಅಧಿಕಾರಗಳ ವಿರುದ್ಧ ಅಸಮಾಧಾನ ಹೊರಹಾಕಿದರು.
ಇದೆ ಸಂದರ್ಭದಲ್ಲಿ ವಿವಿಧ ಗ್ರಾಮಗಳಿಂದ ನೂರಾರು ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು, ಭಾಗವಹಿಸಿದ್ದರು. ವಿದ್ಯಾರ್ಥಿಗಳುಸಮಸ್ಯೆ ಕುರಿತು ಲಿಖಿತ ರೂಪದಲ್ಲಿ ಮನವಿ ಸಲ್ಲಿಸಿದರು. ಬಳಿಕ ಅಧಿಕಾರಿಗಳು ಬಸ್ಸು ವ್ಯವಸ್ಥೆಯನ್ನು ಒದಗಿಸಲಾಗುವುದು,ಪಾಸ್ ಹೊಂದಿರುವ ವಿದ್ಯಾರ್ಥಿಗಳಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ನೂರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪ್ರತಿಭಟನೆ ಕೈಬಿಟ್ಟು ತಮ್ಮ ತಮ್ಮ ಕಾಲೇಜುಗಳಿಗೆ ತೆರಳಿದರು , ಪ್ರತಿಭಟನೆಯ
ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಹನೂರು ಪೊಲೀಸ್ ಠಾಣೆಯ ಪೊಲೀಸರು ಹಾಜರಿದ್ದು ಶಾಂತಿ ಸುವ್ಯವಸ್ಥಿತೆಯನ್ನು ಕಾಪಾಡಿಕೊಂಡರು .
ವರದಿ: ಉಸ್ಮಾನ್ ಖಾನ್



















