ಯಾದಗಿರಿ/ ಗುರುಮಿಠಕಲ್ : ತಾಲೂಕಿನ ಪುಟಪಾಕ್ ಗ್ರಾಮದಲ್ಲಿ ಆರೋಗ್ಯ ಇಲಾಖೆಯಿಂದ ಆಯೋಜಿಸಿದ ಅತಿಸಾರ ಭೇದಿ ನಿಯಂತ್ರಣ ಕಾರ್ಯಕ್ರಮವನ್ನು ಆರೋಗ್ಯ ನೀರಿಕ್ಷಣಾ ಅಧಿಕಾರಿಗಳಾದ ಕಾಶಿನಾಥ ಅವರು ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಅತಿಸಾರ ಭೇದಿಯು ನವಜಾತು ಶಿಶುಗಳಲ್ಲಿ ಕಂಡುಬಂದರೆ ORS, ಮತ್ತು ಜಿಂಕ್ ಮಾತ್ರೆಗಳು 14 ದಿನಗಳ ವರೆಗೆ ತೆಗೆದುಕೊಳ್ಳಬೇಕು. ಸಾಬೂನು ಮತ್ತು ನೀರಿನಿಂದ ಕೈಗಳನ್ನು ಚೆನ್ನಾಗಿ ತೊಳೆಯಬೇಕು, ಶುದ್ಧ ನೀರನ್ನು ಕುಡಿಯಬೇಕು, ಶೌಚಾಲಯಗಳನ್ನು ಬಳಸಬೇಕು ಹಾಗೂ ಮಗುವಿಗೆ ತಾಯಿಯ ಎದೆಯ ಹಾಲನ್ನೇ ಕುಡಿಸಬೇಕು ಮತ್ತು ರೋಟವೈರಸ್ ಮತ್ತು ದಡರ ಲಸಿಕೆಯನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕಾಗುತ್ತೆ ಮತ್ತು ಈ ಎಲ್ಲವೂ ಮುಂಜಾಗ್ರತೆ ವಹಿಸಿಕೊಳ್ಳಬೇಕಾಗುತ್ತೆ ಎಂದು ಸಾರ್ವಜನಿಕರಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮುದಾಯ ಆರೋಗ್ಯ ಅಧಿಕಾರಿಗಳಾದ ಹೇಮಸಿಂಗ್ ರಾಠೋಡ್ ಮತ್ತು ಆಶಾ ಕಾರ್ಯಕರ್ತೆಯರಾದ ಅನಿತಾದೇವಿ, ಭಾಗ್ಯಮ್ಮ, ಭಾಗ್ಯಲಕ್ಷೀ ಮತ್ತು ಅನುರಾಧಾ ಅವರು ಉಪಸ್ಥಿತರಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ



















