
ವಿಜಯಪುರ / ತಾಳಿಕೋಟೆ:
ಲೋಕಸಭೆಯ ವಿರೋಧ ಪಕ್ಷದ ನಾಯಕರು ಸನ್ಮಾನ್ಯ ಶ್ರೀ ರಾಹುಲ್ ಗಾಂಧಿ ಅವರ ಜನ್ಮದಿನದ ನಿಮಿತ್ತವಾಗಿ ಇಂದು ತಾಳಿಕೋಟಿಯ ಸರಸ್ವತಿ ವಿದ್ಯಾಮಂದಿರ ಶಾಲೆಯ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ತಾಳಿಕೋಟೆ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಆಸೀಫ್ ಕೆಂಭಾವಿ ಅವರಿಂದ ನೋಟ್ ಬುಕ್ ಮತ್ತು ಪೆನ್ನುಗಳನ್ನು ವಿತರಿಸಿ ಸನ್ಮಾನ್ಯ ಶ್ರೀ ರಾಹುಲ್ ಗಾಂಧಿ ಅವರ ಜನ್ಮದಿನ ಆಚರಿಸಲಾಯಿತು.
ಈ ಸಂದರ್ಭದಲ್ಲಿ ತಾಳಿಕೋಟೆ ಬ್ಲಾಕ್ ಯುವ ಕಾಂಗ್ರೆಸ್ನ ಅಧ್ಯಕ್ಷರಾದ ಆಸೀಫ್ ಕೆಂಭಾವಿ ಮಾತನಾಡುತ್ತಾ ಮುಂದಿನ ದಿನಮಾನಗಳಲ್ಲಿ ದೇಶದ ಪ್ರಧಾನಿ ಮಂತ್ರಿಯಾಗಿ ಶ್ರೀ ರಾಹುಲ್ ಗಾಂಧಿ ಅವರು ಹೊರಹೊಮ್ಮಿಲಿದ್ದಾರೆಂದು ನಾನು ಈ ಸಂದರ್ಭದಲ್ಲಿ ಹೇಳಲು ಇಚ್ಚಿಸುತ್ತೇನೆ ಎಂದರು.
ಇಂದಿನ ಕಾರ್ಯಕ್ರಮದಲ್ಲಿ ಪಲ್ಲವಿ ಕಡಕೋಳ ಸರಸ್ವತಿ ವಿದ್ಯಾ ಮಂದಿರದ ಮುಖ್ಯ ಶಿಕ್ಷಕರು ,
ಖಾಜಾಪಟೇಲ ಬಿರಾದಾರ್ ಯುವ ಕಾಂಗ್ರೆಸ್ ಉಪಾಧ್ಯಕ್ಷರು ,
ಗೋಪಾಲ ಕಟ್ಟಿಮನಿ ಅಂಬೇಡ್ಕರ್ ಸೇನೆ ಅಧ್ಯಕ್ಷರು, ಅಯಾಜ್ ಸೋಲಾಪುರ್ ,
ಆಬೀದ್ ಲಾಹೋರಿ,
ಮಡು ಚಲವಾದಿ,
ಶಾಹಿಲ್ ಜಮಖಂಡಿ,
ಶಾಹಿದ್ ಶಿವಣಗಿ ಹಾಗೂ ಶಿಕ್ಷಕರು ಮತ್ತು ಮುದ್ದು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ ಉಸ್ಮಾನ್ ಬಾಗವಾನ



















