ಜಗದ ಅಂಧಕಾರ ಕಳೆದ ದೀಪ
ಕಾಮಾಲೆ ಕಣ್ಣುಗಳಿಗೆ ಹಾಕಿದೆ ಧೂಪ
ಜನರು ಭವಸಾಗರದಿ ಮುಳುಗಿದ., ಪಾಪ
ತೊಳೆಯಲು ಬಂದ ಶಿಶುನಾಳ ಶರೀಫ.||೧||
ತತ್ವಪದ ಸಾಹಿತ್ಯದ ಜನಕ
ಅರಿವಿನಂಬಲಿ ನೀಡಿದ ಮೂಢ ಮನಕ
ಜಾತಿವಾರಿನ ಕಳೆ ತೆಗೆದ ಕಾರ್ಮಿಕ
ಹಿಂದೂ ಮುಸ್ಲಿಂ ಸಾಮರಸ್ಯದ ಪ್ರತೀಕ.||೨||
ಕೆಟ್ಟ ಮಳೆಯಲ್ಲಿ ಬೆಳಕು ತೋಯದು
ಶುದ್ಧ ಭಾವದಲ್ಲಿ ಕೊಳಕು ಕಾಣದು
ಜೀವನದ ಸಂಕಲ್ಪ ಭಕ್ತಿ ಸಾಧನೆಯು
ತೋರುವುದು ಗುರು ಚರಣ ಸರಿ ಹಾದಿಯು.||೩||
ಗುರು ಗೋವಿಂದ ಭಟ್ಟರ ಪಡೆದ
ಕರ್ನಾಟಕದ ಕಬೀರ ಎಂದೆನಿಸಿದ
ಸಂತ ಶಿಶುನಾಳ ಶರೀಫ
ನಿನ್ನ ಆಳಕ್ಕೆ ಯಾರಿಲ್ಲ ಸಮೀಪ.||೪||
ರಚನೆ: ಬಸವರಾಜ ಐಲಿ. ಶಿಕ್ಷಕರು
, ಸ.ಮಾ.ಹಿ.ಪ್ರಾ.ಶಾಲೆ ಹುಲಿಹೈದರ
ಮೊ.ಸಂಖ್ಯೆ:- 8197511245/ 9591749868



















