ಕೊಪ್ಪಳ/ ಯಲಬುರ್ಗಾ: ಬಸವಾದಿ ಶರಣರಾದ ಕುರುಬರ ಗೊಲ್ಲಾಳೇಶ್ವರ ಹಾಗೂ ಕುಂಬಾರ ಗುಂಡಯ್ಯ ಅವರ ಶರಣೋತ್ಸವ ಕಾರ್ಯಕ್ರಮಕ್ಕೆ ಯೋಗಮಾತೆ ಓಂಕಾರೇಶ್ವರ ಮಾತಾಜಿ ಅವರು ಪುಷ್ಪ ಅರ್ಪಿಸುವ ಮೂಲಕ ಚಾಲನೆ ನೀಡಿ , ಮಾತನಾಡಿ ಶರಣರ ಶರಣೆಯರ ವಚನಗಳನ್ನು ಆಲಿಸುವುದರಿಂದ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯಲು ಸಾದ್ಯ ಎಂದರು. ಸತ್ಪುರಷರ , ಯೋಗಿಗಳ ,ಜೀವನ ಚರಿತ್ರೆಯನ್ನು ನಾವು ಅರಿತುಕೊಳ್ಳಲು ಬಸವಾದಿ ಶರಣರ ಶರಣೋತ್ಸವದಲ್ಲಿ ಭಾಗವಹಿಸಿದಾಗ ಸರ್ವ ಶರಣರ ವಿಚಾರಧಾರೆಗಳನ್ನು ಅರಿತುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಎಂದು ಪಟ್ಟಣದ ಈಶ್ವರಿ ವಿಶ್ವವಿದ್ಯಾಲಯದ ಬ್ರಹ್ಮ ಕುಮಾರಿ ಗೀತಕ್ಕ ಅಕ್ಕನವರು ಪತಂಜಲಿ ಯೋಗ ಸಮಿತಿಯ ಸಹಕಾರದಲ್ಲಿ ಜೂ.೨೫ ರಂದು ಜರುಗಿದ ಬಸವ ಸಮಿತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಶರಣರ ಜೀವನ ಚರಿತ್ರೆಯ ಬಗ್ಗೆ ಶೈಲಾಶ್ರೀ ಪಾಟೀಲ ಅವರು ಮಾತನಾಡಿದರು. ಯಲಬುರ್ಗಾದ ಬಸವ ಸಮಿತಿ ಅಧ್ಯಕ್ಷ ಸಂಗಣ್ಣ ಟೆಂಗಿನಕಾಯಿ, ಶರಣರಾದ ಶೇಖರಗೌಡ ಉಳ್ಳಾಗಡ್ಡಿ, ಮಲ್ಲನಗೌಡ ಪಾಟೀಲ ಸೇರಿದಂತೆ ಇತರರು ಮಾತನಾಡಿದರು. ಶರಣರಾದ ವೀರಣ್ಣ ನಿಂಗೋಜಿ, ಶರಣಬಸಪ್ಪ ದಾನಕೈ, ಚೆನ್ನಪ್ಪ ಕುಂಬಾರ, ಶಿವಪ್ಪ ಶಾಸ್ತ್ರೀ ಹಡಪದ , ಮೀನಾಕ್ಷಮ್ಮ ಮಲಕಸಮುದ್ರ , ಮುದಕಪ್ಪ ಸಜ್ಜನ, ಸಿದ್ದಲಿಂಗಪ್ಪ ಶ್ಯಾಗೋಟಿ, ಹನುಮಶೆಟ್ಟಿ ಸಿದ್ದಯ್ಯ ಕೊಣ್ಣೊರು, ಪರಶುರಾಮ ಹೊಸಮನಿ, ಬಸವರಾಜ ಹಳ್ಳಿ, ಮಾಹಗುಂಡಪ್ಪ ಕಟಟಗೇರಿ , ಬಸವರಾಜ ಮುಗಳಿ,ಪಕೀರಪ್ಪ ಗಾಣಗೇರ , ವೀರೇಶ ಟೆಂಗಿನಕಾಯಿ, ಶರಣಪ್ಪ ಹವಳದ , ಗವಿಸಿದ್ಧಪ್ಪ ಕುಂಬಾರ , ಶಿವಕುಮಾರ ಕುಂಬಾರ, ಉಮೇಶ ಕುಂಬಾರ ಸೇರಿದಂತೆ ಇತರರು ಉಪಸ್ಥಿತರಿದ್ದರು. ಜೂ.೨೬ ರಂದು
ಬೆಳಿಗ್ಗೆ 6 ಘಂಟೆಗೆ ಇಷ್ಟಲಿಂಗಪೂಜೆಯನ್ನು ಹಲವಾರು ಶರಣ ಶರಣೆಯರಿಗೆ ಪೂಜಾ ವಿಧಿವಿಧಾನಗಳನ್ನು ಮಾತಾಜಿರವರು ಹೇಳಿಕೊಟ್ಟರು. ಬಸವರಾಜ ಕಪ್ಪತ್ತಗುಡ್ಡ ಅವರು ಪ್ರಾರ್ಥಿಸಿದರು. ಶರಣ ದೇವಪ್ಪ ವಾಲ್ಮೀಕಿ ಅವರು ವಂದಿಸಿದರು. ನಂತರ ಅನ್ನ ಪ್ರಸಾದ ಜರುಗಿತು. ಬಸವ ಸಮಿತಿ, ಈಶ್ವರಿ ವಿದ್ಯಾಲಯದ ಬ್ರಹ್ಮಕುಮಾರಿ ಅಕ್ಕನವರು, ಪತಂಜಲಿ ಯೋಗ ಸಮಿತಿ ಸರ್ವ ಸದಸ್ಯರು ಭಾಗವಹಿಸಿದ್ದರು.
- ಕರುನಾಡ ಕಂದ



















