ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬಂಜಾರ, ಭೋವಿ, ಕೊರಚ, ಕೊರಮ ಸಮಾಜಕ್ಕೆ ಶೇ. 6%ರಷ್ಟು ಮೀಸಲಾತಿ ನೀಡುವಂತೆ ಸುರೇಶ ಬಳೂಟಗಿ ಒತ್ತಾಯ

ಕೊಪ್ಪಳ/ ಕುಕನೂರು : ಒಳ ಮೀಸಲಾತಿ ಸಮೀಕ್ಷೆ ವೈಜ್ಞಾನಿಕವಾಗಿ ನಡೆದಿಲ್ಲ ಎಂದು ಕರ್ನಾಟಕ ಗೋರಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಬಂಜಾರ ಸಮಾಜದ ಮುಖಂಡ ಸುರೇಶ ಬಳೂಟಗಿ ಆರೋಪಿಸಿದರು.

ಅವರು ಗುರುವಾರದಂದು ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈಗ ನಡೆಸುತ್ತಿರುವ ಎಸ್ ಸಿ ಸಮುದಾಯದ ಒಳ ಮೀಸಲಾತಿ ಸಮೀಕ್ಷೆ ಸಮರ್ಪಕವಾಗಿರದೆ ನಮ್ಮ ಸಮಾಜದವರು ಈ ಸಮೀಕ್ಷೆಯಿಂದ ಹೊರಗುಳಿದರೆ ಸರಕಾರಕ್ಕೆ ಸಮಾಜದವರ ಅಂಕಿ ಅಂಶಗಳ ಮಾಹಿತಿ ಸಿಗುವುದಿಲ್ಲ, ಇದರಿಂದ ಸಮಾಜದ ಜನ ಸಂಖ್ಯೆ ಕಡಿಮೆ ತೋರಿಸಿದಲ್ಲಿ ಒಳ ಮೀಸಲಾತಿಯಲ್ಲಿ ಸಮುದಾಯಕ್ಕೆ ಅನ್ಯಾಯವಾಗುತ್ತದೆ ಎಂದರು.

ನಮ್ಮ ಜನಾಂಗದವರಲ್ಲಿ ಅನಕ್ಷರಸ್ಥರ ಸಂಖ್ಯೆ ಬಹಳ ಇರುವುದರಿಂದ ಅವರು ಈ ಸಮೀಕ್ಷೆಯಲ್ಲಿ ಸರಿಯಾಗಿ ಭಾಗಿಯಾಗಿರುವುದಿಲ್ಲ ಎಂದರು.

ಸಿ. ಎಂ. ಸಿದ್ದರಾಮಯ್ಯನವರ ನೇತೃತ್ವದ ಸರಕಾರ ರಾಜ್ಯದಲ್ಲಿ ಒಳ ಮೀಸಲಾತಿ ಜಾರಿ ಮಾಡಲು ಹೊರಟಿದ್ದು ಇದರಿಂದ ನಮ್ಮ ಭೋವಿ, ಕೊರಚ, ಕೊರಮ, ಬಂಜಾರ ಸಮುದಾಯದವರಿಗೆ ಬಹಳ ಅನ್ಯಾಯವಾಗುತ್ತದೆ ಎಂದು ತಿಳಿಸಿದರು.

ತಾಂಡಾ ಅಭಿವೃದ್ದಿ ನಿಗಮಗಳು ಕೇವಲ ಹೆಸರಿಗೆ ಮಾತ್ರ ಇದ್ದು, ಅವುಗಳಲ್ಲಿ ಅನುದಾನದ ಕೊರತೆ ಸಾಕಷ್ಟಿದೆ ಒಳ ಮೀಸಲಾತಿ ಸಮೀಕ್ಷೆ ಇಲ್ಲಿಗೆ ನಿಲ್ಲಿಸಿ ಎಂದ ಅವರು ಬಂಜಾರ, ಭೋವಿ, ಕೊರಮ, ಕೊರಚ ಸಮಾಜದವರಿಗೆ ಶೇ. 6% ಮೀಸಲಾತಿ ನಿಗದಿ ಮಾಡಿ ನಮ್ಮ ಸಮಾಜಗಳಿಗೆ ನ್ಯಾಯ ಒದಗಿಸುವ ಕೆಲಸವನ್ನು ಮಾಡಬೇಕು ಎಂದು ಈ ವೇಳೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬಂಜಾರ ಸಮಾಜದ ಮುಖಂಡರಾದ ಸುರೇಶ ಬಳೂಟಗಿ, ಓಬಣ್ಣ ಚವ್ಹಾಣ, ಕುಮಾರ ಬಳಗೇರಿ, ಯಮನೂರಪ್ಪ ಭಾನಾಪೂರ, ಪ್ರಕಾಶ ಬಳಗೇರಿ, ಲಿಂಬಣ್ಣ ನಾಯಕ, ಹನುಮಂತ ಚವ್ಹಾಣ ಇನ್ನಿತರ ಮುಖಂಡರು ಇದ್ದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!