ಚಾಮರಾಜನಗರ/ ಗುಂಡ್ಲುಪೇಟೆ : ಕರ್ನಾಟಕ ಕಾವಲು ಪಡೆಯ ವತಿಯಿಂದ ಇಂದು ವೈದ್ಯರ ದಿನಾಚರಣೆಯ ಅಂಗವಾಗಿ ಗುಂಡ್ಲುಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರಿಗೆ ಗುಲಾಬಿ ಹೂವನ್ನು ಕೊಡುವ ಮುಖಾಂತರ ವೈದ್ಯರಿಗೆ ಶುಭ ಕೋರಲಾಯಿತು. ಈ ಸಂದರ್ಭದಲ್ಲಿ ಕಾವಲು ಪಡೆಯ ತಾಲ್ಲೂಕು ಅಧ್ಯಕ್ಷರಾದ ಎ.ಅಬ್ದುಲ್ ಮಾಲಿಕ್ ಮಾತನಾಡಿ ವೈದ್ಯರ ಕರ್ತವ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ಕನ್ನಡಪರ ಹಿರಿಯ ಹೋರಾಟಗಾರರಾದ ಬ್ರಹ್ಮಾನಂದ್ ಮಾತನಾಡಿ ಆಸ್ಪತ್ರೆಗೆ ಬರುವವರು ವೈದ್ಯರಿಗೆ ಗೌರವಿಸಬೇಕು ಎಂದರು ತಾಲ್ಲೂಕು ಗೌರವಾಧ್ಯಕ್ಷರಾದ ರಾಮೇಗೌಡ ಹಾಗೂ ಮಿಮಿಕ್ರಿ ರಾಜು ವೈದ್ಯರಿಗೆ ಶುಭಕೋರಿದರು.
ವರದಿ ಗುಂಡ್ಲುಪೇಟೆ ಕುಮಾರ್



















