ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪ್ರೇಮ, ಕಾಮ ಮತ್ತು ಬದುಕು…

ಬದುಕು ಸುಂದರ ಪಯಣ ಮನುಕುಲ ಉಳಿದು ಬೆಳೆಯಲು ಪ್ರೇಮವು ಬೇಕು ಪ್ರೇಮವೆಂದರೆ ಕಾಮವೆಂದು ತಿಳಿದಿರುವವರೆ ಅಧಿಕ. ಆದರೆ ಅವೆರಡೂ ತಮ್ಮದೇ ಆದ ಬೇರೆ ಅರ್ಥವನ್ನು ಹೊಂದಿವೆ. ಪ್ರೇಮವೆಂದರೆ ಬರೀ ಗಂಡು ಹೆಣ್ಣಿನ ಮಧ್ಯೆ ಆಗುವ ಆಕರ್ಷಣೆ ಅಲ್ಲ. ಪ್ರೇಮವು ವಿಶಾಲವಾದ ಅರ್ಥ ಹೊಂದಿದೆ. ಪ್ರೇಮ ವಿವಿಧ ಅರ್ಥಗಳನ್ನು ಹೊಂದಿದೆ. ತಾಯಿ , ತಂದೆ ಮತ್ತು ಮಕ್ಕಳ ನಡುವೆ ವಾತ್ಸಲ್ಯ ಪ್ರೇಮ ಬೆಸೆದು ಕೊಂಡಿರುತ್ತದೆ. ನಿಷ್ಕಲ್ಮಷ ಸಂಬಂಧಗಳಲ್ಲಿ ಬಂಧುತ್ವ ಪ್ರೇಮ ಏರ್ಪಟ್ಟಿರುತ್ತದೆ. ಭಗವಂತ ಮತ್ತು ಭಕ್ತರ ನಡುವೆ ಅವಿನಾಭಾವವಾದ ಪ್ರೇಮದ ಬಂಧ ಇರುತ್ತದೆ. ಇನ್ನು ಪರಿಸರವನ್ನು ಇಷ್ಟ ಪಟ್ಟು ಅದರ ಬಗ್ಗೆ ಕಾಳಜಿವಹಿಸುವರಲ್ಲಿ ಪರಿಸರ ಪ್ರೇಮ ಇರುತ್ತದೆ. ಪುಸ್ತಕವನ್ನು ಪ್ರೀತಿಸುವವರು ಪುಸ್ತಕ ಪ್ರೇಮಿಗಳಾಗಿರುತ್ತಾರೆ . ಸಾಕು ಪ್ರಾಣಿಗಳಾದ ನಾಯಿ, ಹಸು, ಬೆಕ್ಕು, ಇತ್ಯಾದಿಗಳನ್ನು ಪ್ರೇಮಿಸುವ ಪ್ರಾಣಿ ಪ್ರೇಮಿಗಳು ಇರುತ್ತಾರೆ . ಕಲಾವಿದರು ಮತ್ತು ಕಲಾ ಪೋಷಕರು ಕಲಾ ಪ್ರೇಮಿಗಳು ಇರುತ್ತಾರೆ. ದೇಶಾಭಿಮಾನಿಗಳು ರಾಷ್ಟ್ರ ಪ್ರೇಮಿಗಳಾಗಿರುತ್ತಾರೆ , ಅಂತೆಯೇ ತಮ್ಮ ಇಷ್ಟದ ಭಾಷೆ ಬಗ್ಗೆ ಆಸಕ್ತಿ ಅಭಿರುಚಿ ಹೊಂದಿರುವ ಭಾಷಾಪ್ರೇಮಿಗಳು ಇರುತ್ತಾರೆ. ಈ ಎಲ್ಲ ಪ್ರೇಮಗಳು ಬದುಕಿಗೆ ಪೂರಕವಾಗಿ ನೆಲೆಗೊಂಡಿವೆ. ಗಂಡು ಹೆಣ್ಣಿನ ಒಲವಿನ ಸೆಳೆತದ ಅನುರಾಗದ ಪ್ರೇಮವು ಅರಳಿರುತ್ತದೆ. ಪ್ರತಿ ಫೆಬ್ರವರಿ 14 ರಂದು ಪ್ರೇಮಿಗಳ ದಿನವಾಗಿ ಆಚರಿಸಲಾಗುತ್ತದೆ. ಅಂದು ಮಾತ್ರ ಸಂಭ್ರಮಿಸುತ್ತಾರೆ. ನಿಜ ಪ್ರೇಮಿಗಳಿಗೆ ಪ್ರತಿ ದಿನದ ಪ್ರತಿ ಘಳಿಗೆಯೂ ಪ್ರೇಮ ಇರುತ್ತದೆ. ಕೆಂಪು ಗುಲಾಬಿ ಪ್ರೇಮದ ಸಂಕೇತವೆನ್ನುತ್ತಾರೆ. ಪ್ರೀತಿಯಿಂದ ಯಾವ ಹೂವು ಕೊಟ್ಟರೂ ಹಿತವಾಗಿರುತ್ತದೆ.
ಇನ್ನು ಒಮ್ಮುಖ ಪ್ರೇಮದ ಬಗ್ಗೆ ಹೇಳುವುದಾರೆ ಒಬ್ಬರಿಗೆ ಮತ್ತೊಬ್ಬರ ಮೇಲೆ ಪ್ರೇಮಾಂಕುರವಾಗಿರುತ್ತದೆ, ಆದರೆ ಅವರು ಪ್ರೇಮಿಸುವ ವ್ಯಕ್ತಿಗೆ ಅವರ ಮೇಲೆ ಪ್ರೇಮವಾಗಿರುವುದಿಲ್ಲ. ಇದನ್ನು ಕೆಲವರು ಅರ್ಥ ಮಾಡಿಕೊಂಡು ಅಲ್ಲಿಗೆ ಸುಮ್ಮನಾಗುತ್ತಾರೆ ಇದು ಒಳ್ಳೆಯ ತೀರ್ಮಾನ ಅಂತಾನೇ ಹೇಳಬಹುದು. ಇನ್ನೂ ಕೆಲವರು ಒತ್ತಾಯ ಮಾಡುತ್ತಾರೆ, ಇನ್ನೂ ಕೆಲವರಂತೂ ಜೀವನ ಪೂರ್ತಿ ಅವರ ನೆನಪಿನಲ್ಲೇ ಕೊರಗುತ್ತಿರುತ್ತಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮೂಢರು ಇರುತ್ತಾರೆ. ಬದಕು ಬಂದಂತೆ ಸ್ವೀಕರಿಸಬೇಕು ಪ್ರೇಮವಾಗುವುದು ಸಹಜ ಅದನ್ನು ಮನಸಲ್ಲಿ ಅದುಮಿಟ್ಟುಕೊಂಡು ತಮ್ಮೊಳಗೆ ಕೊಲೆ ಮಾಡಬಹುದು. ಸಾಧ್ಯವಾದರೆ ನಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳಬೇಕು, ತಮ್ಮ ಪ್ರೇಮವನ್ನು ಒಪ್ಪುವ ಬಿಡುವ ನಿರ್ಧಾರ ಅವರಿಗೆ ಬಿಡಬೇಕು. ಇತ್ತೀಚೆಗೆ ಸಿನಿಮಾದ ಪ್ರಭಾವದಿಂದ ಓದುವ ಕಾಲೇಜು ದಿನದಲ್ಲಿ ಪ್ರೇಮದ ಸುಳಿಗೆ ಬಿದ್ದು ಬದುಕು ಮುರಾಬಟ್ಟೆ ಮಾಡಿಕೊಂಡಿರುತ್ತಾರೆ.
ಅನುರಾಗದ ಪ್ರೇಮವು ಮದುವೆಗೆ ಮುಂಚಿನ ಹುಡುಗ ಹುಡುಗಿಯ ಅಥವಾ ಗಂಡು ಹೆಣ್ಣಿನ ದೈಹಿಕ ಆಕರ್ಷಣೆ ಅಷ್ಟೇ ಅಲ್ಲ ,ಮನಸು ಮನಸುಗಳ ಮಧುರ ಸಮ್ಮಿಲನವಾಗಿದೆ .ಪ್ರೇಮ ದೇಶ ಭಾಷೆ ಎಲ್ಲೆಯನ್ನು ಮೀರಿರುತ್ತದೆ. ನಮಗೆ ಅರಿವಿಲ್ಲದಂತೆ ನಮ್ಮೊಳಗೇ ಅಂಕುರವಾಗುತ್ತದೆ. ಮದುವೆಯಾಗಿರುವ ಸತಿ ಪತಿಗಳ ಒಲವು ಅರಿತು ಬೆರೆತು ಕೊನೆತನಕ ನವನವೋಲ್ಲಾಸವಾಗಿ ಇರಬೇಕು.

ಕಾಮವೆಂದರೆ ಕೇವಲ ತೃಷೆ ಮಾತ್ರವಲ್ಲ. ಕಾಮ ಪದವು ಬಯಕೆ ಎಂಬ ಅರ್ಥವನ್ನು ಬಿಂಬಿಸುತ್ತದೆ. ಲೈಂಗಿಕತೆ ಕಾಮದ ಒಂದು ಮಜಲು. ಕಾಮವು ಪಾಪವಲ್ಲ, ಮನುಕುಲ ಉಳಿದು ಬೆಳೆಯಲು ಲೈಂಗಿಕ ಕಾಮ ಬೇಕು ಅದನ್ನು ಧರ್ಮ ಮಾರ್ಗದಲ್ಲಿ ಪೂರೈಸಿ ಕೊಳ್ಳಬೇಕು. ಗಂಡ ಹೆಂಡತಿಯ ಲೈಂಗಿಕ ಕಾಮವು ಸಂತಾನ ಪ್ರಕ್ರಿಯೆ ಮುಗಿದ ನಂತರ ಮುಂದುವರಿಸಬಹುದು. ಅದುವೇ ಮನೋದೈಹಿಕ ಬಂಧವಾಗಿದೆ. ಆದರೆ ಅದು ಚಟವಾಗಬಾರದು. ಪರಸ್ಪರ ಸಹಸ್ಪಂದನ ಇರಬೇಕು. ಮಾಸಿಕ ಋತುವಾದಾಗ ಕನಿಷ್ಠ 5 ದಿನಗಳ ಅಂತರವಿರಬೇಕು. ಗಂಡ ಹೆಂಡತಿ ಇಬ್ಬರಲ್ಲಿ ಅನಾರೋಗ್ಯವಿದ್ದಾಗ ಲೈಂಗಿಕ ಕ್ರಿಯೆ ನಡೆಸಬಾರದು.
ಇತ್ತೀಚೆಗೆ ಎಗ್ಗಿಲ್ಲದಂತೆ ಎಲ್ಲೆಡೆ ಕೆಟ್ಟ ಕಾಮ ತಾಂಡವಾಡುತ್ತಿದೆ.‌ ಸಾಮಾಜಿಕ ಜಾಲತಾಣಗಳು ಇದಕ್ಕೆ ಹೊರತಾಗಿಲ್ಲ .ಮಹಿಳೆಯರಿಗೆ ,ಹುಡುಗಿಯರಿಗೆ ಪ್ರೇಮ ಪ್ರೀತಿಗಾಗಿ ಪೀಡಿಸುತ್ತಿರುತ್ತಾರೆ. ಆಸೆ ಆಮಿಷ ತೋರಿಸಿ ಬಳಸಿಕೊಂಡು ಬಾಳೆ ಎಳಲೆಯಂತೆ ಉಂಡು ಬಿಸಾಡುವ ಅವಿವೇಕಿಗಳು ಇರುತ್ತಾರೆ, ಇದರಿಂದ ಜೀವನದಲ್ಲಿ ಜೋಪಾನವಾಗಿ ನಡೆಯಬೇಕು. ಕಾಲೇಜು ಹುಡುಗ ಹುಡುಗಿಯರು ಕೇವಲ ಮೋಜು ಮಸ್ತಿ ಗಾಗಿ ಟೈಮ್ ಪಾಸ್ ಲವ್ ಮಾಡಿ ಮೋಸದ ಬಲೆಗೆ ಬಿದ್ದು ಜೀವನ ಹಾಳು ಮಾಡಿಕೊಳ್ಳುತ್ತಿರುವುದು ನೇಣಿಗೆ, ಫ್ಯಾನಿಗೆ,ಆತ್ಮಹತ್ಯೆ ಗಳ ದೊಡ್ಡ ದುರಂತಗಳಿಗೆ ಶರಣರಾಗುತ್ತಿದ್ದಾರೆ.
ಹೆಣ್ಣು ಎಂದರೆ ಕೇವಲ ಭೋಗದ ವಸ್ತುವಾಗಿ ನೋಡುವ ಪುರುಷ ಶಿಖಾಮಣಿಗಳು ಇದ್ದಾರೆ. ತೀಟೆ ತೀರಿಸಿಕೊಳ್ಳಲು ಹಾಗೂ ಮನೆಯ ಚಾಕರಿ ಮಾಡಲು ಮಾತ್ರ ಮದುವೆಯಾಗಿರುತ್ತಾರೆ.
ಎದುರಿಗೆ ಗಂಡ ಹೆಂಡತಿ ಪ್ರೇಮದಿಂದ ಇರುವಂತೆ ನಾಟಕವಾಡುತ್ತಾರೆ. ಆದರೆ ಮುಖವಾಡ ಹಾಕಿ ಮನಸಿನಲ್ಲಿ ಮತ್ತೊಬ್ಬರನ್ನು ಪ್ರೇಮಿಸುತ್ತಿರುತ್ತಾರೆ. ಜೀವನದಲ್ಲಿ ಅನುರಾಗ ಪ್ರೇಮವು ತಿಳಿಯದಂತೆ ಆಗುವುದು ಸಹಜ ಹಾಗಂತ ಸಿಕ್ಕ ಸಿಕ್ಕವರ ಮೇಲೆಲ್ಲ ಸೆಳೆತಗಳಿಗೆ ಒಳಗಾಗ ಬಾರದು. ಪ್ರೇಮಿಸಿದ ಮೇಲೆ ಮದುವೆಯಾಗಿ ಸಾಮರಸ್ಯ ಸಂಸಾರ ಸಾಗಿಸಬೇಕು.
ಅದೆಷ್ಟೋ ಗಂಡ ಹೆಂಡತಿಯರು ದೈಹಿಕವಾಗಿ ಮಾತ್ರ ಬೆರೆಯುತ್ತಾರೆ. ಅನೈತಿಕ ಸಂಬಂಧದ ಸುಳಿಯಲ್ಲಿ ಸಿಕ್ಕಿ ಒಳ್ಳೆಯ ಸಂಬಂಧಕ್ಕೆ ಮಸಿ ಬಳಿಯುತ್ತಾರೆ.
ಇದು ಸಮಾಜಕ್ಕೆ ಮಾರಕವಾಗುತ್ತಿದೆ. ಇದನ್ನು ತಡೆಯಬೇಕಾದರೆ ಪುರುಷರು ತನ್ನ ಪತ್ನಿಗೆ ಮಾತ್ರ ಪತಿಯಾಗಿ ಉಳಿದ ಸ್ತ್ರೀಯರನ್ನು ತಾಯಿ, ಸಹೋದರಿ, ಮಗಳಂತೆ ಕಾಣಬೇಕು. ಅಂತೆಯೇ ಮಹಿಳೆಯರೂ ತನ್ನ ಪತಿಗೆ ಮಾತ್ರ ಸತಿಯಾಗಿ ಉಳಿದ ಪುರುಷರನ್ನು ತಂದೆ, ಸಹೋದರಿ, ಮಗನಂತೆ ಕಾಣಬೇಕು.
ಇನ್ನೂ ಗಂಡು ಹೆಣ್ಣಿನ ಮಧ್ಯೆ ಯಾವ ರೀತಿಯ ಸಂಬಂಧ ಇದೆ ಎಂದು ಸರಿಯಾಗಿ ತಿಳಿಯದೆ ಅವರು ಪ್ರೇಮಿಗಳು ಅಥವಾ ಅವರಿಬ್ಬರ ನಡುವೆ ಅನೈತಿಕ ಸಂಬಂಧವಿದೆ ಎಂದು ಉಹಾ ಪೋಹಗಳ ಅಲೆ ಎಬ್ಬಿಸಿ ಅನುಮಾನದ ಕಟ್ಟುಕಥೆ ಕಟ್ಟಿ ಒಳ್ಳೆಯ ಸಂಬಂಧವನ್ನು ಹಾಳು ಮಾಡುತ್ತಿದ್ದಾರೆ.
ಮತ್ತೊಬ್ಬರ ಚಾಡಿ ಮಾತು ಕೇಳಿ ತಮ್ಮ ನವಿರಾದ ಬಾಳನ್ನು ನರಕ ಮಾಡಿಕೊಂಡ ಸಾಕಷ್ಟು ನಿದರ್ಶನಗಳಿವೆ.
ಇತ್ತೀಚೆಗೆ ಮೊಬೈಲ್ ಗೀಳು ಮತ್ತು ಒತ್ತಡದ ಜೀವನ ಶೈಲಿಯಿಂದ ಸತಿ ಪತಿಗಳು ಅತೃಪ್ತ ಲೈಂಗಿಕ ಸಮಸ್ಯೆ ಹೆಚ್ಚಾಗುತ್ತಿವೆ. ಆಗ ಕಾಮವೇ ಜೀವನವೆಂದು ಜೀವನದಲ್ಲಿ ಜಿಗುಪ್ಸೆಗೊಳ್ಳಬಾರದು. ವಾಸ್ತವದ ಬದುಕನ್ನು ಒಲುಮೆಯಿಂದ ಸವಿದಾಗ ಎಂತಹ ಸಮಸ್ಯೆಗಳು ಕಡಿಮೆ ಆಗುತ್ತವೆ.
ಎಲ್ಲೆಲ್ಲೂ ವಿಕೃತ ಕಾಮುಕರ ಅಟ್ಟಹಾಸದಿಂದ ಅಮಾಯಕ ಹೆಣ್ಣು ಮಕ್ಕಳು ನರಕ ಯಾತನೆ ಅನುಭವಿಸುವಂತಾಗಿದೆ. ಈ ಹೀನ ಕೃತ್ಯ ವನ್ನು ಸಮಾಜದಿಂದ ಹೊಡೆದೋಡಿಸಿದಾಗಮಾತ್ರ ಹೆಣ್ಣು ಮಕ್ಕಳು ನಿರಾತಂಕವಾಗಿ ಬದುಕಲು ಸಾಧ್ಯ.
ಬಹುತೇಕರಲ್ಲಿ ತಾನು ಪ್ರಸಿದ್ದಿ ಆಗಬೇಕೆಂಬ ಕೀರ್ತಿಕಾಮ ಎಗ್ಗಿಲ್ಲದಂತೆ ತಾಂಡವಾಡುತ್ತಿದೆ. ಇದು ಸಮಾಜಕ್ಕೆ ಮಾತ್ರವಲ್ಲ ತಮಗೆ ತಾವೇ ಒಡ್ಡಿಕೊಳ್ಳುವ ಅಪಾಯವಾಗಿದೆ. ಸಂಪತ್ತು ಗಳಿಸುವುದೇ ಜೀವನದ ಪರಮ ಗುರಿ ಎಂದುಕೊಂಡು ಒತ್ತಡದಿಂದ ಜೀವನ ಸಾಗಿಸುತ್ತಿರುವವರೆ ಅಧಿಕ ಅಂತ ಹೇಳಿದರೆ ತಪ್ಪಾಗಲಾರದು. ಇವರು ಬದುಕಿದ್ದು ಭಾವನೆ ಇಲ್ಲದೆ ಸತ್ತಂತಿರುವವರು. ಜನಪ್ರಿಯವಾಗಬೇಕೆಂಬ ಮತ್ತು ಆಸ್ತಿ ಅಂತಸ್ತು ಮಾಡಬೇಕೆಂಬ ಹುಚ್ಚು ಹಂಬಲ ಬಿಟ್ಟು ಸಮರ್ಪಣಾ ಭಾವದಿಂದ ಕೆಲಸ ಮಾಡುವುದರಿಂದ ಆತ್ಮ ತೃಪ್ತಿ ಸಿಗುತ್ತದೆ .ಇಂತಹ ನೆಮ್ಮದಿಯ ಬಾಳು ಎಲ್ಲರದಾಗಲಿ ಎಂದು ಶುಭ ಹಾರೈಸೋಣ.
✍️ ಭವ್ಯ ಸುಧಾಕರ ಜಗಮನೆ
ಶಿವಮೊಗ್ಗ
ಸಂಪರ್ಕ ಸಂಖ್ಯೆ :7899492498

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!