ಕೊಪ್ಪಳ ಜಿಲ್ಲೆ ಕುಷ್ಟಗಿಯ ಸರ್ಕ್ಯೂಟ್ ಹೌಸ್ ನಲ್ಲಿ ನಡೆದ ಸಭೆಯಲ್ಲಿ ನಮ್ಮ ಕರ್ನಾಟಕ ಸೇನೆಯ ವಿವಿಧ ಪದಾಧಿಕಾರಿಗಳನ್ನು ರಾಜ್ಯಾಧ್ಯಕ್ಷರಾದ ಬಸವರಾಜ್ ಪಡುಕೋಟೆ ಮತ್ತು ಜಿಲ್ಲಾ ವಿದ್ಯಾರ್ಥಿ ಘಟಕದ ಅಧ್ಯಕ್ಷರು ಮೌನೇಶ ಹೆಚ್ ನಾಯಕ್, ಯುವ ಘಟಕದ ಅಧ್ಯಕ್ಷರು ಬಸವರಾಜ ಮತ್ತು ಯಲಬುರ್ಗಾ ತಾಲೂಕು ಅಧ್ಯಕ್ಷರು ಶಂಕ್ರಪ್ಪ ಎಚ್ ಶಾಖಾಪುರ್
ನೇಮಕಾತಿ ಆದೇಶ ಪತ್ರ ನೀಡುವ ಮೂಲಕ ಆಯ್ಕೆ ಮಾಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ಮೌನೇಶ್ ನಾಯಕ್ ನಮ್ಮ ಕರ್ನಾಟಕ ಸೇನೆಯ ಮುಖ್ಯ ಉದ್ದೇಶವೇ ಬಡವರ ದೀನದಲಿತರ ಪರವಾಗಿ ಹೋರಾಡುವುದು ಮತ್ತು ಭ್ರಷ್ಟ ರಾಜಕಾರಣಿ ಅಧಿಕಾರಿಗಳ ವಿರುದ್ಧ ಧ್ವನಿ ಎತ್ತುವುದು ನಾಡ ನುಡಿ ಜಲ ರಕ್ಷಣೆ ಮಾಡುವುದು. ಕರ್ನಾಟಕದ ಹಾಗೂ ಕೊಪ್ಪಳ ಜಿಲ್ಲೆ ಯಾವುದೇ ಮೂಲೆಯಲ್ಲಿ ಅನ್ಯಾಯ ನಡೆದರೆ ಜನರ ಪರವಾಗಿ ನಿಲ್ಲುವುದೇ ಗುರಿ ನಮ್ಮದಾಗಿದೆ ಕುಷ್ಟಗಿ ತಾಲೂಕು ಅಧ್ಯಕ್ಷರಾಗಿ ಶ್ರೀ ಬಸವರಾಜ್ ವಾಲ್ಮೀಕಿ, ಗೌರವಾಧ್ಯಕ್ಷರಾಗಿ ಶ್ರೀ ಶಿವಮೂರ್ತಿ ಎಚ್ ಗೌಡ್ರು, ಮಾಧ್ಯಮ ಸಲಹೆಗಾರರು ಶ್ರೀ ಶರಣಪ್ಪ ಲೈನರ, ಉಪಾಧ್ಯಕ್ಷರನ್ನಾಗಿ ಹನುಮೇಶ್ ನಾಯಕ್ ಮತ್ತು ಕಾರ್ಯದರ್ಶಿ ಪ್ರಧಾನ ಕಾರ್ಯದರ್ಶಿ ಮತ್ತು ತಾಲೂಕು ಸದಸ್ಯರ ನೇಮಕ ಮಾಡಲಾಯಿತು.
- ಕರುನಾಡ ಕಂದ



















