ಕೊಪ್ಪಳ: ”ಗ್ರಾಮೀಣ ಭಾಗದಲ್ಲಿ ರಸ್ತೆ ನಿರ್ಮಿಸಬೇಕು ಎಂದರೆ ಅನ್ನಭಾಗ್ಯ ಯೋಜನೆಯ ಅಕ್ಕಿ ಸೇರಿ ಎಲ್ಲಾ ಬಂದ್ ಆಗುತ್ತವೆ,” ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕುಕನೂರು ತಾಲೂಕಿನ ಗ್ರಾಮವೊಂದರಲ್ಲಿ ಶನಿವಾರ ನಡೆದ ಸರಕಾರಿ ಪ್ರೌಢಶಾಲೆ ಉದ್ಘಾಟನೆ ಕಾರ್ಯಕ್ರಮದಲ್ಲಿ ರೈತರೊಬ್ಬರು, ” ಮಹಿಳೆಯರಿಗೆ ಪಗಾರ ಮಾಡೀರಿ. ನಮ್ಗ ಹೊಲಕ್ಕೆ ಹೋಗಾಕ ರಸ್ತೆ ಮಾಡ್ರಿ,” ಎಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ರಾಯರಡ್ಡಿ ಅವರು, ” ನಿಂಗೆ ರಸ್ತೆ ಬೇಕಾದರೆ ಅಕ್ಕಿ ಎಲ್ಲ ಬಂದ್ ಆಗ್ತಾವೆ. ಸಿಎಂ ಸಿದ್ದರಾಮಯ್ಯ ಅವರಿಗೆ ಹೇಳುತ್ತೇನೆ. ಜನ ಗ್ಯಾರಂಟಿ ಬೇಡ ಅಂತಾರಂತ. ಆ ರೊಕ್ಕದಾಗ ಜನ ಗ್ರಾಮೀಣ ರಸ್ತೆ ಮಾಡೋಣ ಎನ್ನುತ್ತಿದ್ದಾರೆ ಎಂದು ಹೇಳುವೆ. ಇನ್ನೂ ಮೂರು ವರ್ಷ ಅವಧಿ ಇದೆ. ರಸ್ತೆಯನ್ನೂ ಅಭಿವೃದ್ಧಿ ಮಾಡೋಣ ” ಎಂದು ತಿಳಿ ಹೇಳಿದರು.
ವರದಿ : ಜಿಲಾನಸಾಬ್ ಬಡಿಗೇರ



















