ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅದ್ದೂರಿಯಾಗಿ ಜರುಗಿದ ಶ್ರೀ ಏಳು ಕೋಟಿ ಮಲ್ಲಯ್ಯನ ಸರಪಳಿ ಹರಿಯುವ ಕಾರ್ಯಕ್ರಮ

ಕೊಪ್ಪಳ/ ಯಲಬುರ್ಗಾ: ಶ್ರಾವಣ ಮಾಸದ ಅಂಗವಾಗಿ ತಿಂಗಳ ಪರ್ಯಂತರವಾಗಿ ನಿರಂತರವಾಗಿ ಬೆಳಗಿನ ಸಮಯದಲ್ಲಿ ಶ್ರೀ ಏಳು ಕೋಟಿ ಮಲ್ಲಯ್ಯ ಸ್ವಾಮಿಗೆ ರುದ್ರಾಭಿಷೇಕ ಬಿಲ್ವಾರ್ಚನೆ ಸಾಗಿ ಬಂದಿರುತ್ತದೆ ಇದರ ಪ್ರಯುಕ್ತವಾಗಿ ಆ. ೧೭ ರಂದು ರವಿವಾರ ಬೆಳಗ್ಗೆ ೧೧ ಗಂಟೆಗೆ ಗೋಗಯ್ಯನವರಿಂದ ಮಲ್ಲಯ್ಯನ ಸರಪಳಿ ಹರಿಯುವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿದ ಬಳಿಕ ,ಸರ್ವ ಭಕ್ತರ ಸಹಕಾರದಲ್ಲಿ ಶ್ರೀ ಏಳು ಕೋಟಿ ಮಲ್ಲಯ್ಯ ಸ್ವಾಮಿಯ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆ ಸುಮಂಗಲಿಯರ, ಕುಂಭ- ಕಳಸದೊಂದಿಗೆ, ಡೊಳ್ಳು, ಕರಡಿಮಜಲು ಭಜನೆ ಸಕಲ ವಾದ್ಯಗಳೊಂದಿಗೆ ನಗರದ ಪ್ರಮುಖ ರಾಜಬೀದಿಯಲ್ಲಿ ಮೆರವಣಿಗೆ ಸಾಗಿ ಬಂದು, ಸಂಜೆ ೬ ಗಂಟೆಗೆ ದೇವಸ್ಥಾನ ತಲುಪಿ, ಉತ್ಸವ ಮೂರ್ತಿ ದೇವಸ್ಥಾನದ ಒಳಗೆ ಪ್ರವೇಶ ಮಾಡಿದ ನಂತರ ಮಹಾಪ್ರಸಾದ ಜರುಗಿತು. ಕೊಪ್ಪಳ ಜಿಲ್ಲೆಯ ಸುತ್ತಮುತ್ತಲಿನ ಸರ್ವ ಧರ್ಮದ ಭಕ್ತರು ಭಾಗವಹಿಸಿ ಯಶಸ್ವಿಗೊಳಿಸಿದರು. ಈ ವೇಳೆ ನಿವೃತ್ತ ನ್ಯಾಯಾಧೀಶರಾದ ಬಿ.ಕೆ.ಭೂತೆ, ಸಮತಿಯ ಪ್ರಮುಖರಾದ ಶಿವಕುಮಾರ ಭೂತೆ, ಶರಣಬಸಪ್ಪ ದಾನಕೈ, ಫಕೀರಪ್ಪ ಗಾಣಗೇರ, ಮಹೇಶ ಭೂತೆ, ರಾಮಣ್ಣ ನೆರೆಗಲ್ಲ, ತಿಪ್ಪಣ್ಣ ಉಪ್ಪಾರ, ಮಲ್ಲಿಕಾರ್ಜುನ ಸಾದರಖಾನ, ಶಂಕ್ರಪ್ಪ ಬಡಿಗೇರ, ಶರಣಪ್ಪ ಭಾವಿಕಟ್ಟಿ,,ದೇವಪ್ಪ ಉಪ್ಪಾರ, ಸಂಗಪ್ಪ ಕುಂಬಾರ, ಈಶಪ್ಪ ಬನ್ನಿಕೊಪ್ಪ, ಮಲ್ಲಿಕಾರ್ಜುನಗೌಡ ಪೋ.ಪಾಟಿಲ್, ಮಲ್ಲೇಶಗೌಡ ಮಾಲಿಪಾಟೀಲ್, ನಾಗರಾಜ ದಿವಟರ, ಮಹಾದೇವಪ್ಪ ಹಡಪದ,ಮಲ್ಲಪ್ಪ ಭೂತೆ,ವೀರೇಶ ಹಡಪದ ಮತ್ತು ಗೋಗ್ಗಯ್ಯನವರಾದ ನಾಗಪ್ಪ ಇಟಗಿ, ನಾಗಪ್ಪ ಹುಂಡಿ, ಶಿವಪುತ್ರಪ್ಪ ಕೊಪ್ಪಳ, ಬಸವಂತಪ್ಪ ಹಳ್ಳಿ, ಬಸನಗೌಡ ಮಾಲಿಪಾಟೀಲ ಹಾಗೂ ಅರ್ಚಕರಾದ ಚನ್ನಬಸಯ್ಯ ಅರಕೇರಿಮಠ, ಶರಭಯ್ಯ ಶಿರೂರಮಠ ಸೇರಿದಂತೆ ಇತರರು ಇದ್ದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!