
ಸ್ಕ್ರೀನ್ ಮೇಲೆ ಚಿತ್ರ ಸಹಿತ ವಿವರ ನೀಡಿ ಕಾರ್ಯಕ್ರಮದ ಹೆಚ್ಚು ಪರಿಣಾಮಕಾರಿಯಾಗಿ ರೂಪಿಸಿದ ಎಪಿಡಿ ಸಂಸ್ಥೆ.
ಯಾದಗಿರಿ/ಗುರುಮಠಕಲ್: ತಾಲೂಕ ಪಂಚಾಯತ್ ಸಭಾಂಗಣದಲ್ಲಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿ ಗ್ರಾಮ ಅಭಿವೃದ್ಧಿ ಅಧಿಕಾರಿಗಳಿಗೆ ವಿಕಲಚೇತನರ 5% ಅನುದಾನ ಬಳಕೆ ಮತ್ತು ವಿಕಲಚೇತನರ ಹಕ್ಕುಗಳ 2016 ಕಾಯ್ದೆಯ ಅರಿವು ಮೂಡಿಸುವ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ತಾಲೂಕ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಅಂಬರೀಷ ಪಾಟೀಲ ಅವರು ಚಾಲನೆ ನೀಡಿ ವಿಕಲಚೇತನರಿಗೆ ಸರಕಾರದಿಂದ ಬರುವ 5% ಅನುದಾನ ಎಲ್ಲಾ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಪ್ರಾಮಾಣಿಕವಾಗಿ ಸದ್ಬಳಕೆ ಆಗಲಿ ಮತ್ತು ಜೀವ ವಿಮಾ ಸುರಕ್ಷೆಯ ಕುರಿತು ಅರಿವು ಮೂಡಿಸುವ ಪ್ರಯತ್ನ ಜರುಗಲಿ ಎಂದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಾರ್ಯಕ್ರಮದ ಪ್ರಾಸ್ತಾವಿಕ ನುಡಿ ಎಪಿಡಿ ಸಂಸ್ಥೆಯ ತಾಲೂಕ ಸಂಯೋಜಕರಾದ ವಿರೂಪಾಕ್ಷ ಮಾಲಿ ಪಾಟೀಲ ಅವರು ವಿಕಲಚೇತನರ ಜೀವನ ಚಕ್ರ, ವಿಕಲಚೇತನರ ಗುರುತಿನ ಚೀಟಿ, ಸ್ವ ಸಹಾಯ ಸಂಘಗಳ ನಿರ್ಮಾಣ, 21 ಬಗೆಯ ವಿಕಲಚೇತನರ ಗುರುತಿಸುವ ಕಾರ್ಯ ಕುರಿತು ವಿವರಣೆ ನೀಡಿದರು.
ಕೊನೆಯದಾಗಿ ನೀತಿ ಮತ್ತು ವಕಾಲತ್ತು ಜಿಲ್ಲಾ ಸಂಯೋಜಕರು ನಾಗಪ್ಪ ಅವಂಟಿ ವಿಕಲಚೇತನರ 2016 ಕಾಯ್ದೆ ಮತ್ತು ಅವರು ಸ್ವಯತ್ತತೆ, ಘನತೆ, ಎಲ್ಲೆಡೆ ಸಮಾನ ಅವಕಾಶ, ಸರಕಾರಿ ಸೌಲಭ್ಯಗಳು, ಶೈಕ್ಷಣಿಕ, ವೃತ್ತಿಪರ ಮತ್ತು ಸ್ವ ಉದ್ಯೋಗ, ಕಾಯ್ದೆ ಉಲ್ಲಂಘನೆ, 5% ಅನುದಾನ ಬಳಕೆ ಕುರಿತಾದ ಮಾಹಿತಿ ನೀಡಿದರು.
ತಾಲೂಕ ಆರ್ ಪಿ ಡಿ ಅಧ್ಯಕ್ಷ ಸಿದ್ದನಗೌಡ, ಎಮ್ ಅರ್ ಡಬ್ಲ್ಯೂ ಭೀಮರಾಯ, ಎಪಿಡಿ ಸಿಬ್ಬಂದಿಗಳಾದ ಶಿಲ್ಪಾ, ಗಂಗಪ್ಪ, ನಾಗರಾಜ, ನಾಗಮಣಿ ಸೇರಿದಂತೆ ಅರ್.ಪಿ.ಡಿ ಟಾಸ್ಕ್ ಪೋರ್ಸ ಸದಸ್ಯರು, ಎಲ್ಲಾ ಗ್ರಾಮ ವಿಅರ್ ಡಬ್ಲ್ಯೂ ಸದಸ್ಯರು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ವರದಿ: ಜಗದೀಶ್ ಕುಮಾರ್ ಭೂಮಾ



















