ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಅಮರ್ ಇಂಟರ್ನ್ಯಾಷನಲ್ ಲಾಡ್ಜ್ ನಲ್ಲಿ 30 ವರ್ಷದ ಮಹಿಳೆಯ ಶವ ಪತ್ತೆಯಾಗಿದ್ದು, ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಶಂಕೆ ವ್ಯಕ್ತವಾಗಿದೆ.
ಆ ಮಹಿಳೆಯನ್ನು ಇಂಡಿ ತಾಲ್ಲೂಕಿನ ಆಳೂರ ಗ್ರಾಮದ ನಾಗಮ್ಮ ಮಾರುತಿ ಗೊಳಸಾರ್ ಎಂದು ಗುರುತಿಸಲಾಗಿದೆ.
ಗುರುವಾರ ಮಧ್ಯಾಹ್ನದ ಸುಮಾರಿಗೆ ಮಹಿಳೆ ಇಂಡಿ ಗ್ರಾಮಕ್ಕೆ ಆಗಮಿಸಿದ್ದು. ನಂತರ ಮಲ್ಲಪ್ಪ ಗಂಗಪ್ಪ ಬಡಿಗೇರ ಈತನೊಂದಿಗೆ ಅಮರ್ ಲಾಡ್ಜ್ ಗೆ ತೆರಳಿದ್ದು, ಅಲ್ಲಿ ಇಬ್ಬರೂ ಸೇರಿಕೊಂಡು ಅಮರ್ ಲಾಡ್ಜ್ ಕೋಣೆಯಲ್ಲಿ ಉಳಿದುಕೊಂಡಿದ್ದರು.
ಮಲ್ಲಪ್ಪ ಬಡಿಗೇರ ನಿದ್ರೆಗೆ ಜಾರಿದಾಗ ನಾಗಮ್ಮ ದುಪ್ಪಟದಿಂದ ಬಾತ್ ರೂಮಿನ ಕಿಟಕಿಯ ಕಬ್ಬಿಣದ ಸರಳಿಗೆ ನೇಣು ಹಾಕಿಕೊಂಡು ಸಾವನಪ್ಪಿರಬಹುದು ಅಥವಾ ಕೊಲೆ ಆಗಿದೆಯೋ ಎಂಬುವದು ಕುರಿತು ಶವ ಪರೀಕ್ಷೆ ಮಾಡಿಸಿ ಸಾವಿನ ನಿಜವಾದ ಕಾರಣ ಏನೆಂಬುವದು ತಿಳಿಯಬೇಕೆಂದು ಮೃತ ನಾಗಮ್ಮ ನ ತಾಯಿ ಸುರಮ್ಮ ದೇವಿ ಕರಜಗಿ ಇಂಡಿ ಶಹರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮಗಳು ನಾಗಮ್ಮಮದುವೆಯಾದ ಮೂರೇ ವರ್ಷಕ್ಕೆ ಗಂಡನನ್ನು ಬಿಟ್ಟು ಮರಳಿ ತವರು ಮನೆಗೆ ಬಂದು ನಮ್ಮ ಜೊತೆ ವಾಸಿಸುತ್ತಿದ್ದಳು ಹಾಗೂ ಅವಳಿಗೆ 13 ವರ್ಷದ ಮಗ ಸಹ ಇದಾನೆ ಎಂದು ಹಾಗೂ ನಾಗಮ್ಮ ಕೆಲಸಕ್ಕೆ ಹೋದಾಗ ಮಲ್ಲಪ್ಪ ಬಡಿಗೇರ ಈತನಿಗೆ ಪರಿಚಯವಾಗಿದೆ ಎಂದು ತಾಯಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
- ಕರುನಾಡ ಕಂದ



















