ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ವಿಶ್ವಕರ್ಮರ ಜಯಂತಿ ಆಚರಿಸಲಾಯಿತು.
ವಿಶ್ವ ಕರ್ಮರು ಬ್ರಹ್ಮಾಂಡದ ವಾಸ್ತುಶಿಲ್ಪಿ ಮತ್ತು ವಿಶ್ವದ ಮೊದಲ ಎಂಜಿನಿಯರ್ ಎಂದು ಹೇಳಲಾಗುತ್ತದೆ. ಈ ದಿನದಂದು, ಕುಶಲಕರ್ಮಿಗಳು, ಕಾರ್ಖಾನೆಗಳ ಕಾರ್ಮಿಕರು ಮತ್ತು ವಿನ್ಯಾಸಕಾರರು ತಮ್ಮ ಉಪಕರಣಗಳು, ಯಂತ್ರಗಳು ಮತ್ತು ವಾಹನಗಳನ್ನು ಸ್ವಚ್ಛಗೊಳಿಸಿ ಪೂಜಿಸುತ್ತಾರೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಲಮಾಣಿ ಯವರು ಹೇಳಿದರು.
ಈ ಹಬ್ಬದ ಮಹತ್ವವೆಂದರೆ ವಾಸ್ತುಶಿಲ್ಪಿಗಳ ಆರಾಧನೆ. ವಿಶ್ವಕರ್ಮನು ಬ್ರಹ್ಮಾಂಡದ ಸೃಷ್ಟಿಕರ್ತ, ವಾಸ್ತುಶಿಲ್ಪಿ ಮತ್ತು ದೇವರುಗಳ ಆಯುಧಗಳ ನಿರ್ಮಾಪಕನಾಗಿದ್ದಾನೆ. ಆದ್ದರಿಂದ, ಈ ದಿನವನ್ನು ಕುಶಲಕರ್ಮಿಗಳು ತಮ್ಮ ದೈವಿಕ ಕುಲಗುರು ಎಂದು ಆಚರಿಸುತ್ತಾರೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಲಮಾಣಿಯವರು ತಿಳಿಸಿದರು.
ಜಯಂತಿ ಕಾರ್ಯಕ್ರಮದಲ್ಲಿ ಕಾಲೇಜಿನ ಹಿರಿಯ ಪ್ರಾಧ್ಯಾಪಕರಾದ ಡಾ. ಗವಿಸಿದ್ದಪ್ಪ ಮುತ್ತಾಳ, ಪ್ರೊ. ನಾಗರತ್ನ ತಮ್ಮಿನಾಳ, ಡಾ. ಹುಲಿಗೆಮ್ಮ, ಡಾ. ಮಲ್ಲಿಕಾರ್ಜುನ, ಡಾ. ಪ್ರದೀಪ್ ಕುಮಾರ, ಡಾ. ನರಸಿಂಹ, ಡಾ. ಅಶೋಕ ಕುಮಾರ, ಶುಭಾ, ಸುಮಿತ್ರಾ, ಹನುಮಪ್ಪ ಮೇಟಿ ಹಾಗೂ ಕಾಲೇಜಿನ ಎಲ್ಲ ಭೋಧಕ ಮತ್ತು ಭೋದಕೇತರ ಸಿಬ್ಬಂದಿಗಳು, ವಿದ್ಯಾರ್ಥಿನಿಯರು ಈ ಜಯಂತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
- ಕರುನಾಡ ಕಂದ



















