ಪಶ್ಚಿಮ ಬಂಗಾಳ/ಕೋಲ್ಕತ್ತಾ: ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ರಿಟೈರ್ಡ್ ಇದರ ವತಿಯಿಂದ ಆರೋಗ್ಯ ವಿಮೆಯ ಕುರಿತು ವಿಚಾರ ಸಂಕಿರಣವು ಗೂಗಲ್ ಮೀಟ್ ನಲ್ಲಿ ಸಂಘಟನೆಯ ಅಧ್ಯಕ್ಷ ಡಾ. ಇಂದ್ರಜಿತ್ ಸನ್ಯಾಲ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಈ ಸಂಧರ್ಭದಲ್ಲಿ ಅವರು ಸಭೆಯಲ್ಲಿ ನಿವೃತ್ತರಿಗೆ ಆರೋಗ್ಯ ವಿಮಾ ಪಾಲಿಸಿಯಲ್ಲಿ STP ನಿಯತಾಂಕಗಳ ವಿಷಯವಾಗಿ ಚರ್ಚೆ ನಡೆಸಿದರು.
ಮುಂದುವರಿದ ಅವರು ಆರೋಗ್ಯ ವಿಮೆಯಲ್ಲಿ ವ್ಯಕ್ತಿಗಳು ಪ್ರಯೋಜನಗಳನ್ನು ಪಡೆಯುತ್ತಾರೆ ಆದರೆ ಬ್ಯಾಂಕಿಂಗ್ ವಲಯ ಮತ್ತು CGHS ವ್ಯಾಪ್ತಿಗೆ ಒಳಪಡದ ಇತರ ವಲಯಗಳಲ್ಲಿನ ಹಿರಿಯ ನಾಗರಿಕರ ನಿವೃತ್ತ ಗುಂಪುಗಳು ಪ್ರಯೋಜನವನ್ನು ಕಳೆದುಕೊಳ್ಳುತ್ತವೆ. ವಾರ್ಷಿಕ ಪ್ರೀಮಿಯಂಗಾಗಿ ರೂ. 5,000 ರಿಂದ ರೂ. 17,000/- ಉಳಿಸಲು ಸೆಪ್ಟೆಂಬರ್ 2025 ರಲ್ಲಿ ಈ ಗುಂಪುಗಳನ್ನು ಸೇರಿಸಲು ತುರ್ತಾಗಿ ಕ್ರಮ ಕೈಗೊಳ್ಳಲು ಪ್ರಯತ್ನಿಸಬೇಕಾಗಿದೆ ಎಂದು ಅಭಿಪ್ರಾಯ ಪಟ್ಟರು.
ಶ್ರೀಮತಿ ಅನಾಹಿತ ,ಕೆ.ಎಂ.ಡಿ. ಸಂಸ್ಥೆಯ ಹಿರಿಯ ಉಪಾಧ್ಯಕ್ಷೆ ಅವರು ಅರೋಗ್ಯ ವಿಮೆಯಲ್ಲಿರುವ ವಿವಿಧ ಸೌಲಭ್ಯಗಳು, ಮತ್ತು ವಿನಾಯಿತಿ ಇತ್ಯಾದಿ ವಿಷಯಗಳ ಬಗ್ಯೆ ಸೂಕ್ಷ್ಮವಾಗಿ ಪರಿಚಯಿಸಿದರು.
ಕಾರ್ಯಕ್ರಮದಲ್ಲಿ ಯು.ಎಫ್.ಬಿ.ಆರ್. ಇದರ ಸಂಘಟನಾ ಕಾರ್ಯದರ್ಶಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀ ಕೊಡಕ್ಕಲ್ ಶಿವಪ್ರಸಾದ್, ಶ್ರೀ ಎ.ಎಸ್.ಮೂರ್ತಿ,ಶ್ರೀ ಘನಶ್ಯಾಮ್ ಜಾಂಗಿರ್, ಮುಂತಾದವರು ಭಾಗವಹಿಸಿದ್ದರು.
ವರದಿ ಕೊಡಕ್ಕಲ್ ಶಿವಪ್ರಸಾದ್




















