ಪಾಪದ ಫಲವೇ ದುಃಖ ಪುಣ್ಯದ ಫಲವೇ ಸುಖ : ಒಪ್ಪತ್ತೇಶ್ವರ ಶ್ರೀಗಳು
ಕೊಪ್ಪಳ/ ಯಲಬುರ್ಗಾ: ಪರರಿಗೆ ಉಪಕಾರ ಮಾಡುವ ಮನೋಭಾವ ನಮ್ಮದಾಗಬೇಕು, ಒಳಿತು ಮಾಡುವ ಗುಣ ನಮ್ಮಲ್ಲಿ ಇದ್ದಾಗ ಪುಣ್ಯದ ಫಲ ಲಭಿಸಲು ಸಾಧ್ಯ ಎಂದು ಗುಳೇದ ಗುಡ್ಡದ ಒಪ್ಪತ್ತೇಶ್ವರ ಸ್ವಾಮೀಜಿ ಅವರು ದಮ್ಮೂರ ಶ್ರೀ ಭೀಮಾಂಬಿಕಾ ದೇವಿ ಶಿವನುಭವ ಸೇವಾ ಸಮಿತಿ ದಮ್ಮೂರ ಗ್ರಾಮದಲ್ಲಿ ಜರುಗಿದ ೩೭೮ ನೇ ಶಿವಾನುಭವ ಗೋಷ್ಠಿಯಲ್ಲಿ ಸಾನಿದ್ಯ ವಹಿಸಿ ಮಾತನಾಡಿದರು. ನಿವೃತ್ತ ಉಪನ್ಯಾಸಕ ಆರ್.ಪಿ.ರಾಜೂರ, ನಿವೃತ್ತ ಶಿಕ್ಷಕ ಶರಣಪ್ಪ ಕೊಪ್ಪದ ಕುಕನೂರ ಅವರು ಅತಿಥಿಯಾಗಿ ಮಾತನಾಡಿದರು. ಶ್ರೀ ಭೀಮಾಂಬಿಕಾದೇವಿ ಶಿವಾನುಭವ ಸೇವಾ ಸಮಿತಿ ಅಧ್ಯಕ್ಷ ಶರಣಬಸಪ್ಪ ದಾನಕೈ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹನುಮಂತಪ್ಪಜ್ಜ ಧರ್ಮರ, ಶರಣಯ್ಯ ಹಿರೇಮಠ ಸಾನಿಧ್ಯ ವಹಿಸಿದ್ದರು. ನಿವೃತ್ತ ಶಿಕ್ಷಕ ರಾಮಣ್ಣ ಮುತ್ತಾಳ, ಪತ್ರಕರ್ತ ಮಂಗಳೇಶ ಮೆತಗಲ್ಲ, ವೀರಪ್ಪ ರಾವಣಕಿ, ಮರಿಯಪ್ಪ ಮರಗಪ್ಪನವರ, ಹನುಮಪ್ಪ ರಾವಣಕಿ, ಬಸವರಾಜ ಕುಸುಗಲ್ಲ , ಡಾ . ಪ್ರಕಾಶ ರಾವಣಕಿ, ಶರಣಗೌಡ ದ್ಯಾಮಣಗೌಡ್ರ, ಭೀಮಣ್ಣ ಜರಕುಂಟಿ, ಬಸವರಾಜ ಮೇಲಸಕ್ರಿ,ಬಸವರಾಜ ಹಳ್ಳಿಕೇರಿ ಸೇರಿದಂತೆ ಭಕ್ತರು ಭಾಗವಹಿಸಿದ್ದರು. ಸಂಗೀತ ಬಳಗದ ನೀಲಕಂಠಪ್ಪ ರೋಡ್ಡರ, ಯಮನೂರಪ್ಪ ಹಳ್ಳೀಕೇರಿ, ಕಳಕಪ್ಪ ಹಡಪದ ಸೇವೆ ಸಲ್ಲಿಸಿದರು. ನಂತರ ಅನ್ನ ಪ್ರಸಾದ ಜರುಗಿತು.
- ಕರುನಾಡ ಕಂದ



















