ಹಾವೇರಿ :ಬರೀ ಜೇಬಲ್ಲಿ ಕೈಯಲ್ಲಿ ಕಾಸಿಲ್ಲ, ಫೋನ್ ಪೇ ನಲ್ಲಿ ಹಣ ಇಲ್ಲ ಒಂದೇ ಒಂದು ಪೆನ್ ಜೇಬಿಗೆ ಸಿಕ್ಕಿಸಿಕೊಂಡು ಪ್ರಪಂಚ ಸುತ್ತುವ ಲೋಕದರ್ಶಕ ಸಾಹಸಿ ಮಾತ್ರ ನಿಜವಾದ ಪತ್ರಕರ್ತ ನೀವು ಹಾಗಾಗಬೇಕು ಎಂದು ಸಾಹಿತಿ ಹಾಗೂ ಆರ್ ಟಿ ಐ ಕಾರ್ಯಕರ್ತ ಶ್ರೀ ಜೆ ಎಮ್ ರಾಜಶೇಖರ ಅವರು ನುಡಿ ಮಾತುಗಳಲ್ಲಿ ತಿಳಿಸಿದರು.
ಪತ್ರಕರ್ತ ಎನ್ನುವುದು ಉದ್ಯಮವೂ ಅಲ್ಲ ವೃತ್ತಿಯೂ ಅಲ್ಲ ಅದೊಂದು ಜವಾಬ್ದಾರಿ ಹೊಣೆಗಾರಿಕೆ. ನಾಗರೀಕ ಪತ್ರಿಕೋದ್ಯಮ ಸಾಮಾಜಿಕ ಜಾಲತಾಣದ ಮೂಲಕ ಅತ್ಯಂತ ತೀಕ್ಷ್ಣವಾಗಿ ವ್ಯಾಪಕವಾಗಿ ಮನೆ ಮನೆ ತಲುಪಿದೆ. ಯಾವ ಮಾಧ್ಯಮವೂ ಪೈಪೋಟಿಯಲ್ಲ ಒಂದಕ್ಕೊಂದು ಸಹಭಾಗಿತ್ವ ಸಹಕಾರ ಹೊಂದಾಣಿಕೆ ಮೂಲಕ ಗುಣಮಟ್ಟದಲ್ಲಿ ನಾಗರೀಕ ಸಮಾಜವನ್ನು ತಲುಪುವಲ್ಲಿ ಯಶಸ್ವಿಯಾಗುವವರನ್ನು ವೇಗವಾಗಿ ತೀಕ್ಷ್ಣವಾಗಿ ಆತ್ಮೀಯವಾಗಿ ಅಪ್ಪಿಕೊಂಡು ಪ್ರಪಂಚ ಸದಾ ಮುನ್ನಡೆಯುತ್ತದೆ ಎಂದು ಒಂದು ಗಂಟೆಗೂ ಹೆಚ್ಚು ಕಾಲ ಸಮಾಜದ ಇಂದಿನ ಪರಿಸ್ಥಿತಿ ಪತ್ರಕರ್ತರಿಗೆ ಇರುವ ಸವಾಲು ನಾಗರೀಕ ಜವಾಬ್ದಾರಿ ಹಾಗೂ ಸ್ವ ರಕ್ಷಣೆಗೆ ಬೇಕಾದ ಜ್ಞಾನ ಕುರಿತು ಸ್ಪಷ್ಟತೆ ಮೂಡಿಸಿದರು.
ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳು ಶ್ರೀ ನಾಗರಾಜ್ ಇಚ್ಛೆಂಗಿ ಉದ್ಘಾಟಿಸಿದರು. ಕಾರ್ಯಾಧ್ಯಕ್ಷರು ಕಲರ್ ಫುಲ್ ಸುದ್ದಿ ಮಾಸಪತ್ರಿಕೆ ಕಾರ್ಯಾಧ್ಯಕ್ಷರು ಶ್ರೀ ಮಾಲತೇಶ್ ಬೆಟಗೇರಿ ಅಧ್ಯಕ್ಷತೆ ವಹಿಸಿದ್ದರು.
ಸ್ವಾಗತ, ಪ್ರಾಥಮಿಕ ನಿರೂಪಣೆಯನ್ನು ಡಾ. ಪ್ರಭು ಸ್ವಾಮಿ ಹಾಲೇವಾಡಿ ಮಠ ನೆರವೇರಿಸಿಕೊಟ್ಟರು.
ವರದಿ: ಕೊಡಕ್ಕಲ್ ಶಿವಪ್ರಸಾದ್.



















