’ಐ ಲವ್ ಮಹಮ್ಮದ್’ ಅಭಿಯಾನದ ನೆಪದಲ್ಲಿ ಹಿಂದೂಗಳ ಮೇಲೆ ನಡೆದ ಹಿಂಸಾತ್ಮಕ ದಾಳಿಗಳ ಕುರಿತು ಕಠಿಣ ಕ್ರಮ ಕೈಗೊಂಡು ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಂತೆ ಸರ್ಕಾರಕ್ಕೆ ಮನವಿ
ಮಂಗಳೂರು : ಇಂದು ಕರ್ನಾಟಕ, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಕೆಲವು ಮುಸಲ್ಮಾನ ಯುವಕರು ’ಐ ಲವ್ ಮೊಹಮ್ಮದ್’ ಅಭಿಯಾನವನ್ನು ಪ್ರಾರಂಭಿಸಿ ಹಿಂದೂಗಳ ಮೇಲೆ ಆಕ್ರಮಣ ಮಾಡಲಾಗುತ್ತಿದೆ. ದಾವಣಗೆರೆಯಲ್ಲಿ ಸೆಪ್ಟೆಂಬರ್ ೨೪ರ ರಾತ್ರಿ, ಮುಸ್ಲಿಮರು ಹಿಂದೂಗಳ ಮನೆಗಳ ಮೇಲೆ ಬಲವಂತವಾಗಿ ’ಐ ಲವ್ ಮೊಹಮ್ಮದ್’ ಫಲಕಗಳನ್ನು ಹಾಕಿದರು. ಇದನ್ನು ವಿರೋಧಿಸಿದ ಹಿಂದೂ ಮನೆಗಳ ಮೇಲೆ ೨೦೦-೩೦೦ ಮತಾಂಧರ ಗುಂಪು ಕಲ್ಲು ತೂರಾಟ ಮಾಡಿದಲ್ಲದೇ, ಹಿಂದೂ ಮನೆಗೆ ನುಗ್ಗಿ ಹಿಂದೂ ಮಹಿಳೆಯರು ಮತ್ತು ಪುರುಷರನ್ನು ಥಳಿಸಲಾಯಿತು. ಅದೇ ರೀತಿಯಲ್ಲಿ ಗುಜರಾತ್‌ನ ಗಾಂಧಿನಗರದಲ್ಲಿ ರಾತ್ರಿ ಮುಸ್ಲಿಮರ ಗುಂಪು ಗರಬಾ ಆಡುತ್ತಿದ್ದ ಹಿಂದೂಗಳ ಮೇಲೆ ದಾಳಿ ಮಾಡಿತು. ಈ ದಾಳಿಯಲ್ಲಿ ಕಲ್ಲು ತೂರಾಟ, ಬೆಂಕಿ ಹಚ್ಚುವುದು ಮತ್ತು ಸಾರ್ವಜನಿಕ ಆಸ್ತಿಗೆ ದೊಡ್ಡ ಪ್ರಮಾಣದ ಹಾನಿ ಉಂಟುಮಾಡಲಾಯಿತು. ದಾಳಿಕೋರರು ಪೊಲೀಸ್ ವಾಹನಗಳು ಸೇರಿದಂತೆ ಎಂಟುಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ ಹಚ್ಚಿದರು. ಈ ದಾಳಿಗಳು ಕೇವಲ ಗುಜರಾತ್ ಅಥವಾ ಕರ್ನಾಟಕಕ್ಕೆ ಸೀಮಿತವಾಗಿಲ್ಲ. ಉತ್ತರ ಪ್ರದೇಶದ ಕಾನ್ಪುರ, ಬರೇಲಿದಿಂದ ಪ್ರಾರಂಭವಾದ ಈ ವಿವಾದ ಈಗ ಮಹಾರಾಷ್ಟ್ರ, ತೆಲಂಗಾಣ, ಮಧ್ಯಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಿಗೂ ಹರಡುತ್ತಿದೆ. ಈ ಘಟನೆಗಳಿಂದಾಗಿ ದೇಶದ ಕಾನೂನು ಮತ್ತು ಸುವ್ಯವಸ್ಥೆಗೆ ದೊಡ್ಡ ಸವಾಲು ಎದುರಾಗಿದೆ. ಇದು ಒಂದು ಪೂರ್ವಯೋಜಿತ ಪಿತೂರಿಯ ಭಾಗವೆಂದು ಕಂಡುಬರುತ್ತದೆ. ಪ್ರತಿ ವರ್ಷ ಹಿಂದೂ ಹೊಸ ವರ್ಷ, ಶ್ರೀರಾಮನವಮಿ, ಹನುಮಾನ್ ಜಯಂತಿ, ಹೋಳಿ, ರಂಗಪಂಚಮಿ, ಗಣೇಶೋತ್ಸವ, ದಸರಾ ಅಥವಾ ದೀಪಾವಳಿಯಂತಹ ಹಿಂದೂ ಹಬ್ಬಗಳ ಸಮಯದಲ್ಲಿ, ಮತಾಂಧ ಮುಸಲ್ಮಾನರು ಏನಾದರೂ ಕಾರಣ ನೀಡಿ ಹಿಂದೂಗಳ ಮೆರವಣಿಗೆಗಳು ಮತ್ತು ಉತ್ಸವಗಳ ಮೇಲೆ ಕಲ್ಲು ತೂರುತ್ತಾರೆ, ಬೆಂಕಿ ಹಚ್ಚುತ್ತಾರೆ ಮತ್ತು ಗಲಭೆಗಳನ್ನು ಸೃಷ್ಟಿಸುತ್ತಾರೆ. ಈ ಘಟನೆಗಳ ಮೂಲಕ ಹಿಂದೂ ಸಮಾಜದಲ್ಲಿ ಭಯ ಮತ್ತು ಆತಂಕದ ವಾತಾವರಣವನ್ನು ಸೃಷ್ಟಿಸಲು ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ. ಈ ಗಲಭೆಗಳು ಮತ್ತು ದಾಳಿಗಳು ಕೇವಲ ಕೆಲವರ ಪ್ರಚೋಧನೆಯಿಂದ ನಡೆಯುತ್ತಿಲ್ಲ, ಬದಲಿಗೆ ಇದರ ಹಿಂದೆ ಒಂದು ದೊಡ್ಡ ಜಾಲ ಕೆಲಸ ಮಾಡುತ್ತಿರುವ ಸಾಧ್ಯತೆ ಇದೆ. ಈ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿರುವ ಸೂತ್ರಧಾರರು ಯಾರು? ಈ ಕೃತ್ಯಗಳಿಗಾಗಿ ಯುವಕರನ್ನು ಪ್ರಚೋದಿಸುತ್ತಿರುವ ಧರ್ಮಗುರುಗಳು ಯಾರು? ಯಾವ ಮಸೀದಿಗಳು ಮತ್ತು ಮದರಸಾಗಳಿಂದ ಇಂತಹ ಹಿಂಸಾತ್ಮಕ ಫತ್ವಾಗಳನ್ನು ಹೊರಡಿಸಲಾಗುತ್ತಿದೆ? ಈ ಸಂಘಟನೆಗಳಿಗೆ ಸಿಗುವ ಆರ್ಥಿಕ ಮತ್ತು ರಾಜಕೀಯ ಬೆಂಬಲ ಎಲ್ಲಿಂದ ಬರುತ್ತಿದೆ? ಇದರ ಆಳವಾದ ತನಿಖೆಯಾಗುವುದು ಅತ್ಯಂತ ಅವಶ್ಯಕವಾಗಿದೆ. ಈ ಮೂಲ ಕಾರಣಗಳನ್ನು ಪತ್ತೆ ಹಚ್ಚಿ ಅವುಗಳ ಮೇಲೆ ಕಠಿಣ ಕ್ರಮ ಕೈಗೊಳ್ಳದ ಹೊರತು ಇಂತಹ ಘಟನೆಗಳು ನಿಲ್ಲುವುದಿಲ್ಲ.
ಅದಕ್ಕಾಗಿ ಈ ಮುಂದಿನ ನಮ್ಮ ಬೇಡಿಕೆಗಳನ್ನು ಸರಕಾರದ ಮುಂದೆ ಇಡುತ್ತಿದ್ದೇವೆ.
೧. ಕರ್ನಾಟಕ, ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳಲ್ಲಿನ ದಾಳಿಕೋರರನ್ನು ಮತ್ತು ಅವರ ಸೂತ್ರದಾರರನ್ನು ತಕ್ಷಣ ಬಂಧಿಸಿ ಅವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.
೨. ದಾಳಿಕೋರರಿಂದ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಪಾಸ್ತಿಗೆ ಉಂಟಾದ ನಷ್ಟದ ಪರಿಹಾರವನ್ನು ವಸೂಲಿ ಮಾಡಬೇಕು.
೩. ಹಿಂದೂ ಹಬ್ಬಗಳ ಸಮಯದಲ್ಲಿ ನಿರಂತರವಾಗಿ ಮತ್ತು ಉದ್ದೇಶಪೂರ್ವಕವಾಗಿ ಗಲಭೆಗಳನ್ನು ಸೃಷ್ಟಿಸುವ ಘಟನೆಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ, ದೋಷಿಗಳಿಗೆ ರಾಷ್ಟ್ರೀಯ ಭದ್ರತಾ ಕಾಯಿದೆ (NSA) ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (UAPA) ಅಡಿಯಲ್ಲಿ ಕಠಿಣ ಕ್ರಮ ಜರುಗಿಸಬೇಕು. ಈ ಬಗ್ಗೆ ರಾಜ್ಯ ಅಥವಾ ರಾಷ್ಟ್ರೀಯ ಮಟ್ಟದಲ್ಲಿ ಒಂದು ಕಠಿಣ ನೀತಿಯನ್ನು ರೂಪಿಸಿ ಕಾನೂನು ಮಾಡಬೇಕು.
೪. ಯಾವ ಮಸೀದಿಗಳು ಮತ್ತು ಮದರಸಾಗಳು ಹಾಗೂ ಮುಲ್ಲಾ-ಮೌಲ್ವಿಗಳ ಮೂಲಕ ದ್ವೇಷಪೂರಿತ ಮತ್ತು ಹಿಂಸಾತ್ಮಕ ಬೋಧನೆಯನ್ನು ನೀಡಲಾಗುತ್ತದೆಯೋ, ಅವುಗಳ ಬಗ್ಗೆ ತನಿಖೆ ನಡೆಸಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು.
೫. ಕರ್ನಾಟಕದಲ್ಲಿ, ಹಾಗೆಯೇ ಇತರ ರಾಜ್ಯಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ತಡೆಯಲು ಪೊಲೀಸ್ ಆಡಳಿತವು ಸಮಯಕ್ಕೆ ಸರಿಯಾಗಿ ತಡೆಗಟ್ಟುವಿಕೆಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ದಕ್ಷಿಣ ಕನ್ನಡ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾದ ಶ್ರೀ ರಾಜು ಕೆ. ಇವರ ಮೂಲಕ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಕೀಲರಾದ ಶ್ರೀ ತೀರ್ಥೇಶ್, ಶ್ರೀ ಈಶ್ವರ ಕೊಟ್ಟಾರಿ, ಶ್ರೀ ಯತೀಶ್ ಬಜಾಲ್, ಶ್ರೀರಾಜೇಶ್ ಕುಡ್ವ, ಸೌ.ಜಲಜಾಕ್ಷಿ, ಶ್ರೀ ಪವನಾಂಜಯ ಮತ್ತು ಧರ್ಮ ಪ್ರೇಮಿಗಳಾದ ಶ್ರೀ ರಾಜೇಂದ್ರ ಪೇಜಾವರ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಸೌ. ಪವಿತ್ರಾ ಕುಡ್ವ, ಶ್ರೀ ಉಪೇಂದ್ರ ಆಚಾರ್ಯ, ಶ್ರೀ ರಾಜೇಶ್ ಆಚಾರ್ಯ ಉಪಸ್ಥಿತರಿದ್ದರು.
ವರದಿ, ಚಂದ್ರಶೇಖರ ಹೆಬ್ಬಾರ್ ಕೊಲ್ಯ




















