
ಕೊಪ್ಪಳ/ಕನಕಗಿರಿ :ಇಂದು ಶ್ರೀ ಸಾಯಿ ಪಬ್ಲಿಕ್ ಸ್ಕೂಲ್ ಕನಕಗಿರಿಯಲ್ಲಿ ಶಾಲಾ ಮಕ್ಕಳಿಗೆ ದೀಪಾವಳಿ ಹಬ್ಬದ ಆಚರಣೆಯ ವಿಶೇಷತೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ದೀಪ ಬೆಳಗಿಸುವ ಕಾರ್ಯಕ್ರಮ ಮತ್ತು ಮಕ್ಕಳಿಂದ ದೀಪಾಲಂಕಾರ ಚಟುವಟಿಕೆಯನ್ನು ಮಾಡಿಸಲಾಯಿತು.

ಮಕ್ಕಳು ಉತ್ಸಾಹದಿಂದ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದರು.
ಈ ಸುಸಂದರ್ಭದಲ್ಲಿ ಶಾಲೆಗೆ ಮಾನ್ಯ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸಿ ಆರ್ ಪಿ ಯವರು ಶಾಲೆಗೆ ಕಛೇರಿ ಕೆಲಸದ ನಿಮಿತ್ತ ಆಗಮಿಸಿದ್ದರಿಂದ ಶಾಲೆಯ ಮಕ್ಕಳ ಜೊತೆಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಕ್ಕಳಿಗೆ ದೀಪಾವಳಿ ಹಬ್ಬಕ್ಕೆ ಶುಭಕೋರಿದರು.
ವರದಿ ಹನುಮಂತಪ್ಪ ನಾಯಕ



















