ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅಕಾಲಿಕ ಮಳೆಗೆ ಕಂಗಾಲಾದ ರೈತರು ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ

ಕೊಪ್ಪಳ ಜಿಲ್ಲೆಯ ಗಂಗಾವತಿಯ ತಾಲೂಕಿನಲ್ಲಿ ಕಳೆದ 3 ದಿನಗಳಿಂದ ಸುರಿದ ಮಳೆಯಿಂದಾಗಿ ಗಂಗಾವತಿ, ಮರಳಿ ಹೋಬಳಿ ಸೇರಿದಂತೆ ಸುತ್ತಮುತ್ತಲಿನ ಭಾಗದಲ್ಲಿ ಬಹಳ ಬೆಳೆ ನಾಶವಾಗಿದೆ. ಈ ಭಾಗದ ರೈತರು 1 ಎಕರೆಗೆ 50ಕ್ಕೂ ಹೆಚ್ಚು ಚೀಲ ಭತ್ತ ಬೆಳೆಯುತ್ತೇವೆ ಎಂಬ ಉತ್ಸಾಹದಲ್ಲಿದ್ದ ರೈತರಿಗೆ ಹಿಂಗಾರು ಮಳೆ ಆತಂಕ ತಂದು ಒಡ್ಡಿದೆ, ರೈತರು ಎಕರೆಗೆ 35 ರಿಂದ 40 ಸಾವಿರ ಮೌಲ್ಯದ ಬೆಳೆ ಹಾನಿಯಾಗಿದೆ ಭತ್ತದ ಕಟಾವು ಹಂತಕ್ಕೆ ಬಂದಿದ್ದು ನೆಲಕ್ಕೆ ವಾಲಿದೆ ಯಂತ್ರದಿಂದ ಭತ್ತದ ಕಟಾವು ಮಾಡಿಸಿದರೆ ಸಾಕಷ್ಟು ಸಮಯ ಹಿಡಿದು ಹೆಚ್ಚಿನ ಹಣ ವ್ಯಯ ಮಾಡಬೇಕಾಗುತ್ತದೆ.
ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನಾ ನೋಂದಾಯಿತ. ದೆಹಲಿಯ ರೈತ ಸಂಘದ ಜಿಲ್ಲಾಧ್ಯಕ್ಷರಾದಂತ ದೊಡ್ಡ ಭರಮಣ್ಣ ಇವರು ಮಾತನಾಡಿ ಭತ್ತದ ಸಮೃದ್ಧ ಬೆಳೆ ಕೈ ಸೇರುವ ಹೊತ್ತಿಗೆ ಸುಗ್ಗಿಯ ಹಿಗ್ಗಿನಿಂದ ರಾಶಿಗಳನ್ನು ಮಾಡಬೇಕು ಎನ್ನುವ ಮನಸ್ಸಿಗೆ ಅಕಾಲಿಕವಾಗಿ ಸುರಿದ ಮಳೆರಾಯ ಮಣ್ಣು ಹಾಕಿದ. ತೆನೆಹೊತ್ತು ನಿಂತ ಪೈರು ನೀರು ಪಾಲಾದವು ಮುಂದೆ ಬದುಕು ಹೇಗೆ ಕಟ್ಟಿಕೊಳ್ಳಬೇಕು ಎಂದು ರೈತರು ಮನಸಲ್ಲಿ ಮರುಗುತ್ತಿದ್ದಾರೆ, ಒಮ್ಮೊಮ್ಮೆ ಸುಮ್ಮನೆ ರೈತರಾಗಬಾರದು ಎಂದು ಅನ್ನಿಸುತ್ತಿತ್ತು ಕೃಷಿ ಬಿಟ್ಟು ಏನೂ ಗೊತ್ತಿರದ ಬದುಕು ನಮ್ಮದು ಭೂತಾಯಿಯ ಸೇವೆ ಮಾಡಲು ನಿಂತರೆ ಪ್ರಕೃತಿಯ ವಿಕೋಪಕ್ಕೆ ಸಿಲುಕಿ ಬೆಳೆ ಬರುವ ಸಮಯದಲ್ಲಿ ಮಳೆರಾಯನ ಮುನಿಸು ಸರಿದರೆ ಸರಿದು ಬಿಡು , ಜೀವನ ಸಾಗಿಸುವೆವು ವರುಣದೇವ ನೀ ಮಾಡು ಮನಸ್ಸು ಆಫೀಸುಗಳಲ್ಲಿ ಕುಳಿತು ಮಾತನಾಡುವ ಕೆಲ ಅಧಿಕಾರಿಗಳಿಗೆ ಏನು ಗೊತ್ತು ರೈತರ ಬದುಕು ? ರೈತರಿಗೆ ಬಂದು ಒದಗಿರುವ ವಿಪತ್ತು ಹಗಲು ರಾತ್ರಿ ಎನ್ನದೆ ಶ್ರಮಿಸಿದ ರೈತರ ಬದುಕಿಗೆ ಬಂತು ಕುತ್ತು ಆದ ನಷ್ಟಗಳನ್ನು ಒಮ್ಮೆ ಪರಿಶೀಲಿಸಿ ಪರಿಹಾರಗಳ ಮೂಲಕ ಕೈಹಿಡಿದು ಕಣ್ಣೀರು ಒರೆಸಿದರೆ ರೈತರಿಗೆ ಒಂದಿಷ್ಟು ಒಳಿತು ಆದೀತು ಮಳೆಯಿಂದ ನಷ್ಟವಾದ ರೈತರಿಗೆ ಜಿಲ್ಲಾ ಉಸ್ತುವಾರಿ ಸಚಿವರಾದಂತ ಶಿವರಾಜ್ ತಂಗಡಗಿ ಅವರು ಈ ಕೂಡಲೇ ಪರಿಹಾರ ಕೊಡಿಸಬೇಕೆಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ರೈತರ ಸಂಘದ ಸದಸ್ಯರು ಹಾಗೂ ಸುತ್ತ ಮುತ್ತಲಿನ ರೈತ ಬಾಂಧವರು ಇದ್ದರು.

ವರದಿ ಹನುಮೇಶ ಭಾವಿಕಟ್ಟಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!