ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನಲ್ಲಿ ಬರುವ ರೈತರು ಬೆಳೆದ ಬೆಳೆಗಳ ಬೆಳೆ ಸಮೀಕ್ಷೆದಾರರು ತಪ್ಪಾಗಿ ಸಮೀಕ್ಷೆ ಮಾಡುವುದರಿಂದ ಹೆಸರು, ಉದ್ದು ನೋಂದಣಿ ಮಾಡಿಕೊಳ್ಳಲು ಪರದಾಡುವಂತಾಗಿದ್ದು ಕೂಡಲೇ ಈ ಸಮಸ್ಯೆ ಬಗೆಹರಿಸಬೇಕೆಂದು ಕಾಳಗಿ ತಾಲೂಕಿನ ರೈತರು ಆಗ್ರಹಿಸಿದ್ದಾರೆ. ಭೂಮಿ ವಿವರ ನೀಡುವ ಪಹಣಿಗೆ ಬೆಳೆ ವಿಮೆ ನಮೂದಿಸುವಲ್ಲಿ ಅಧಿಕಾರಿಗಳು ಪಿ ಆರ್ ಗಳು ಎಡವಟ್ಟಿನಿಂದ ಬೆಳೆಯ ಬೆಂಬಲ ಬಲೆಗೆ ಕತ್ರಿ ಬೀಳುತ್ತಿದೆ, ಹೀಗಾಗಿ ಬೆಂಬಲ ಬೆಲೆಯಲ್ಲಿ ಹೆಸರು, ಉದ್ದು, ಸೋಯಾ, ಖರೀದಿ ಕೇಂದ್ರದವರಿಗೆ ಪಹಣಿ, ಬೆಳೆಗೆ ಹೊಂದಾಣಿಕೆ ಆಗದ ಕಾರಣಕ್ಕೆ ಬೆಳೆ ಹೆಸರು ಉದ್ದು ಸೋಯಾ ಫಸಲು ತೆಗೆದುಕೊಳ್ಳಲು ನಿರಾಕರಿಸುತ್ತಿದ್ದಾರೆ ಇದರಿಂದ ರೈತರು ಬೆಳೆಗೆ ಬೆಂಬಲ ಸಿಗದೆ ಕಡಿಮೆ ಬೆಲೆಗೆ ದಲ್ಲಾಳಿಗಳಿಗೆ ಮಾರಾಟ ಮಾಡುವ ಪರಿಸ್ಥಿತಿ ಎದುರಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಪಸ್ವಲ್ಪ ಬೆಳೆದ ಹೆಸರು ಉದ್ದು ಸೋಯಾ ಮಾರುಕಟ್ಟೆಯಲ್ಲಿ ಕಡಿಮೆ ದರದಲ್ಲಿ ಇರುವುದರಿಂದ ರೈತರು ಬೆಂಬಲ ಬೆಲೆಗೆ ಹಾಕಲು ನೊಂದಣಿ ಮಾಡಿಸಲು ಬಂದಾಗ ಸಮಸ್ಯೆ ಆಗುತ್ತಿದೆ. ಈ ಸಮಸ್ಯೆ ಬಗೆಹರಿಸಬೇಕು ಬೆಂಬಲ ಬೆಲೆಯಲ್ಲಿ ಬೆಳೆಗಳನ್ನು ನೋಂದಾವಣೆ ಮಾಡಲು ರೈತರಿಗೆ ಬಯೋಮೆಟ್ರಿಕ್ ಕಡ್ಡಾಯ ಆಗಿರುವುದರಿಂದ ಹಿರಿಯ ನಾಗರಿಕರ ಬಯೋಮೆಟ್ರಿಕ್ ಆಗುತ್ತಿಲ್ಲ ಇವೆಲ್ಲಾ ಅಂಶಗಳನ್ನು ಪರಿಗಣಿಸಿ ಇದಕ್ಕೆ ಪರ್ಯಾಯ ಮಾರ್ಗ ಒದಗಿಸಬೇಕೆಂದು ಮಾನ್ಯ ತಹಶೀಲ್ದಾರ್ ಕಾಳಗಿ ರವರಿಗೆ ರೈತರು ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ ವೀರಣ್ಣ ಗಂಗಾಣಿ ರೈತ ಸಂಘ ತಾಲೂಕ ಅಧ್ಯಕ್ಷರು ಕಾಳಗಿ, ಜಗನ್ನಾಥ್ ಸ್ವಾಮಿ ಸಾಲಹಳ್ಳಿ ಕಲ್ಲಪ್ಪ ಹಿರೇಗೌಡ ಜಂಬಗಾ, ಲೋಕೇಶ್ ಹೊಡೆದ ಸಾಲಹಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ ಚಂದ್ರಶೇಖರ್ ಆರ್ ಪಾಟೀಲ್



















