ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪೂರ ನಗರದ ಕೆಂಗೇರಿ ಮಡ್ಡಿಯ ಶಾದಿ ಮಹಲ್ ನಲ್ಲಿ ಬರುವ ಕರ್ನಾಟಕ ವಿಧಾನಸಭೆ 2023 ಚುನಾವಣೆಯಲ್ಲಿ , ಮುಸ್ಲಿಂ ಸಮಾಜದ ಜವಾಬ್ದಾರಿ ಹಾಗೂ ರಾಜಕೀಯತರ ಮುಸ್ಲಿಂ ಸಮಾವೇಶಕ್ಕೆ ಪೂರ್ವಭಾವಿ ಸಭೆ ನಡೆಯಿತು .
ಕಳೆದ 70 ವರ್ಷಗಳಿಂದ ರಾಜಕೀಯ ಪಕ್ಷಗಳು ಮುಸ್ಲಿಂ ವೋಟ್ ಬ್ಯಾಂಕ್ ನ್ನಾಗಿ ನೋಡುತ್ತಿದ್ದಾರೆ . ಆಯಾ ರಾಜಕೀಯದಲ್ಲಿ ಪಕ್ಷಗಳಲ್ಲಿ ಸರಿಯಾಗಿ ಸ್ಥಾನಮಾನ ಇಲ್ಲದಿರುವುದು ನೋವಿನ ಸಂಗತಿ ಎಂದು ಸಭೆಯಲ್ಲಿ ಚರ್ಚೆಯಲಾಯಿತು .
ನಂತರ ಈ ಸಭೆಯಲ್ಲಿ ಮಾತನಾಡಿದ ಮೌಲಾನ ಮೊಹಸಿನ್ ಗೋಕಾಕ್ , ತೇರದಾಳ ಮತಕ್ಷೇತ್ರದಲ್ಲಿ ಮುಸ್ಲಿಮರ ಮತಗಳು 40,000 ಆಸು ಪಾಸು ನಲ್ಲಿದ್ದರೂ ಕೂಡ ಚುನಾವಣೆಯಲ್ಲಿ ಸ್ಪರ್ಧೆ ಮಾಡ್ಲಿಕ್ಕೆ ಯಾವ ಪಕ್ಷವೂ ಕೂಡ ಟಿಕೆಟ್ ಕೊಡುವುದಕ್ಕೆ ಮುಂದೆ ಬಂದಿಲ್ಲ , ಇದು ಅತ್ಯಂತ ಶೋಚನೀಯ ಸಂಗತಿಯಾಗಿದೆ , ಆದ್ದರಿಂದ ಬರುವ ವಿಧಾನಸಭೆ ಚುನಾವಣೆಯಲ್ಲಿ ನಾವುಗಳು ಬಹಳ ಜಾಗೃತರಾಗಿ ಎಲ್ಲ ಪಂಗಡಗಳು ಒಂದೇ ವೇದಿಕೆಯಲ್ಲಿ ಬಂದು , ನಮ್ಮ ಸಮಾಜದ ಹಿತಾಸಕ್ತಿಯನ್ನು ಯಾವ ಪಕ್ಷ ಕಾಪಾಡುತ್ತದೆಯೋ ಆ ಪಕ್ಷಕ್ಕೆ ಒಮ್ಮತಿದಿಂದ ಮತ ಚಲಾವಣೆ ಮಾಡಬೇಕಾಗಿದೆ . ಮುಸ್ಲಿಮರ ಮತಗಳೇ ಬೇಡವೆ ಬೇಡ ಅನ್ನೋದು ಬಿಜೆಪಿ ಪಕ್ಷವಾದರೆ , ಇನ್ನೊಂದು ಮುಸ್ಲಿಮರು ಮತಗಳು ನಮಗೆ ಬಂದೇ ಬರುತ್ತೆ ಅನ್ನೋದು ಕಾಂಗ್ರೆಸ್ ಪಕ್ಷದ ಮುಖಂಡರುಗಳ ಮಾತಾಗಿವೆ . ಪಕ್ಷದಲ್ಲಿ ಸರಿಯಾಗಿ ಸ್ಥಾನ ಕೊಟ್ಟರೂ ಕೂಡ ಮಾನ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು .
ತೇರದಾಳ ಮತಕ್ಷೇತ್ರಾದ್ಯಂತ ಮುಸ್ಲಿಮರನ್ನು ಒಂದೇ ವೇದಿಕೆಯಲ್ಲಿ ಕರೆತರಲು ವೇದಿಕೆ ಸಜ್ಜಾಗ್ತಾ ಇದೆ , ಸಹಸ್ರಾರು ಜನರ ಅಭಿಪ್ರಾಯ , ಅನಿಸಿಕೆಗಳನ್ನು ಆಲಿಸಿ , ನಂತರ ತೇರದಾಳ ಮತಕ್ಷೇತ್ರದ ಮುಸ್ಲಿಂ ಸಮಾಜ ಸಮನ್ವಯ ಸಮಿತಿ ರಚನೆಯಾಗಲಿದೆ .ಎಂದು ಹೇಳಿದರು .
ಈ ಸಂದರ್ಭದಲ್ಲಿ ರಬಕವಿ , ಬನಹಟ್ಟಿ ,ತೇರದಾಳ್ ,ರಾಂಪುರ್, ಹೊಸೂರು ,ಹಣಗಂಡಿ, ಮಹಾಲಿಂಗಪೂರ ನಗರಗಳ ಊರಿನ ಹಿರಿಯರು ಎಲ್ಲಾ ಪಕ್ಷದ ಮುಸ್ಲಿಂ ಮುಖಂಡರು ಸಮಾಜ ಹಿತ ಚಿಂತಕರು , ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಭಾಗಿಯಾಗಿದ್ದರು .
ವರದಿ : ಮಹಬೂಬ ಎಂ ಬಾರಿಗಡ್ಡಿ