ದಿನಾಂಕ 28/4/2026 ತುಮಕೂರಿನಿಂದ ಹೆಬ್ಬೂರಿಗೆ ಪ್ರಯಾಣ ಮಾಡುವಾಗ ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಸರಿಯಾದ ವ್ಯವಸ್ಥೆ ಇಲ್ಲ, ಉಚಿತ ಬಸ್ ನಿಂದಾಗಿ ಜನರಿಗೆ ಸುರಕ್ಷತೆ ಇಲ್ಲದೆ ಕೆಟ್ಟು ನಿಲ್ಲುತ್ತಿರುವ ಬಸ್ ಗಳು ಒಂದೆಡೆಯಾದರೆ ಪ್ರಥಮ ಚಿಕಿತ್ಸೆ ಡಬ್ಬಿ ನೆಪ ಮಾತ್ರಕ್ಕೆ ಅಷ್ಟೇ ಆಗಿದೆ. ಪೆಟ್ಟಿಗೆ ಖಾಲಿಯಾಗಿದ್ದು ಕಾಟನ್, ಬ್ಯಾಂಡೇಜ್ ಮತ್ತು ಔಷಧಿಗಳು ಒಂದೂ ಸಹ ಇಲ್ಲ ಇದು ಅಂದು ನಾ ಕಂಡ ದೃಶ್ಯ.
ಫಸ್ಟ್ ಏಡ್ ಖಾಲಿ ಬಾಕ್ಸ್ ನೇರವಾಗಿ ಪ್ರಯಾಣಿಕರ ಸುರಕ್ಷತೆಗೆ ಸಂಬಂಧಪಟ್ಟ ವಿಷಯ. ಪ್ರಯಾಣಿಕರ ಸುರಕ್ಷತೆಗೆ ಯಾರು ಜವಾಬ್ದಾರರು? ಇಲಾಖೆಯ ಅಧಿಕಾರಿಗಳು ಈ ಕುರಿತು ಗಮನ ಹರಿಸಲಿ.
ವರದಿ ಲಕ್ಷ್ಮಿ ತುಮಕೂರು



















