ಪುಟ್ಟ ಸರೋವರದ ಅಂಚಿನಲಿ ಬಾಗಿ ತೂಗುತಿತ್ತು
ಭೂದೇವಿಯ ಮಣ್ಣಿನ ಮಡಿಲಲಿ ಸಿಲುಕಿಕೊಂಡಿತ್ತು
ಚಲಿಸುವಾಗ ನೇತ್ರಗಳು ನಲುಗಿದ ಗೊಂಚಲ ಮೇಲೆಬಿದ್ದಿತ್ತು
ತ್ರಿವರ್ಣ ಪುಷ್ಪಗಳ ಜೊತೆಯಲಿ ಹಸಿರೆಲೆಗಳು ಮನಸೆಳೆದಿತ್ತು
ಬೊಗಸೆಯಲಿ ಮೇಲೆತ್ತಿ ಎನ್ನ ಗೂಡಿಗೆ ತರಲಾಗಿತ್ತು
ಕ್ರಿಯಾಶೀಲ ಚಿಂತನೆಯಲಿ ಕೈಬೆರಳುಗಳು ಜೋಡಿಸಿತ್ತು
ಮನದಿ ಹುದುಗಿದ್ದ ಪದಗಳಲಿ ಕಾವ್ಯವೊಂದು ಮೂಡಿತ್ತು
ಸುಪ್ರಭಾತದಲಿದು ಇಂದಿನ ಸುಲಲಿತ ಕಾವ್ಯ ಚಿತ್ತಾರವಾಗಿತ್ತು
- ಲಲಿತಾ ಕೆ ಆಚಾರ್, ಬೆಂಗಳೂರು



















