ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರಾಜಕೀಯವಯ್ಯ

ಇವರು ನಮ್ಮನ್ನಾಳುವ
ನಾವೇ ಆಳಿರಿ ಎಂದು ಆರಿಸಿ ಕಳಿಸಿದ ಜನಪ್ರತಿನಿಧಿಗಳಯ್ಯ,
ಉಳ್ಳವರು ಇಲ್ಲಿ ನೆರೆ ಸಂತ್ರಸ್ತರಿಗೆ, ನೆರವು ನೀಡಲಿಲ್ಲವಯ್ಯ,!
ಹಣವನ್ನೇ ತಿಂದು ತೇಗಿ
ನುಂಗಿ ನೀರು ಕುಡಿದರಯ್ಯ,
ಉಳ್ಳವರು ಅಕ್ರಮ ಗಣಿಗಾರಿಕೆಯಲ್ಲಿ,
ಸಕ್ರಿಯವಾಗಿ ತೊಡಗಿಸಿಕೊಂಡರಯ್ಯ,
ನಿಮ್ಮೂರ ಸ್ವರ್ಗ ಮಾಡುತ್ತೇವೆಂದು
ಬಡ ಜನರನ್ನು ಬಗ್ಗು ಬಡಿದರಯ್ಯ!
ಲೈಂಗಿಕ ಹಗರಣವ ಮಾಡಿದರೂ,
ಮಂತ್ರಿಗಳಾಗಿ ಮೆರೆವರಯ್ಯ!
ಜಮೀನು ಕಬಳಿಸಿ, ಜೈಲು ಸೇರಿದರೂ
ಜಾಮೀನಿನ ಮೇಲೆ
ಬಯಲಿಗೆ ಬಂದರಯ್ಯ,!
ಸ್ವಾರ್ಥ ಸಾಧನೆಗೆ ಇವರು
ಏನೆಲ್ಲ ಮಾಡಲೂ ಹೇಸರಯ್ಯ
ಯಾಕೆಂದು ಕೇಳಲು ಹೋದರೆ
ಇದು, ‘ರಾಜಕೀಯ,’ ನಿನಗರ್ಥವಾಗುವುದಿಲ್ಲ,
ಎನ್ನುವರಯ್ಯ!
ಅಧಿಕಾರ ಸಿಕ್ಕ ಮೇಲೆ
ನಾವಾರು, ತಾವಾರು ಎಂಬುದನ್ನೇ ಮರೆಯುವರಯ್ಯ, ಇದು ಎಂಥ ಲೋಕವಯ್ಯ,
ಇದೇ ರಾಜಕೀಯವಯ್ಯ!.

  • ಶಿವಪ್ರಸಾದ್ ಹಾದಿಮನಿ, ಕೊಪ್ಪಳ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!