ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ

ಮೊಬೈಲ್ ಕೈಗೆ ಬಂದ ಮೇಲೆ ಪುಸ್ತಕ ಮೂಲೆ ಸೇರಿತು, ಬುದ್ಧಿ ಬಾಡಿಗೆ ಹೋಯಿತು.
ರೀಲ್ಸ್ ನೋಡಿ 2 ಗಂಟೆ ಕಳೆಯುತ್ತೇವೆ, ಆದರೆ 2 ಪುಟ ಓದಲು ಸಮಯ ಇಲ್ಲ ಅಂತೇವೆ.

ಪುಸ್ತಕ ಏಕೆ ಓದಬೇಕು?

  1. ಮೊಬೈಲ್ ಕಣ್ಣು ಕೆಡಿಸುತ್ತೆ, ಪುಸ್ತಕ ಕಣ್ಣು ತೆರೆಸುತ್ತೆ: ಇನ್‌ಸ್ಟಾಗ್ರಾಮ್ 30 ಸೆಕೆಂಡ್ ಖುಷಿ ಕೊಡುತ್ತೆ. ಪುಸ್ತಕ 30 ವರ್ಷದ ಅನುಭವ ಕೊಡುತ್ತೆ. ಮೊಬೈಲ್ ನಿನ್ನನ್ನು ಗ್ರಾಹಕನನ್ನಾಗಿ ಮಾಡುತ್ತೆ, ಪುಸ್ತಕ ನಾಯಕನನ್ನಾಗಿ ಮಾಡುತ್ತೆ.
  2. ಸತ್ತವರ ಜೊತೆ ಮಾತಾಡುವ ಒಂದೇ ದಾರಿ: ಗಾಂಧೀಜಿ ಜೊತೆ, ಬಸವಣ್ಣನ ಜೊತೆ, ಅಂಬೇಡ್ಕರ್ ಜೊತೆ, ವಿವೇಕಾನಂದರ ಜೊತೆ ಮಾತಾಡಬೇಕು ಅಂದರೆ ಪುಸ್ತಕ ಬಿಟ್ಟು ಬೇರೆ ದಾರಿ ಇಲ್ಲ. ಅವರ ತಲೆ, ನಿಮ್ಮ ಕೈಗೆ.
  3. ದುಡ್ಡು ಕೊಟ್ಟು ಕೊಳ್ಳಲಾಗದ ಸಂಪತ್ತು: ಮನೆ ಕಟ್ಟಿಸಬಹುದು, ಕಾರು ತಗೋಬಹುದು. ಆದರೆ ವಿವೇಚನೆ, ತಾಳ್ಮೆ, ಜ್ಞಾನ – ಇವನ್ನು ಪುಸ್ತಕ ಮಾತ್ರ ಕೊಡುತ್ತೆ. ಬುದ್ಧಿ ಬ್ಯಾಂಕಿನಲ್ಲಿ ಸಿಗಲ್ಲ, ಗ್ರಂಥಾಲಯದಲ್ಲಿ ಸಿಗುತ್ತೆ.
  4. ಮೌಢ್ಯಕ್ಕೆ ಮದ್ದು: ಜಾತ್ರೆ, ಜ್ಯೋತಿಷ್ಯ, ಪವಾಡ ಬಾಬಾ – ಇವಕ್ಕೆ ಹೆದರುವವನು ಪುಸ್ತಕ ಓದಿದವನಲ್ಲ. “ದೇವಲೋಕ-ಮತ್ರ್ಯಲೋಕವೆಂಬುದು ಬೇರಿಲ್ಲ” ಅಂತ ಬಸವಣ್ಣ ಬರೆದದ್ದು ಓದಿದವನು ವೈಚಾರಿಕನಾಗುತ್ತಾನೆ.

ಹೇಗೆ ಶುರು ಮಾಡೋದು?

  1. ದಿನಕ್ಕೆ 10 ಪುಟ: ಟಾಯ್ಲೆಟ್‌ನಲ್ಲಿ ಮೊಬೈಲ್ ಬದಲು ಪುಸ್ತಕ ಇಟ್ಕೊಳ್ಳಿ. ಬೆಳಗ್ಗೆ ಕಾಫಿ ಜೊತೆ 10 ಪುಟ. ವರ್ಷಕ್ಕೆ 12 ಪುಸ್ತಕ ಓದಿರ್ತೀರಿ. ಸಣ್ಣ ಹನಿ, ದೊಡ್ಡ ಸಮುದ್ರ.
  2. ಮಕ್ಕಳಿಗೆ ಮೊದಲು ಕೊಡಿ: ಮಗುವಿನ ಕೈಗೆ 2 ವರ್ಷಕ್ಕೆ ಮೊಬೈಲ್ ಕೊಡುವ ಬದಲು ಚಿತ್ರಕಥೆ ಪುಸ್ತಕ ಕೊಡಿ. ಮೊಬೈಲ್ ಕೊಟ್ಟರೆ ರೋಗಿ ಆಗ್ತಾನೆ, ಪುಸ್ತಕ ಕೊಟ್ಟರೆ ಯೋಗಿ ಆಗ್ತಾನೆ.
  3. ಟಿವಿ ಕಡಿಮೆ, ಓದು ಜಾಸ್ತಿ: ಧಾರಾವಾಹಿ ನೋಡಿ ಅತ್ತರೆ ಕಣ್ಣೀರು ವ್ಯರ್ಥ. ಪುಸ್ತಕ ಓದಿ ಅತ್ತರೆ ಹೃದಯ ಶುದ್ಧ.
    4.ಸುಖಾ ಸುಮ್ಮನೆ ಟೈಂಪಾಸಿಗಾಗಿ ಖರ್ಚು ಮಾಡುವ ಹಣದ ಬದಲು
    ಅದೇ ದುಡ್ಡಲ್ಲಿ ಗ್ರಂಥಾಲಯ ಕಟ್ಟಿ, ಊರಿಗೆ ಊರೇ ಸೇರಿ ಒಂದು ಪುಸ್ತಕ ಭಂಡಾರ ಆಗುತ್ತದೆ.
    ನೆಮ್ಮದಿಯ ಜೀವನ ಎಲ್ಲರದಾಗುತ್ತದೆ.
    ಅರಮನೆಕ್ಕಿಂತ ಗ್ರಂಥಾಲಯ ದೊಡ್ಡದು – ಅಲ್ಲಿ ಶ್ರೀಮಂತಿಕೆ , ಅಧಿಕಾರ, ದರ್ಪದ ಬಗ್ಗೆ ತೋರ್ಪಡಿಸಿಕೊಳ್ಳುತ್ತಾರೆ, ಇಲ್ಲಿ ನಿನ್ನನ್ನೇ ದೇವರನ್ನಾಗಿ ಮಾಡುತ್ತಾರೆ. ಏನಂತೀರಿ.
    ಇದು ನಿಜವಲ್ಲವೇ !!!

ಡಾ. ಬಾಬಾಸಾಹೇಬ್ ಅಂಬೇಡ್ಕರ್ ಹೇಳಿದರು – “ನಾನು ದೇವರನ್ನು ನಂಬಲ್ಲ, ಆದರೆ ಪುಸ್ತಕವನ್ನು ನಂಬುತ್ತೇನೆ”. ಏಕೆಂದರೆ ಪುಸ್ತಕ ಅವರನ್ನು ಬ್ಯಾರಿಸ್ಟರ್ ಮಾಡಿತು, ಸಂವಿಧಾನ ಶಿಲ್ಪಿ ಮಾಡಿತು.
ಎನ್ನುವುದು ನಾವು ಯಾರೂ ಎಂದೆಂದಿಗೂ ಮರೆಯಬಾರದು.
ಅವರ ಆಶಯದಂತೆ ಸಾಗಬೇಕು.
ಅಂದಾಗಲೇ ಮಾತ್ರ ಸಮೃದ್ಧ ಸಮಾಜ ಮತ್ತು ಸುಂದರ, ಸಂಪತ್ ಭರಿತ ದೇಶ ನಿರ್ಮಾಣ ಮಾಡಲು ಖಂಡಿತವಾಗಿಯೂ ಸಾಧ್ಯವಿದೆ.
ಅಲ್ಲವೇ…..???

ನಿಮ್ಮ ಮಕ್ಕಳಿಗೆ ಆಸ್ತಿ ಬೇಡ, ಓದುವ ಹವ್ಯಾಸ ಕಲಿಸಿ.
ಆಸ್ತಿ ಕರಗುತ್ತೆ, ಹವ್ಯಾಸ ಬದುಕು ಕಟ್ಟುತ್ತೆ. ಆದರ್ಶ ಸಮಾಜ ‌ಹಾಗೂ ದೇಶ ನಿರ್ಮಾಣ ವಾಗುತ್ತದೆ.

ಒಂದು ಪುಸ್ತಕ, ಒಂದು ಪೆನ್ನು, ಒಂದು ತಲೆ – ಜಗತ್ತನ್ನೇ ಬದಲಾಯಿಸಬಹುದು.
ನಿಮ್ಮ ಮೊಬೈಲ್ ಚಾರ್ಜ್ ಖಾಲಿ ಆಗುತ್ತೆ, ಪುಸ್ತಕದ ಚಾರ್ಜ್ ಜನ್ಮಕ್ಕೂ ಖಾಲಿ ಆಗಲ್ಲ.

ಓದಿ, ವಿಕಾಸವಾಗು, ಅನ್ಯಾಯವನ್ನು ಪ್ರಶ್ನಿಸು, ಬೆಳಕಾಗು ಲೋಕಕ್ಕೆಲ್ಲ.

  • ಸಂಗಮೇಶ ಎನ್ ಜವಾದಿ
    ಬರಹಗಾರರು, ಪತ್ರಕರ್ತರು, ಚಿಂತಕರು, ಬೀದರ್ ಜಿಲ್ಲೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!