ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅನ್ಯಾಯ ಅಕ್ರಮ ಅತ್ಯಾಚಾರ ಬಲತ್ಕಾರ ವರದಕ್ಷಿಣೆ ಕಿರುಕುಳಕ್ಕೆ ಒಳಗಾದವರಿಗೆ ಆಸರೆ ನಮ್ಮ ಮಹಿಳಾ ಸಾಂತ್ವನ ಕೇಂದ್ರ : ಗಂಗಾ ತೋಟದ

ವಿಜಯಪುರ/ಮುದ್ದೇಬಿಹಾಳ :
ಶಾ|| ಸೋಗಮಲ್ ಪೀರಾಜಿ ಓಸ್ವಾಲ್ ಸರಕಾರಿ ಪ್ರಥಮ ದರ್ಜೆ ಕಾಲೇಜು, ಮುದ್ದೇಬಿಹಾಳ BA 6ನೇ ಸೆಮಿಸ್ಟರ್ ನ ಸಮಾಜಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ” ಮಹಿಳೆಯರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮಹಿಳಾ ಸಾಂತ್ವನ ಕೇಂದ್ರದ ಪಾತ್ರ ” ದ ವಿಷಯವಾಗಿ ಕ್ಷೇತ್ರ ಭೇಟಿಗೆಂದು ಮುದ್ದೇಬಿಹಾಳದ ಶ್ರೀ ಅಮರೇಶ್ವರ ವಿದ್ಯಾವರ್ಧಕ ಸಂಘ (ರಿ.)ಮಹಿಳಾ ಸಾಂತ್ವನ ಕೇಂದ್ರ ಮುದ್ದೇಬಿಹಾಳಕ್ಕೆ ಭೇಟಿ ನೀಡಿದರು.
ವಿದ್ಯಾರ್ಥಿಗಳೊಂದಿಗೆ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ಹಂಪಣ್ಣ ಹಾಗೂ ಉಪನ್ಯಾಸಕರದ ಶ್ರೀಮತಿ ಗೀತಾ ಅಂಕಲಗಿ ಅವರು ಭಾಗವಹಿಸಿದ್ದರು.

ಮಹಿಳಾ ಸಾಂತ್ವನ ಕೇಂದ್ರದ ಮಾರ್ಗದರ್ಶಕರಾದ ಶ್ರೀಮತಿ ಗಂಗಾ ತೋಟದ ರವರು ಮಹಿಳಾ ಸಾಂತ್ವನ ಕೇಂದ್ರ ಹುಟ್ಟಿಕೊಂಡಿದ್ದು ಶ್ರೀ ಅಮರೇಶ್ವರ ವಿದ್ಯಾವರ್ಧಕ ಸಂಘ (ರಿ) ನಾಲತವಾಡ ಶ್ರೀ ಬಸವರಾಜ ಎಸ್.ನವಲಿ ಹಾಗೂ ಬಳಗದವರಿಂದ, ಅದರ ಪ್ರಮುಖ ಉದ್ದೇಶ, ಕಾರ್ಯ ವ್ಯಾಪ್ತಿ, ಮಾಡಿರುವ ಸಾಧನೆಗಳು, ಕಾರ್ಯ ಮಧ್ಯದಲ್ಲಿ ಅನುಭವಿಸಿದ ಸಿಹಿ-ಕಹಿ ಅನುಭವಗಳು, ತಮ್ಮ ಜೊತೆಗೆ ಎಲ್ಲಾ ಇಲಾಖೆಗಳು ನೀಡಿರುವ ಸಹಾಯ ಸಹಕಾರವನ್ನು ಸ್ಮರಿಸಿದರು.
ನಿರ್ವಹಿಸಿದ ಸಾಕಷ್ಟು ದಾಖಲೆಗಳನ್ನು ವಿವರಿಸುತ್ತಾ ಸಂಪೂರ್ಣ ಮಾಹಿತಿ ನೀಡಿದರು.
ಒಟ್ಟಾರೆಯಾಗಿ ಕ್ಷೇತ್ರ ಭೇಟಿ ಯಶಸ್ವಿಯಾಯಿತು. ಸಂಪೂರ್ಣವಾದ ಮಾಹಿತಿ ಸಿಕ್ಕಿತು. ವಿದ್ಯಾರ್ಥಿಗಳೆಲ್ಲಾ ಮೇಡಂ ರವರಿಗೆ ಧನ್ಯವಾದಗಳನ್ನು ಹೇಳಿದರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!