ಸಿರುಗುಪ್ಪ- ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಅಪಾರ ಪ್ರತಿಭೆ ಅಡಗಿದೆ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ಮತ್ತು ಪ್ರೋತ್ಸಾಹ ದೊರೆತರೆ ಅವರು ಶ್ರೇಷ್ಠತೆಯ ಉನ್ನತ ಸಾಧನೆ ಸಾಧಿಸಬಲ್ಲರು ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಸಾಧನೆ ಮಾಡಲು ಶಿಕ್ಷಕರ ಮಾರ್ಗದರ್ಶನವನ್ನು ಸದುಪಯೋಗ ಪಡಿಸಿಕೊಳ್ಳಬೇಕು ವಿದ್ಯಾರ್ಥಿಗಳು ವಿದ್ಯೆಯ ಜೊತೆಗೆ ವಿನಯ ಭಾವನೆ ಬೆಳೆಸಿಕೊಳ್ಳಬೇಕು ಎಂದು ಬಳ್ಳಾರಿ ಮಹಾನಗರ ಗಾಂಧಿನಗರದ ನಾರಾಯಣ ಸಿ ಓ ಸ್ಕೂಲ್ ಪ್ರಿನ್ಸಿಪಲ್ ರಾಮಕೃಷ್ಣ ಅವರು ವಿದ್ಯಾರ್ಥಿನಿ ಎ. ಸನಾ ತಬಸ್ಸುಮ್ ತಂದೆ ಎ. ಮೊಹಮ್ಮದ್ ರಫಿ ತಾಯಿ ಹೆಚ್. ಸಲ್ಮಾ ಬಾನು ಸಿ ಬಿ ಎಸ್ ಇ ಬೋರ್ಡ್ ಹತ್ತನೇ ಕ್ಲಾಸ್ ವಿಷಯವಾರು ಅಂಕಗಳಲ್ಲಿ ಇಂಗ್ಲಿಷ್ ಶೇ,97, ಹಿಂದಿ ಕೋರ್ಸ್ ಶೇ. 96, ಗಣಿತ ಶೇ,94, ವಿಜ್ಞಾನ ಶೇ. 94, ಸಮಾಜ ವಿಜ್ಞಾನ ಶೇ,91 ರಷ್ಟು ಸಾಧನೆ ಗೆ ಶುಭ ಹಾರೈಸಿ ಸಲಹೆ ನೀಡಿದರು. ನಾರಾಯಣ ಪಿಯುಸಿ ಕಾಲೇಜಿನ ಪ್ರಿನ್ಸಿಪಲ್ ಮೊಹಮ್ಮದ್ ಗೌಸ್ ಬಾಷಾ ಅವರು ಮಾತನಾಡುತ್ತಾ ವಿದ್ಯಾರ್ಥಿನಿ ಎ.ಸನಾ ತಬಸ್ಸುಮ್ ಮುಂದಿನ ಭವಿಷ್ಯ ಉಜ್ವಲವಾಗಲಿ ಈ ಸಾಧನೆ ಮಾಡಿದಂತೆ ಮುಂದಿನ ದಿನಗಳಲ್ಲಿ ಸಾಧನೆ ಮಾಡಿ ಕುಟುಂಬದ ಊರಿನ ಮತ್ತು ಶಾಲಾ ಕಾಲೇಜು ಹೆಸರು ತರಬೇಕು ಶಾಲಾ ಶೈಕ್ಷಣಿಕ ಉತ್ತಮ ಸಾಧನೆಗೈದ ಎ. ಸನಾ ತಬಸ್ಸುಮ್ ಶಿಕ್ಷಣದೊಂದಿಗೆ ಶಿಸ್ತು ಮತ್ತು ಪರಿಶ್ರಮವು ಸಮಾನವಾಗಿ ಅಗತ್ಯವಾಗಿದ್ದು ತನ್ನ ಗುರಿಯನ್ನು ಸಾಧಿಸಲು ನಿರಂತರ ಪ್ರಯತ್ನಿಸಬೇಕು ಗೌರವ ಕೀರ್ತಿ ಹೆಚ್ಚಿಸಿದುದಕ್ಕೆ ಸಲಹೆ ನೀಡಿ ಹಾರೈಸಿದರು.
ಬಳ್ಳಾರಿ ನಾರಾಯಣ ರೀಜನಲ್ ಇನ್ ಚಾರ್ಜ್ ದೇವರಾಜ್ ಅವರು ಮಾತನಾಡಿ ಎ. ಸನಾ ತಬಸ್ಸುಮ್ ಸಿ ಬಿ ಎಸ್ ಇ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ 2025-26ನೇ ಶೈಕ್ಷಣಿಕ ವರ್ಷದ ಹತ್ತನೇ ತರಗತಿ ಪರೀಕ್ಷೆಯಲ್ಲಿ ಫಲಿತಾಂಶ ಶೇ 94.4% ರಷ್ಟು 472/500 ಅಂಕಗಳಿಸಿ ಪಡೆಯುವ ಮೂಲಕ ಉತ್ತೀರ್ಣ ಉತ್ತಮ ಸಾಧನೆಗೆ ಪೋಷಕರ ಮತ್ತು ಶಿಕ್ಷಕರ ಮಾರ್ಗದರ್ಶನದಿಂದ ಈ ಅಂಕ ಬರಲು ಸಾಧ್ಯವಾಗಿದೆ ಎಂದು ತಮ್ಮ ಪ್ರಶಂಸೆ ವ್ಯಕ್ತಪಡಿಸಿ ಜೀವನದಲ್ಲಿ ಇನ್ನೂ ಉತ್ತಮ ಸಾಧನೆ ಮಾಡುವಂತೆ ಶುಭ ಹಾರೈಸಿದರು.
ನಾರಾಯಣ ಸ್ಕೂಲ್ ಅಂಡ್ ಕಾಲೇಜ್ ಎ ಜಿ ಎಂ ಬಳ್ಳಾರಿ ಬಾಷಾ ಅವರು ಮಾತನಾಡಿ ವಿದ್ಯಾರ್ಥಿನಿ ಎ.ಸನಾ ತಬುಸ್ಸುಮ್ ಅವರು ಹತ್ತನೇ ತರಗತಿಯಲ್ಲಿ ಹೆಚ್ಚಿನ ಅಂಕ ಗಳಿಸಿ ಶಾಲೆಗೆ ಕೀರ್ತಿ ತಂದಿರುವುದಕ್ಕೆ ಕೃತಜ್ಞತೆ ಶುಭ ಹಾರೈಸಿದರು.
ಬಳ್ಳಾರಿ ಮಹಾನಗರದ ಮಹೆಬೂಬಿಯ ಅಶ್ರಫಿ ಮಜೀದ್ ಮೊಹಲ್ಲಾ ರಫೀಕ್ ಗೃಹದಲ್ಲಿ ಸನಾ
ತಬಸ್ಸುಮ್ ಅವರಿಗೆ ದೊರೆತ ಗೌರವಕ್ಕೆ ಹೃತ್ಪೂರ್ವಕ ಹರ್ಷ ವ್ಯಕ್ತಪಡಿಸಿ ಹೂವು ಗುಚ್ಚೆ ಫಲ ಶಾಲುಪೊಷಿ ಕಾಣಿಕೆ ನೀಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಮಾಜ ಸುಧಾರಕ ಅಲ್ಹಾಜ್ ಅಬ್ದುಲ್ ನಬಿ ಚಿಸ್ತಿ ನಿಜಾಮಿ ಹಾಜಿ ಜರಿನಾ ಬೇಗಂ ಎ.ಮೊಹಮ್ಮದ್ ನೌಷಾದ್ ಅಲಿ, ಶಾನು ಬೇಗಂ, ಸಾಬೀರಾ ಬೇಗಂ, ಎ.ನಿಜಾಮ್ ಮೋದ್ದಿನ್, ಡಾ ಮೊಹಮ್ಮದ್ ಹಾಜಿ, ಹಾಜಿ ಎ. ಮೊಹಮ್ಮದ್ ಇಬ್ರಾಹಿಂ, ಶಬಾನ ಬೇಗಮ್, ಕುಟುಂಬದ ಎಲ್ಲ ಸದಸ್ಯರು ನಾರಾಯಣ ಶಾಲಾ ಕಾಲೇಜು ಶಿಕ್ಷಣ ಸಂಸ್ಥೆಯ ಭೋದಕ ಭೋದ ಖೇತರ ಸಿಬ್ಬಂದಿ ಮತ್ತಿತರರು ಇದ್ದರು.
ಸರ್ವರಿಗೂ ಸಿಹಿ ವಿತರಿಸಲಾಯಿತು.
ವರದಿ : ಮಸೀದಿ,ಅಬ್ದುಲ್ ಗೌಸ್, ಸಿರುಗುಪ್ಪ



















