ಹುಟ್ಟು ಹಬ್ಬ ಹಾಗೂ ಮದುವೆಯ ಸವಿನೆನಪಿಗೆ ಪರಿಸರ ಪ್ರೇಮಿಗಳಿಂದ ಉಡುಗೊರೆ
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್ ಕೆ ಜಿ ಹಾಗೂ ಯು ಕೆ ಜಿ ಮಕ್ಕಳಿಗೆ ಕೃಷಿ ಭಾವಿಕಟ್ಟಿ ಹುಟ್ಟು ಹಬ್ಬ ಹಾಗೂ ರಘು ಅವರ ಮದುವೆಯ ಸವಿನೆನಪಿಗೆ ಮಕ್ಕಳಿಗೆ ಸಮವಸ್ತ್ರ ವಿತರಣೆ ಮಾಡಲಾಯಿತು.
ಡಣಾಪುರ ಹನುಮೇಶ ಭಾವಿಕಟ್ಟಿಯವರ ಮಗಳಾದ ಕೃಷಿ ಭಾವಿಕಟ್ಟಿಯ ಮೊದಲ ವರ್ಷದ ಹುಟ್ಟು ಹಬ್ಬದ ಆಚರಣೆಯನ್ನು ಸರಳವಾಗಿ ಸರಕಾರಿ ಶಾಲೆಯ ಎಲ್ ಕೆಜಿ, ಯುಕೆಜಿ ಮಕ್ಕಳಿಗೆ ಸಮವಸ್ತ್ರ ನೀಡುವ ಮೂಲಕ ದುಂದು ವೆಚ್ಚ ಮಾಡದೆ, ಉಪಯುಕ್ತವಾದ ಆಚರಣೆ ಮಾಡಿಕೊಂಡು ಸರಕಾರಿ ಶಾಲೆಯ ಅಭಿಮಾನವನ್ನು ಮೆರೆದಿದ್ದಾರೆ ಇದರೊಂದಿಗೆ ಆತ್ಮಿಯ ಗೆಳಯ ರಾಘು ರಾಠೋಡ ಅವರ ಮದುವೆಯ ಸವಿನೆನಪಿಗೆ ಈ ಕಾರ್ಯಕ್ಕೆ ಕೈಜೋಡಿಸಿ ಸರಕಾರಿ ಶಾಲೆಯ ಅಭಿವೃದ್ದಿಗೆ ಮೊದಲ ಹೆಜ್ಜೆಗೆ ಸಹಕಾರ ನೀಡಿದ್ದಾರೆ.
ಪ್ರೇರಣೆ
ಖಾಸಗಿ ಶಾಲೆಗೆ ಹೋಲಿಸಿದರೆ ಹೆಚ್ಚಿನ ಸೌಲಭ್ಯ ಹಾಗೂ ಗುಣಮಟ್ಟದ ಶಿಕ್ಷಕರನ್ನೊಳಗೊಂಡ ಸರಕಾರಿ ಶಾಲೆ ಇದಾಗಿದ್ದು, ಇದರ ಬಗ್ಗೆ ನಾವುಗಳು ಎಚ್ಚೆತ್ತುಗೊಳ್ಳಬೇಕು ಸರಕಾರಿ ಶಾಲೆಯನ್ನು ಮಾದರಿ ಮಾಡಬೇಕೆಂದುಕೊಂಡಿದ್ದೇವೆ .
ಶಾಲೆಯ ಹಳೆಯ ವಿದ್ಯಾರ್ಥಿ ಎಂದು ಒಂದು ಟೀಮ್ ಮಾಡಿಕೊಂಡಿದ್ದೇವೆ. ಇದು ನಮ್ಮ ಮೊದಲ ಹೆಜ್ಜೆಯಾಗಿದೆ.
ಇನ್ನೂ ಅನೇಕ ಮೂಲ ಸೌಲಭ್ಯಗಳೊಂದಿಗೆ ಹಾಗೂ ಶಿಕ್ಷಣದಲ್ಲಿ ಮಕ್ಕಳ ಪಾಲ್ಗೊಳ್ಳುವಂತೆ , ಸುಧಾರಣೆಗಳು ಸೇರಿದಂತೆ ನಮ್ಮ ಸರಕಾರಿ ಶಾಲೆಗಾಗಿ ಅನೇಕ ಯೋಜನೆಗಳನ್ನು ಮಾಡುವ ಪ್ರಯತ್ನದಲ್ಲಿ ಇದ್ದಿವಿ ಎಂದು ಹನುಮೇಶ ಭಾವಿಕಟ್ಟಿ ತಿಳಿಸಿದರು.
ಈ ವೇಳೆಯಲ್ಲಿ ತಾಲೂಕ ಪಂಚಾಯತ ಮಾಜಿ ಅಧ್ಯಕ್ಷರು ಪರಿಸರ ಪ್ರೇಮಿಗಳಾದ ರಫೀ ಅವರು ಮಾತನಾಡಿ ಸರಕಾರಿ ಶಾಲೆಯ ಬಗ್ಗೆ ಈ ಕಾಳಜಿ ಮಾದರಿಯ ಕಾರ್ಯ, ಎಲ್ಲರೂ ಮೋಜು, ಮಸ್ತಿ ಎಂದು ದುಂಧು ವೆಚ್ಚ ಮಾಡುವ ಬದಲು ಪ್ರತಿಯೊಬ್ಬರೂ ಈ ರೀತಿಯಲ್ಲಿ ಹುಟ್ಟು ಹಬ್ಬವಾಗಲಿ ,ಸವಿನೆನಪಿನ ಸಮಾರಂಭವಾಗಿ ಸರಕಾರಿ ಶಾಲೆಯಲ್ಲಿ ಅಭಿವೃದ್ದಿಯ ಕಾರ್ಯದಲ್ಲಿ ತೊಡಗಿದರೆ ಶಾಲೆಗಳು ಅಭಿವೃದ್ದಿಯಾಗಿವುದರಲ್ಲಿ ಯಾವುದೆ ಸಂದೇಹವಿಲ್ಲ ಎಂದರು.
ಈ ವೇಳೆಯಲ್ಲಿ ಕೆವೈಟಿಸಿ ಟೀಮ್ ಅರ್ಜುನ್ ಮಾತನಾಡಿ ಸರಕಾರಿ ಶಾಲೆಯನ್ನು ಬೆಳೆಸುವ ಈ ಒಂದು ಪುಟ್ಟ ಪ್ರಯತ್ನ ಇತರರಿಗೂ ಮಾದರಿ ಎಂದರು. ಶಾಲೆಯ ಮಕ್ಕಳಲ್ಲಿ ಮತ್ತಷ್ಟು ಶಾಲೆಯ ಬಗ್ಗೆ ಕಾಳಜಿ ಹಾಗೂ ಉತ್ಸಾಹ ಹೆಚ್ಚಿಸುತ್ತದೆ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರುಗಳಾದ ವೆಂಕೇಶ ಸರ್ ಹಾಗೂ ಶರಣಸವ ಶಿಕ್ಷಕರು ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷರಾದ ಕೆ .ಆನಂದಪ್ಪ ಹಾಗೂ ಎಂ ಭುವನೇಶ ಮತ್ತು ಎಲ್ ಕೆ ಜಿ , ಯು ಕೆ ಜಿ ಶಿಕ್ಷಕಿಯಾದ ಪವಿತ್ರ ಹಾಗೂ ಹಸಿರು ಬಳಗದ ರಾಘವೇಂದ್ರ ಕೆವೈಟಿಸಿ ಅರ್ಜುನ್ , ಮುತ್ತಣ್ಣ , ಗೂಡಪಾಷ ಇನ್ನಿತರರು ಭಾಗಿ ಇದ್ದರು.
- ಕರುನಾಡ ಕಂದ ಪತ್ರಿಕೆ



















