ಹನೂರು: ತಾಲೂಕಿನ ಮಣಗಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೈರನತ್ತ ಗ್ರಾಮದಲ್ಲಿ 2 ಕೋಟಿ 94 ಲಕ್ಷ ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ ಎಂ ಆರ್ ಮಂಜುನಾಥ್ ರವರು ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಗ್ರಾಮಸ್ಥರು ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಶಾಸಕರು ಮಾತನಾಡಿ ಜಿಲ್ಲಾ ವಿಪತ್ತು ನಿರ್ವಹಣಾ ನಿಧಿಯಿಂದ ಈ ಅನುದಾನ ಬಂದಿದ್ದು ಹಲವಾರು ಕೆಲಸಗಳು ಇದ್ದರೂ ಈ ಸೇತುವೆ ನಿರ್ಮಾಣ ಮಾಡಿದರೆ ಗ್ರಾಮಸ್ಥರಿಗೆ ಅನುಕೂಲ ಆಗುತ್ತದೆ ಎಂಬುದನ್ನು ಮನದಲ್ಲಿಟ್ಟುಕೊಂಡು ಈ ಸೇತುವೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿಲಾಗಿದೆ ಎಂದರು ನಂತರ ಮಾತನಾಡಿದ ಅವರು ನಮ್ಮ ಜಿಲ್ಲಾಧಿಕಾರಿಯವರು ಈ ಅನುದಾನ ನೀಡಿರುವುದಕ್ಕೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಗುತ್ತಿಗೆದಾರನಿಗೆ ಶಾಸಕರಿಂದ ಖಡಕ್ ಆದೇಶ :
ಸೇತುವೆ ಕಾಮಗಾರಿಯು ಗುಣಮಟ್ಟದಿಂದ ಕೂಡಿರಬೇಕು ಕಾಮಗಾರಿ ನಡೆಯುವ ಜಿ ಪಿ ಎಸ್ ಫೋಟೋಗಳನ್ನು ನನಗೆ ಕಳುಹಿಸಬೇಕೆಂದು ಗುತ್ತಿಗೆದಾರನಿಗೆ ಖಡಕ್ ಆದೇಶ ನೀಡಿ, ಕಾಮಗಾರಿ ನಡೆಯುವ ವೇಳೆಯಲ್ಲಿ ಸ್ಥಳೀಯರು ನಿಂತು ಅಚ್ಚು ಕಟ್ಟಾಗಿ ಕಾಮಗಾರಿ ಮಾಡಿಸಿಕೊಳ್ಳಿ ಏನೇ ಸಮಸ್ಯೆಯಾದರೂ ನನ್ನ ಗಮನಕ್ಕೆ ತನ್ನಿ, ಗ್ರಾಮದಲ್ಲಿ ಇನ್ನು ರಸ್ತೆ ಚರಂಡಿ ಇನ್ನಿತರ ಸಮುದಾಯದ ಕಾಮಗಾರಿಗಳು ಆಗಬೇಕಿದೆ ಹಂತ ಹಂತವಾಗಿ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಣಗಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರು ಸೋಮಶೇಖರ್ , ಶಾಗ್ಯ ಬಾಬಣ್ಣ, ಎ ಇ ಇ ಕುಮಾರ್,ಗ್ರಾಮಸ್ಥರಾದ ಲೋಕೇಶ್,ಮಧು, ರಾಚಪ್ಪ, ನಿಂಗರಾಜು, ಶಾಗ್ಯ ಬಾಬು ಸೇರಿದಂತೆ ಗ್ರಾಮಸ್ಥರು ಯುವಕರು ಇದ್ದರು.
ವರದಿ ಉಸ್ಮಾನ್ ಖಾನ್



















