ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕ ಕೌಠಾ (ಬಿ.) ಗ್ರಾಮದ ಹರಳಯ್ಯ ಪ್ರೌಢಶಾಲೆ ಆವರಣದಲ್ಲಿ ದಿನಾಂಕ 07/12/25ರ ರವಿವಾರದಂದು 1995-1996ನೇ ಸಾಲಿನ ಹಳೆ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರು ವಂದನ ಕಾರ್ಯಕ್ರಮವನ್ನು ಉದ್ದೇಶಿಸಿ ತಂದೆ ತಾಯಿ, ಗುರುಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಗುರುಗಳ ಮಾರ್ಗದರ್ಶನ ಶಿಕ್ಷಣವನ್ನು ಜೀವನದ ಪಾಠ ಕಲಿಸುವಂತಹ ಹಲವಾರು ವಿಷಯಗಳನ್ನು ಅವರು ರೂಪಿಸಿಕೊಟ್ಟಿರುತ್ತಾರೆ ಶಿಕ್ಷಣ ಜೊತೆಗೆ ಸಂಸ್ಕಾರವನ್ನು ಕಲಿಸುವಂತಹ ಶಿಕ್ಷಕರಿಗೆ ಹಾಗೂ ಯಾವ ಸನ್ಮಾನ ಮಾಡಿದರೂ ಸಾಲದು ತಂದೆ ತಾಯಿ ಬುದ್ಧಿ ಹೇಳುವುದು ನಂತರ ಸ್ಥಾನವನ್ನು ತುಂಬಲು ಗುರು ಸಾಕ್ಷಿಯಾಗುತ್ತಾನೆ ಗುರು ಮತ್ತು ಶಿಷ್ಯರ ಮಧ್ಯೆ ಅಪಾರವಾದಂತಹ ಸಂಬಂಧವನ್ನು ಹೊಂದಿರುತ್ತದೆ ಎಂದು ಹಳೆ ವಿದ್ಯಾರ್ಥಿಗಳು ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಸಂತೋಷವನ್ನು ಹಂಚಿಕೊಂಡರು.
ಗುರುವಂದನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರಳಯ್ಯ ಪ್ರೌಢಶಾಲೆಯ ಅಧ್ಯಕ್ಷರು ಶಿವಕುಮಾರ್ ಅವರು ವಹಿಸಿಕೊಂಡು ಮಾತನಾಡಿ ಗುರು ಶಿಷ್ಯರು ಸಂಬಂಧ ಜನ್ಮ ಜನ್ಮದ ಅನುಬಂಧ ಎಂದರು.
ಸ್ವಾಗತ ಭಾಷಣವನ್ನು ಸಂತೋಷ್ ಶೇಳಕೆ ನಡೆಸಿಕೊಟ್ಟರು. ಶಿಕ್ಷಕರಾದ ರಾಜಕುಮಾರ್, ಶಿವರಾಜ್ , ಸೋಮನಾಥ್, ಶರಣಪ್ಪ ಬಿರಾದಾರ್, ಶಾಲೆಯ ಸಿಬ್ಬಂದಿ, ಹಳೆ ವಿದ್ಯಾರ್ಥಿಗಳಾದ ಶರಣಯ್ಯ ಸ್ವಾಮಿ, ವಿಜಯಕುಮಾರ್ ಮೈನಹಳ್ಳಿ, ಸಿದ್ದರಾಮೇಶ್ ರಕ್ಷೆ ಸೇರಿದಂತೆ ಶಾಲೆಯ ಹಳೆ ವಿದ್ಯಾರ್ಥಿ/ವಿದ್ಯಾರ್ಥಿನಿಯರು ,ಶಿಕ್ಷಕ ವೃಂದ ಊರಿನ ಮುಖಂಡರು ಹಾಗೂ ಗ್ರಾಮಸ್ಥರು ಅದ್ದೂರಿಯಾಗಿ ಕಾರ್ಯಕ್ರಮವನ್ನು ನೆರೆವೇರಿಸಿಕೊಟ್ಟರು.
ವರದಿ ಸಂಗಮೇಶ್ ಚಿದ್ರೆ



















