ಬೀದರ್: ನಗರದ ಪೂಜ್ಯ ಡಾ. ಚನ್ನಬಸವಪಟ್ಟದೇವರ ಜಿಲ್ಲಾ ರಂಗಮಂದಿರದಲ್ಲಿ ವಿಶ್ವ ಕನ್ನಡಿಗರ ಸಂಸ್ಥೆ ಹಾಗೂ ವೀರ ಕನ್ನಡಿಗರ ಸೇನೆಯ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕರಿಗೆ ರಾಜ್ಯಮಟ್ಟದ ಗೌರವ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಸಮಾಜ ಸೇವೆ ಕ್ಷೇತ್ರದಲ್ಲಿ ನೀಡುತ್ತಿರುವ ಗಣನೀಯ ಸೇವೆಯನ್ನು ಪರಿಗಣಿಸಿ ಶ್ರೀ ಆಕಾಶ ಶಿಂಧೆ ಅವರಿಗೆ ‘ಕರ್ನಾಟಕ ರಾಜ್ಯೋತ್ಸವ ರತ್ನ ಪ್ರಶಸ್ತಿ’ ನೀಡಿ ಸನ್ಮಾನಿಸಲಾಯಿತು.
ಕಾರ್ಮಿಕ ಜೀವನದ ಮಹತ್ವವನ್ನು ಪ್ರತಿಪಾದಿಸುವ ಕಾರ್ಯಕ್ರಮದಲ್ಲಿ, ಕಾರ್ಮಿಕರು ಪ್ರತಿಯೊಂದು ನಿರ್ಮಾಣದ ಪ್ರಾಣವಾಗಿದ್ದು, ಸಮಾಜದ ಶ್ರಮಜೀವನದ ಬೆನ್ನೆಲುಬು ಎಂಬ ಸಂದೇಶ ನೀಡಲಾಯಿತು. ಕೃಷಿ, ಹೈನುಗಾರಿಕೆ, ಪಶುಪಾಲನೆ ಹಾಗೂ ಸಂಘಟನಾ ಚಟುವಟಿಕೆಗಳ ಮೂಲಕ ದೇಶ-ನಾಡಿಗಾಗಿ ಸೇವೆ ಸಲ್ಲಿಸುವ ಮಹಾನ್ ವ್ಯಕ್ತಿಗಳ ಶ್ರಮವನ್ನು ಸ್ಮರಿಸಲಾಯಿತು.
ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಡಾ. ವಿಶ್ವನಾಥ್ ಜಿ.ಪಿ. (ರಾಜ್ಯಾಧ್ಯಕ್ಷರು, ಪ್ರ. ಶ್. ಸ., ಬೆಂಗಳೂರು), ಶ್ರೀ ಅಮೃತ ಪಾಟೀಲ್ ಸಿರನೂರ್ (ರಾಜ್ಯಾಧ್ಯಕ್ಷರು, ವೀ.ಕ್.ಸೇ., ಕಲಬುರಗಿ), ಡಾ. ಸುಬ್ಬಣ್ಣ ಕರಕನಳ್ಳಿ (ರಾಜ್ಯ ಸಂಚಾಲಕರು, ವೀ.ಕ್.ಸೇ., ಬೀದರ್), ಶ್ರೀ ಚಂದ್ರಕಾಂತ್ ದೇವಕೆ (ರಾಜ್ಯ ಸಂಘಟನಾ ಕಾರ್ಯದರ್ಶಿ, ವೀ.ಕ.ಸೇ., ಬೆಂಗಳೂರು), ಶ್ರೀ ಮುಕೇಶ್ ಶಹಾಗಂಜ್ (ಜಿಲ್ಲಾಧ್ಯಕ್ಷರು, ವೀ. ಕ. ಸೇ.), ಶ್ರೀ ಬಸರಾಜ್ ಜಡ್ಗೆ (ಜಿಲ್ಲಾ ಉಪಾಧ್ಯಕ್ಷರು) ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.
ವರದಿ: ಸಾಗರ ಪಡಸಲೆ, ಬೀದರ್




















