
ಕಬ್ಬು ಕಟಾವು ಮಾಡುವ ಮಷಿನ್ ಗೆ ಸಿಲುಕಿ ಇಬ್ಬರು ಮಹಿಳಾ ಕಾರ್ಮಿಕರ ಸಾವು ಸಂಭವಿಸಿದ ಹೃದಯ ವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸತ್ತಿ ಗ್ರಾಮದ ಹೊರ ವಲಯದಲ್ಲಿ ನಡೆದಿದೆ.
ಸತ್ತಿ ಗ್ರಾಮದ ಬೌರವ್ವ ಲಕ್ಷ್ಮಣ ಕೋಬಡಿ (60) ಲಕ್ಷ್ಮೀ ಬಾಯಿ ಮಲ್ಲಪ್ಪ ರುದ್ರಗೌಡರ (65) ಮೃತ ಮಹಿಳಾ ಕಾರ್ಮಿಕರು ಸತ್ತಿ ಗ್ರಾಮದ ಕಾಡಗೌಡ ಪಾಟೀಲ ಜಮೀನಿನಲ್ಲಿ ಇಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಘಟನೆ ಜರುಗಿದೆ.
ಕಬ್ಬು ಕಟಾವು ಮೆಷಿನ್ ಹಿಂಭಾಗದಲ್ಲಿ ಕಬ್ಬು ಕಟಾವಾದ ಕಬ್ಬನ್ನು ಸಂಗ್ರಹ ಮಾಡುವ ವೇಳೆ ನಡೆದ ದುರ್ಘಟನೆಯಿಂದ ಮುಗಿಲು ಮಟ್ಟಿದ ಕುಟುಂಬಸ್ಥರ ಆಕ್ರಂದನ, ಸ್ಥಳಕ್ಕೆ ಅಥಣಿ ಪೋಲಿಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಥಣಿ ಪೋಲಿಸ್ ಠಾಣೆ ಪ್ರಕರಣ ದಾಖಲಾಗಿದೆ.
ವರದಿ. ವಿಠ್ಠಲ ಖೋಕಾಟೆ





















One Response
Super