ಬಾಗಲಕೋಟೆ/ ಮುಧೋಳ ಇಂದು ತಾಲೂಕಿನ ಸುಕ್ಷೇತ್ರ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ರವಿವಾರ ದಿ 21 ರಂದು ಮುಂಜಾನೆ 8.30 ಕ್ಕೆ ಮನೆಯಂಗಳದಲ್ಲಿ ಶರಣರ ಮನದ ಮಾತು ತತ್ವ-ದಶ೯ನ 95 ನೇ ಮಾಸಿಕ ಕಾರ್ಯಕ್ರಮ ಹಾಗೂ .127ನೇ ರವಿವಾರದ ಸತ್ಸಂಗ ಕಾರ್ಯಕ್ರಮವು ಆಶ್ರಮದ ಪೂಜ್ಯರಾದ ಶರಣಬಸವ ಶಾಸ್ತ್ರಿಗಳ ಸಮ್ಮುಖದಲ್ಲಿ ಜರುಗಲಿದೆ.
ಭಜನೆ.ಗುರುನಾಮ ಸಂಕೀತ೯ನ. ಆರೂಢರ ಅಭಿಷೇಕ.ಸಹಸ್ರ ಬಿಲ್ವಾರ್ಚನೆ. ಶ್ರೀ ಸಿದ್ಧಾರೂಢರ ಪಾರಾಯಣ.ಮಂಗಲ ಮಹಾಪ್ರಸಾದ ಜರುಗುವುದು ಎಂದು ಕುಮಾರ ಗುರುಪ್ರಸಾದ ಸ್ವಾಮೀಜಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಕರುನಾಡ ಕಂದ ಪತ್ರಿಕೆ



















