ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಕ್ಯಾಲೆಂಡರ್ ಬಿಡುಗಡೆ ಹಾಗೂ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮ

ರೈತ ಮಣ್ಣಿನಲ್ಲಿ ಅನ್ನ ಬೆಳೆಯುವ ಮಾಂತ್ರಿಕ – ಕ. ಮಾ. ಹೇಮಯ್ಯಸ್ವಾಮಿ

ಬಳ್ಳಾರಿ/ ಕಂಪ್ಲಿ : ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರುನಾಡ ಕಂದ ಪಾಕ್ಷಿಕ ಪತ್ರಿಕೆ, ನ್ಯೂಸ್ ಪೋರ್ಟಲ್ ಹಾಗೂ ಯೂಟ್ಯೂಬ್ ಚಾನೆಲ್ ವತಿಯಿಂದ ದಿ.23.12.2025 ರ ಮಂಗಳವಾರ ನಡೆದ ರೈತರ ದಿನಾಚರಣೆ ಹಾಗೂ ‘ಕರುನಾಡ ಕಂದ ’ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕನ್ನಡ ಹಿತರಕ್ಷಕ ಸಂಘದ ಗೌರವಾಧ್ಯಕ್ಷ ಹಾಗೂ ರಾಜ್ಯ ಅಕ್ಕಿ ಗಿರಿಣಿಗಳ ಮಾಲೀಕರ ಸಂಘದ ಉಪಾಧ್ಯಕ್ಷರಾದ ಕ. ಮಾ. ಹೇಮಯ್ಯಸ್ವಾಮಿ ” ರೈತ ಮಣ್ಣಿನಲ್ಲಿ ಅನ್ನ ಬೆಳೆಯುವ ಮಾಂತ್ರಿಕ ’ ಎಂಬ ಮಾತಿದೆ, ಈ ಸಾಲು ದೇಶದ ಹಸಿವು ನೀಗಿಸುವ ಅನ್ನದಾತನ ಗರಿಮೆ ಸಾರುತ್ತದೆ ” ಎಂದರು.

ಕರುನಾಡ ಕಂದ ಪತ್ರಿಕೆಯ ಪ್ರಧಾನ ಸಂಪಾದಕರಾದ ಬಸವರಾಜ ಬಳಿಗಾರ ಪ್ರಾಸ್ತಾವಿಕವಾಗಿ ಮಾತನಾಡಿ “ಕರುನಾಡ ಕಂದ” ಪಾಕ್ಷಿಕ ಪತ್ರಿಕೆಯು ದೆಹಲಿಯ ಆರ್.ಎನ್.ಐ ನಿಂದ ನೋಂದಣಿಯಾಗಿ ಕೊಪ್ಪಳ ಜಿಲ್ಲೆಯಿಂದ 2021 ರಲ್ಲಿ ಪ್ರಾರಂಭವಾಗಿ, 2022 ರಲ್ಲಿ ದೈನಂದಿನ ಸುದ್ದಿಗಳಿಗೆ ಕರುನಾಡ ಕಂದ.ಕಾಮ್ ನ್ಯೂಸ್ ಪೋರ್ಟಲ್, 2023 ರಲ್ಲಿ ವಿಡಿಯೋ ಸುದ್ದಿಗಳಿಗಾಗಿ ತನ್ನದೇ ಆದ ಯೂಟ್ಯೂಬ್ ಚಾನೆಲ್ ಕೂಡ ಪ್ರಾರಂಭಿಸಿ, 2024 ರಲ್ಲಿ ಕರುನಾಡ ಕಂದ ಜನ ಜಾಗೃತಿ ವೇದಿಕೆ ಸಂಘಟನೆಯನ್ನು ನೋಂದಣಿ ಮಾಡಲಾಗಿದೆ. ಸ್ಥಳೀಯ ಸುದ್ದಿಗಳು, ಸಾಧಕರ ಪರಿಚಯ, ಕಲೆ, ಸಾಹಿತ್ಯ, ರಾಜಕೀಯ ಹಾಗೂ ಸಿನಿಮಾ ಸುದ್ದಿಗಳನ್ನು ಪ್ರಕಟಿಸುತ್ತಾ ಇಂದು ಕನ್ನಡಿಗರ ಧ್ವನಿಯಾಗಿ ಬೆಳೆಯುತ್ತಿರುವ ಕರುನಾಡ ಕಂದ ಪತ್ರಿಕೆಯು ಡಿಜಿಟಲ್ ವೇದಿಕೆಗಳಲ್ಲೂ ಸಕ್ರಿಯವಾಗಿರುವ ಒಂದು ಪ್ರಾದೇಶಿಕ ಕನ್ನಡ ಪತ್ರಿಕೆಯಾಗಿ ರಾಜ್ಯಾದ್ಯಂತ ಇಂದು ತನ್ನದೇ ಆದ ವರದಿಗಾರರು, ಓದುಗರು, ಬೆಂಬಲಿಗರ ಬಳಗವನ್ನು ಹೊಂದಿದ್ದು ಮುಂದೆಯೂ ಸಹ ತಮ್ಮೆಲ್ಲರ ಸಲಹೆ ಸಹಕಾರ ಬೆಂಬಲ ಅತ್ಯಗತ್ಯ ಎಂದು ತಿಳಿಸಿದರು.

ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ಅಧ್ಯಕ್ಷ ಎನ್. ಹಬೀಬಿ ರೆಹಮಾನ್ ಮಾತನಾಡುತ್ತಾ ” ಮೊಬೈಲ್ ಬಿಡಿ, ಪುಸ್ತಕ ಹಿಡಿ ” ಅಂದರೆ ಮೊಬೈಲ್ ಫೋನ್‌ನಿಂದ ದೂರವಿರಿ ಮತ್ತು ಪುಸ್ತಕಗಳನ್ನು ಓದುವ ಅಭ್ಯಾಸವನ್ನು ರೂಢಿಸಿಕೊಳ್ಳಿ ವಿದ್ಯಾರ್ಥಿಗಳಲ್ಲಿ ಮೊಬೈಲ್ ಹವ್ಯಾಸವನ್ನು ಕಡಿಮೆ ಮಾಡಿ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಲು ಸಲಹೆ ನೀಡಿದರು.
ಕಂಪ್ಲಿ ವಿಧಾನಸಭಾ ಕ್ಷೇತ್ರದ ನಮ್ಮ ಶಾಸಕರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಎಂದರು.

ಕ.ರ.ವೇ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಿ. ರಮೇಶ ಅವರು ಕಾರ್ಯಕ್ರಮವನ್ನು ಕುರಿತು ಮಾತನಾಡಿ ” ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮದ ಪಾತ್ರ ಅಪಾರವಾಗಿದೆ, ಆದರೆ ಇತ್ತೀಚೆಗೆ ಪತ್ರಿಕೋದ್ಯಮದ ಮುಂದೆ ಅನೇಕ ಸವಾಲುಗಳಿವೆ, ಅವುಗಳನ್ನು ಎದುರಿಸಿ ಗೆಲುವಿನೆಡೆಗೆ ಸಾಗಬೇಕಿದೆ. ಪತ್ರಕರ್ತರ ಸಂಘಟನೆಗಳು ಬಲಿಷ್ಠವಾಗುವ ಮೂಲಕ ಮಾಧ್ಯಮ ಹಾಗೂ ಪತ್ರಕರ್ತರ ಉಳಿವಿಗೆ ನೆರವಾಗಬೇಕು ಎಂದರು.

ಪತ್ರಿಕೆಗಳನ್ನು ಓದುವುದರಿಂದ ಜ್ಞಾನ ಹೆಚ್ಚುತ್ತದೆ, ದೇಶ-ವಿದೇಶಗಳ ವಿಷಯಗಳ ಬಗ್ಗೆ ಮಾಹಿತಿ ಸಿಗುತ್ತದೆ ಮತ್ತು ಯುವಜನರಲ್ಲಿ ಓದುವ ಹವ್ಯಾಸವನ್ನು ಬೆಳೆಸಲು ಸಹಕಾರಿ, ಆದರೂ ಮೊಬೈಲ್ ಮತ್ತು ಟಿವಿ ಪ್ರಭಾವದಿಂದಾಗಿ ಈ ಅಭ್ಯಾಸ ಕಡಿಮೆಯಾಗುತ್ತಿದೆ ಆದರೆ, ಇಂದಿನ ಯುವಜನತೆ ದಿನನಿತ್ಯದ ಘಟನೆಗಳ ಬಗ್ಗೆ ಅರಿವು ಮೂಡಿಸಿಕೊಳ್ಳಲು ಮತ್ತು ಉತ್ತಮ ಭವಿಷ್ಯಕ್ಕಾಗಿ ಪತ್ರಿಕೆ ಓದುವ ಅಭ್ಯಾಸವನ್ನು ರೂಢಿಸಿಕೊಳ್ಳುವುದು ಮುಖ್ಯ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ಶ್ರೀನಿವಾಸರೆಡ್ಡಿ ಹೇಳಿದರು.

ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಯೋಜನೆ ಜಿಲ್ಲಾ ಸಮಿತಿಯ ನಾಮನಿರ್ದೇಶಿತ ಸದಸ್ಯರಾದ ಬಿ. ಜಾಫರ್ ಸಾಧಿಕ್, ಖಿದ್ಮಾತೆ ಇಸ್ಲಾಂ ಅಂಜುಮನ್ ಸಂಸ್ಥೆಯ ಅಧ್ಯಕ್ಷ ರಾದ ಕಡಪ ಮಸ್ತನವಲಿ, ಕ.ರ.ವೇ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಬಳೆ ಮಲ್ಲಿಕಾರ್ಜುನ ವೇದಿಕೆ ಮೇಲಿದ್ದು ತಮ್ಮ ಅಮೂಲ್ಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ರೈತರ ದಿನಾಚರಣೆ ಅಂಗವಾಗಿ ರೈತರಾದ ಬಡಿಗೇರ್ ವಲಿಸಾಬ್, ಹರಿಸಿಂಗ್, ಕಾಶೀನಾಥ ಹಾಗೂ ಹನುಮಂತಮ್ಮರವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸ್ಥಳೀಯ ಪತ್ರಿಕೆಗಳ ಸಂಪಾದಕರಾದ ಬಿ. ವಿಶ್ವನಾಥ, ಮಲ್ಲಿಕಾರ್ಜುನ ನಾಯಕ, ಶರಣಪ್ಪ ಗಂಗಾವತಿ, ಕರುನಾಡ ಕಂದ ಪತ್ರಿಕೆಯ ಕಂಪ್ಲಿ ತಾಲ್ಲೂಕು ಮುಖ್ಯ ವರದಿಗಾರರಾದ ಬಡಿಗೇರ್ ಜಿಲಾನಸಾಬ್, ಕನಕಗಿರಿ ತಾಲ್ಲೂಕು ವರದಿಗಾರರಾದ ಹನುಮಂತಪ್ಪ ನಾಯಕ, ಪ್ರಮುಖರಾದ ಎಂ. ಎಸ್. ಮುನ್ನಾ,
ಉಪನ್ಯಾಸಕರುಗಳಾದ ಎಂ. ಪಿ. ಬಾಲಾಜಿ, ರಾಜ್ಮಾ ಟಿ.ಎಮ್.ಆರ್., ಕೆ. ಮಹೇಶ., ಖಲೀಲ್, ಗ್ರಂಥಪಾಲಕರಾದ ಎ.ಜಿ.ವೀರಭದ್ರಪ್ಪ., ಅಧೀಕ್ಷಕರಾದ ನಾಗಮ್ಮ ಬಿ., ಸಹಾಯಕರಾದ ಸಿದ್ದಾರೂಢ, ಇತರೆ ಬೋಧಕೇತರ ಸಿಬ್ಬಂದಿ, ಮಹಾವಿದ್ಯಾಲಯದ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಕುಮಾರಿ ಸಿಂಧೂ ಪ್ರಾರ್ಥಿಸಿದರು,
ಆರ್. ಸುಭಾನ್ ಕಾರ್ಯಕ್ರಮ ನಿರ್ವಹಿಸಿದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!