ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕು ಮದಲೂರು ಪಂಚಾಯ್ತಿ ,ಮದಲೂರು ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಆಚರಣೆಯನ್ನು ತಿಮ್ಮಸಾಗರ ಗ್ರಾಮ ಶಾಲಾ ಆವರಣದಲ್ಲಿ ಆಚರಿಸಲಾಯಿತು.
ಈ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಕರಿಯಪ್ಪ ಅವರು ಮಾತನಾಡಿ ಕಲಿಕೆ ನಿರಂತರ ಪ್ರಕ್ರಿಯೆ, ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಹಾಗೂ ತಮ್ಮ ಜೀವನದ ಅನುಭವಗಳನ್ನು ಹಂಚಿಕೊಂಡರು ತಮ್ಮ ಗುರುಗಳಾದ ಹೆಚ್. ನರಸಿಂಹಯ್ಯ ಅವರ ಆದರ್ಶಗಳನ್ನು ಪಾಲಿಸಿಕೊಂಡು ಬಂದವನು ವೈಜ್ಞಾನಿಕತೆಗೆ ಹೆಚ್ಚು ಆದ್ಯತೆ ಪಾಲಿಸಿಕೊಂಡು ಬಂದವನು ನಾನು ಪ್ರೌಢ ಶಾಲೆ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದೆ ನಂತರ ಪಂಚಾಯಿತಿ ಅಭಿವೃದ್ದಿ ಅಧಿಕಾರಿಯಾಗಿ ಆಯ್ಕೆ ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ ಕಲಿಕಾ ಹಬ್ಬ ಸಂತೋಷದಾಯಕವಾಗಿ ಆಚರಿಸಿ ಉತ್ತಮವಾಗಿ ಕಲಿಕೆಯಲ್ಲಿ ತೊಡಗಿಕೊಳ್ಳಿ ಎಂದು ಹೇಳಿದ್ದರು.
ಈ ಸಂದರ್ಭದಲ್ಲಿ ಮದಲೂರು ಕ್ಲಸ್ಟರ್ ಸಿ.ಆರ್.ಪಿ ಚಂದ್ರಶೇಖರ್ ರೆಡ್ಡಿ, ಕೊಟ್ಟ ಸಿ.ಆರ್.ಪಿ ನಾರಾಯಣ್ ನಾಯ್ಕ, ತೊಗರುಗುಂಟೆ ಕ್ಲಸ್ಟರ್ ಸಿಆರ್ ಪಿ ರಮೇಶ್, ತಿಮ್ಮಸಾಗರ ಶಾಲೆಯ ಮುಖ್ಯಶಿಕ್ಷಕರು ಶ್ರೀಧರ್, ಮದಲೂರು ಪಂಚಾಯತಿ ಅಧ್ಯಕ್ಷರು ರೂಪಾ ರಂಗನಾಥ ಎಸ್.ಡಿ.ಎಮ್.ಸಿ ಅಧ್ಯಕ್ಷರು ದೇವರಾಜ್ ತಿಮ್ಮ ಸಾಗರ ಶಾಲೆಯ ಹಳೆಯ ವಿದ್ಯಾರ್ಥಿಗಳು Ghps ಎಂ ದಾಸರಹಳ್ಳಿ ghps ಹುಲಿಗೇರೆ ghps ಗಿಡುಗನಹಳ್ಳಿ ghps ಮದಲೂರು ಕ್ಲಸ್ಟರ್ ಮಟ್ಟದ ಎಲ್ಲಾ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ ಕೊಟ್ಟ ಕರಿಯಣ್ಣ.




















