ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಗುರುದತ್ತ ಹೆಗಡೆ ಇವರಿಗೆ ಮಾಮ್ಕೊಸ್ವತಿಯಿಂದ ಬೀಳ್ಕೊಡುಗೆ

ಶಿವಮೊಗ : ಶಿವಮೊಗ್ಗ ಜಿಲ್ಲಾಧಿಕಾರಿ ಹಾಗೂ ಮ್ಯಾಮ್ಕೊಸ್ ಪದ ನಿಮಿತ್ತ ಅಧ್ಯಕ್ಷರಾಗಿದ್ದ ಶೀ ಗುರುದತ್ತ ಹೆಗಡೆ ಐ ಎ ಎಸ್ ಇವರಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಯಿತು.

ಮ್ಯಾಮ್ಕೊಸ್ ಉಪಾಧ್ಯಕ್ಷರು ಮಾತಾನಾಡುತ್ತಾ ಶೀ ಗುರುದತ್ತ ಹೆಗಡೆ ಅವರ ಅವಧಿಯಲ್ಲಿ ಸಂಘದಲ್ಲಿ
ತೆಗೆದುಕೊಂಡ ಪ್ರಮುಖ ನಿರ್ಧಾರಗಳ ಬಗೆಗೆ ತಿಳಿಸಿ ಸಂಘಕ್ಕೆ ಅವರು ನೀಡಿದ ಸಲಹೆ ಮತ್ತು ಸಹಕಾರವನ್ನು ಸ್ಮರಿಸಿದರು.

ಶ್ರೀ ಗುರುದತ್ತ ಹೆಗಡೆ ಅವರು ಅಡಿಕೆ ಬೆಳೆಗಾರರ ಕುಟುಂಬದವರಾಗಿದ್ದು ಅಡಿಕೆ ಬೆಳೆಗಾರರ ಹಿತರಕ್ಷಣೆಗೆ ಮತ್ತು ಸಂಘದ ಅಭಿವೃದ್ದಿಗೆ ಸದಾ ಬೆಂಬಲವನ್ನು ನೀಡುತ್ತಿದ್ದರು ಹಾಗೂ ಅವರ ಸಹಕಾರವೇ ಸಂಘದ ಯಶಸ್ಸಿಗೆ ಕಾರಣವಾಗಿರುವುದಾಗಿ ಶ್ಲಾಘಿಸಿ ಇದಕ್ಕೆ ಧನ್ಯವಾದಗಳನ್ನು ತಿಳಿಸಿ ಅವರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿಲಾಯಿತು.

ಸನ್ಮಾನವನ್ನು ಸ್ವೀಕರಿಸಿದ ಶ್ರೀ ಗುರುದತ್ತ ಹೆಗಡೆ ಇವರು ಸಂಘದ ಆಡಳಿತ ವ್ಯವಸ್ಥೆಯು ಪಾರದರ್ಶಕವಾಗಿದ್ದು ಆಡಳಿತ ಮಂಡಲಿ ಸಭೆಯಲ್ಲಿ ಆರೋಗ್ಯಕರ ಚರ್ಚೆಯಾಗುತ್ತದೆ ಹಾಗೂ ಒಮ್ಮತದ ನಿರ್ಧಾರಗಳನ್ನು ತೆಗೆದುಕೊಳಲಾಗುತ್ತದೆ ಎಂದರಲ್ಲದೆ ಅಡಿಕೆ ಬೆಳೆಗಾರರ ಹಿತ ರಕ್ಷಣೆಯ ಬಗ್ಗೆ ಸದಾ ಚರ್ಚಿಸಲಾಗುತ್ತಿತ್ತು ಎಂಬುದಾಗಿ ತಿಳಿಸಿದರಲ್ಲದೆ ಸಂಘದ ಸಿಬ್ಬಂದಿಗಳು ಸಹ ನಿಷ್ಟೆಯಿಂದ ಕರ್ತವ್ಯ ನಿರ್ವಹಿಸುತ್ತಿರುವುದನ್ನು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಆಡಳಿತ ಮಂಡಲಿಯ ಸದಸ್ಯರಾದ ಶ್ರೀ ಕೀರ್ತಿರಾಜ್ , ಶ್ರೀ ನಂದನ್ ಹೆಚ್ ಸಿ
ಶ್ರೀ ಧರ್ಮೇಂದ್ರ ಹೆಚ್, ಶ್ರೀ ತಿಮ್ಮಪ್ಪ ಎಸ್ ಎಂ, ಶ್ರೀ ವಿರೂಪಾಕ್ಷಪ್ಪ ಜಿ ಈ , ಶ್ರೀ ಸತೀಶ್ ಎನ್. ಶ್ರೀಮತಿ ಜಯಶ್ರೀ ಕೆ. ಕೆ, ಶ್ರೀಮತಿ ಸಹನಾ ಸುಭಾಷ್ ಇವರು ಉಪಸ್ಥಿತರಿದ್ದರು.

ಸಂಘದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶ್ರೀಕಾಂತ್ ಇವರು ಎಲ್ಲರನ್ನೂ ಸ್ವಾಗತಿಸಿದರು. ಲೆಕ್ಕ ಪತ್ರ ವಿಭಾಗದ ಉಪಪ್ರಧಾನ ವ್ಯವಸ್ಥಾಪಕರಾದ
ಶ್ರೀ ರಮಾನಂದ ವಿ ಎಸ್ ಇವರು ವಂದಿಸಿದರು.
ಕು. ಅಂಬಿಕಾ ಇವರು ಕಾರ್ಯಕ್ರಮ ನಿರೂಪಿಸಿದರು.

ವರದಿ: ಕೊಡಕ್ಕಲ್ ಶಿವಪ್ರಸಾದ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!