ಚಿಂಚೋಳಿ: ಶಿವರಾಜ್ ಪಾಟೀಲ್ ಗೋಣಗಿ ರೈತ ಮುಖಂಡನ ಸೇವೆಯನ್ನು ಪರಿಗಣಿಸಿ, ಹಾಗೂ ತಾಲ್ಲೂಕಿನ ಪತ್ರಿಕಾ ರಂಗದ ಸೇವೆ ಪರಿಗಣಿಸಿ ಮಹೇಬೂಬಶಾ, ಮತ್ತು ಪತ್ರಕರ್ತ ಜಗನ್ನಾಥ ಶೇರಿಕಾರ, ಹಾಗೂ ಪತ್ರಕರ್ತ ಶಾಮರಾವ ಓಂಕಾರ, ಕಾನೂನು ಕ್ಷೇತ್ರ ಶ್ರೀಮಂತ ಕಟ್ಟಿಮನಿ, ರಾಮರೆಡ್ಡಿ ಪಾಟೀಲ್, ಹಾಗೂ ಗಣಪತಿ ಹಾಳಕಾಯಿ ಸೇರಿದಂತೆ ವಿವಿಧ ಕ್ಷೇತ್ರದ 50 ಜನ ಸಾಧಕರಿಗೆ ಶ್ರೀವಿಜಯರತ್ನ ರಾಜ್ಯ ಮಟ್ಟದ ಪ್ರಶಸ್ತಿ ಮತ್ತು 26ಸಾಧಕರಿಗೆ ಕನ್ನಡ ಕವಿರತ್ನ ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ನಾಟಕ ಬರಹಗಾರರ ಕವಿಗಳ ಸಂಘದ ರಾಜ್ಯಾಧ್ಯಕ್ಷ ಶಂಕರಜೀ ಹೂವಿನಹಿಪ್ಪರಗಿ ತಿಳಿಸಿದ್ದಾರೆ.
ಕಲಬುರ್ಗಿ ಜ.04ರಂದು ಎಸ್.ಎಂ.ರಂಗಮಂದಿರದಲ್ಲಿ ರಂಗಮಿತ್ರ ನಾಟ್ಯ ಸಂಘ, ಕರ್ನಾಟಕ ರಾಜ್ಯ ನಾಟಕ ಬರಹಗಾರರ ಕವಿಗಳ ಸಂಘದಿಂದ ಬೆಳಿಗ್ಗೆ 10:30ಕ್ಕೆ ಕವಿಸಂಗಮ-2026 ನಮ್ಮ ನಾಟಕ ನಮ್ಮ ಹಕ್ಕು ವಿನೂತನ ಕಾರ್ಯಕ್ರಮ ಅಭಿನಂದನಾ ಸಮಾರಂಭ ಮತ್ತು ರಾಜ್ಯಮಟ್ಟದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಶ್ರೀವಿಜಯರತ್ನ ಮತ್ತು ಕನ್ನಡ ಕವಿರತ್ನ ಪ್ರಶಸ್ತಿ ಪ್ರದಾನ ಮತ್ತು ನಾಟಕೊತ್ಸವ ಕಾರ್ಯಕ್ರಮ ಜರುಗಲಿದೆ ನಾಟಕ ಬರಗಾರರು, ಕವಿಗಳು ಸೇರಿದಂತೆ, ನಾಟಕ ಅಭಿಮಾನಿಗಳು, ರಂಗಭೂಮಿ ಮಿತ್ರರು, ಪದಾಧಿಕಾರಿಗಳು ರಾಜಕೀಯ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ರಂಗಮಿತ್ರ ನಾಟ್ಯ ಸಂಗದ ಜಿಲ್ಲಾಧ್ಯಕ್ಷ ಶಾಮರಾವ ಕೊರವಿ ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಉದ್ಘಾಟನೆ ಮಾಡಲಿದ್ದಾರೆ. ಎಂಎಲ್ ಸಿ ತಿಪ್ಪಣ್ಣಪ್ಪ ಕಮಕನೂರ ಜ್ಯೋತಿ ಬೆಳಗಿಸುವವರು, ಶಾಸಕ ಡಾ.ಅವಿನಾಶ ಜಾಧವ ಶ್ರೀವಿಜಯರತ್ನ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಬಂಧು ಪ್ರಿಂಟರ್ಸ್ ಮಾಲೀಕ ರಮೇಶ ತಿಪ್ಪನೂರ ನಾಟಕ ಉದ್ಘಾಟನೆ, ಜಿ. ಪಂ ಮಾಜಿ ಸದಸ್ಯ ಬಸವರಾಜ ಬೆಣ್ಣೂರ ಕನ್ನಡ ಕವಿರತ್ನ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸಭೆಯ ಅಧ್ಯಕ್ಷತೆ ಶಾಮರಾವ ಕೊರವಿ, ಕಾರ್ಯಕ್ರಮದ ನೇತೃತ್ವ ರಾಜ್ಯ ನಾಟಕ ಬರಹಗಾರರ ಕವಿಗಳ ಸಂಘದ ಕಾರ್ಯಾಧ್ಯಕ್ಷ ಗುರಪ್ಪ ಪಾಟೀಲ, ಭರತನಾಟ್ಯ ಭವಾನಿ ಎವ್.ಆವುಂಟಿ ಮಾಡಲಿದ್ದಾರೆ.
ಅನೇಕ ಶಾಸಕರು, ಮಾಜಿ ಶಾಸಕರು,ಸೇರಿದಂತೆ ಚುನಾಯಿತ ಪ್ರತಿನಿಧಿಗಳು, ಮುಖಂಡರು ಪಾಲ್ಗೊಳ್ಳುತ್ತಿದ್ದಾರೆ.
ಆದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ರಂಗಮಿತ್ರ ನಾಟ್ಯ ಸಂಘದ ಜಿಲ್ಲಾ ಸಂಯೋಜಕರು ಲಕ್ಷ್ಮಣ ಆವುಂಟಿ, ಸದಸ್ಯ ವೀರಣ್ಣ ಗಂಗಾಣಿ ತಿಳಿಸಿದ್ದಾರೆ.
ವರದಿ ಎಸ್ ವಿ ಗಂಗಾಣಿ.




















