ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ ಮದ್ಯಪಾನ , ಗುಟ್ಕಾ , ಓಸಿ ,ಇಸ್ಪೀಟ್ ಅಂತಹ ದುಷ್ಚಟಗಳನ್ನು ಮೊಟುಕುಗೊಳಿಸಲು ಗ್ರಾಮದಲ್ಲಿ ಹಿರಿಯರು ಸಮ್ಮುಖದಲ್ಲಿ ಶ್ರೀ ಮಾರುತೇಶ್ವರ ದೇವಸ್ಥಾನದಲ್ಲಿ ಸಭೆ ಸೇರಿ ತೀರ್ಮಾನಿಸಲಾಯಿತು.
ಗ್ರಾಮದ ಸರ್ವರು ಸಭೆ ಸೇರಿ ಇಂತಹ ದುಷ್ಚಟಕ್ಕೆ ಗುರಿಯಾಗದಂತೆ ಅವುಗಳನ್ನು ತಡೆಯಲು ಗ್ರಾಮದಲ್ಲಿ ನಿರ್ಧರಿಸಿ ಗುರುವಾರವರೆಗೆ ಮಾರಾಟದ ಗಡುವು ನೀಡಿ ಗ್ರಾಮದ ಪ್ರಮುಖ ರಸ್ತಯಲ್ಲಿ ಜನಾಜಾಗೃತಿಯನ್ನು ಮೂಡಿಸಲಾಯಿತು.
ಈ ವೇಳಾ ಶ್ರೀ.ಶ್ರೀ ಷ.ಬ್ರಹ್ಮ ನಾಗಭೂಷಣ ಸ್ವಾಮಿಗಳು ಬೃಹನ್ಮಠ ಹೆಬ್ಬಾಳ ಮಾತನಾಡಿ ಈ ದುಷ್ಚಟಗಳಿಂದ ದೂರವಾದರೆ ಗ್ರಾಮಗಳು ಅಭಿವೃದ್ದಿ ಹಾಗೂ ಕುಟುಂಬ ಸುಖಿಯಾಗಿ ಇರುವವು ಇದನ್ನು ಗ್ರಾಮಸ್ಥರು ಎಲ್ಲರೂ ಒಂದು ಒಳ್ಳಯ ನಿರ್ದಾರ ತಗೊಂಡಿದ್ದು ಮಾದರಿ ಇದನ್ನು ಸೂಕ್ತವಾಗಿ ಮುಕ್ತಮಾಡುವುದು ಎಂದರು.
ಈ ವೇಳೆ ಗ್ರಾಮದ ಹಿರಿಯರಾದ ಬಿ.ಪಕೀರಪ್ಪ , ಮಲ್ಲನಗೌಡ , ಚಿದಾನಂದಪ್ಪ ಅಯ್ಯಪ್ಪ ,ವೀರೇಶ ಗೌಡ ,, ಕೃಷ್ಣಾ , ನಿಂಗರಾಜ , ತಿಪ್ಪೇಸ್ವಾಮಿ , ಜಮೀರ್ , ನಿಂಗಪ್ಪ , ಶರಣಪ್ಪ ಗ್ರಾಮದ ಹಿರಿಯರು ಯುವಕರು ಮಹಿಳೆಯರು ಭಾಗಿ ಇದ್ದರು.




















