
ಕೊಪ್ಪಳ : ನಗರದ ತಾಲೂಕ ಪಂಚಾಯತ್ ಸಭಾಂಗಣದಲ್ಲಿ ಕೊಪ್ಪಳ ಜಿಲ್ಲೆಯ ಕವಿಗಳಾದ ಶಿವಪ್ರಸಾದ್ ಹಾದಿಮನಿ ಮತ್ತು ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ (ಯಮಹ) ಅವರ ಶಾಯಿರಿ ಸಂಕಲನಗಳು ಲೋಕಾರ್ಪಣೆಯಾದ ಸಂದರ್ಭದಲ್ಲಿ ಸಾಹಿತಿ, ಕವಿ ಡಾ. ಪವನಕುಮಾರ್ ಗುಂಡೂರು
ಲೋಕಾರ್ಪಣೆಯಾದ ಶಿವಪ್ರಸಾದ್ ಹಾದಿಮನಿಯವರ ನೂರೊಂದು ಶಾಯಿರಿಗಳು,
ಮತ್ತು ಯಲ್ಲಪ್ಪ ಹರ್ನಾಳಗಿ ಅವರ ಮಧು ಬನದ ಶಾಯಿರಿಗಳು, ಪುಸ್ತಕಗಳ ಕುರಿತು ಮಾತನಾಡುತ್ತಾ
ಸಾಹಿತ್ಯ ಎನ್ನುವುದು ಕೇವಲ ಕೈ ಯಿಂದ ಬರುವುದಲ್ಲ, ಅದು ಹೃದಯದಿಂದ ಹುಟ್ಟಬೇಕು, ಅಂತಹ ಸಾಹಿತ್ಯ ಈ ನೆಲದಲ್ಲಿದೆ, ಅಂತಹ ಸಾಹಿತಿಗಳು ಇಲ್ಲಿದ್ದಾರೆ, ಎಂಬುದಕ್ಕೆ ಶಿವಪ್ರಸಾದ್ ಹಾದಿಮನಿ, ಮತ್ತು ಯಲ್ಲಪ್ಪ, ಮಲ್ಲಪ್ಪ ಹರ್ನಾಳಗಿ ಅವರ ಈ ಸಂಕಲನಗಳೇ ಸಾಕ್ಷಿಯಾಗಿವೆ. ಎಂದರು.
ಕವಿ ಶ್ರೀನಿವಾಸ ಚಿತ್ರಗಾರ ಅವರು ಸ್ವಾಗತಿಸಿದರು, ಶಿವಪ್ರಸಾದ್ ಹಾದಿಮನಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರು, ಪತ್ರಕರ್ತರೂ, ಸಾಹಿತಿಗಳೂ ಆದ ವೀರಪ್ಪ ಮಲ್ಲಪ್ಪ ನಿಂಗೋಜಿ ಅವರು
ಶಿವಪ್ರಸಾದ್ ಹಾದಿಮನಿಯವರ ನೂರೊಂದು ಶಾಯಿರಿಗಳು ಸಂಕಲನದಲ್ಲಿನ ಕೆಲವು ಶಾಯಿರಿಗಳನ್ನು ಉದಾಹರಿಸಿ,
ಹಾದಿಮನಿಯವರ ಶಾಯಿರಿಗಳು, ಮನರಂಜಿಸುವಲ್ಲಿ ಯಶಸ್ವಿಯಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಮತ್ತೋರ್ವ ಅತಿಥಿಗಳಾಗಿ
ಭಾಗವಹಿಸಿದ್ದ, ಪ್ರೊ. ಶರಣಬಸಪ್ಪ ಬಿಳಿಯಲಿ, ಅವರು ಮಾತನಾಡುತ್ತಾ ನೇರ, ನಡೆ ನುಡಿಯ ಶಿವಪ್ರಸಾದ್ ಹಾದಿಮನಿಯವರು ಕ್ರಿಯಾಶೀಲ ಮನಸ್ಥಿತಿಯನ್ನು ಹೊಂದಿದ ಸರಳ, ವ್ಯಕ್ತಿತ್ವ ಹೊಂದಿರುವ ಸಾಹಿತ್ಯ ಪ್ರೇಮಿ ಎಂದು ಅಭಿಪ್ರಾಯ ಪಟ್ಟರು.
ಪುಸ್ತಕ ಲೋಕಾರ್ಪಣೆ ಮಾತನಾಡಿದ ಶಿ. ಕಾ. ಬಡಿಗೇರ ಸಾಹಿತ್ಯ ಎಲ್ಲರಿಗೂ ತಲುಪುವಂತಿರಬೇಕು, ಎಂದರು.
ಶಾಯಿರಿ ಕವಿಗಳಾದ ಮರುಳಸಿಧ್ದಪ್ಪ ದೊಡ್ಡಮನಿ,
ಕೊಟ್ರೇಶ ಜವಳಿ, ಪುಸ್ತಕ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ವೇದಿಕೆಯಲ್ಲಿ
ಎ. ಪಿ ಅಂಗಡಿ ಅವರೂ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಂಗಾವತಿಯ ಹಿರಿಯ ಕವಿ, ಶರಣಪ್ಪ ಎನ್ ಮೆಟ್ರಿ ಅವರು
ಸಾಹಿತ್ಯ ಕ್ಷೇತ್ರದಲ್ಲಿ ಈಗಾಗಲೇ ಗುರುತಿಸಿಕೊಂಡ, ಶಿವಪ್ರಸಾದ್ ಹಾದಿಮನಿ ಹಾಗೂ ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿಯವರು ಉತ್ತಮ ಶಾಯಿರಿಗಳನ್ನು ರಚಿಸಿದ್ದಾರೆ, ಅವರಿಂದ ಇನ್ನೂ ಶ್ರೇಷ್ಟವಾದ ಕೃತಿಗಳು ರಚನಯಾಗಲಿ ಎಂದು ಅಧ್ಯಕ್ಷೀಯ ನುಡಿಗಳನ್ನು
ಆಡಿದರು.
ಇದೇ ಸಂದರ್ಭದಲ್ಲಿ ಆಯ್ದ ಕವಿಗಳಿಂದ ಕವಿಗೋಷ್ಠಿ ಕಾರ್ಯಕ್ರಮ ಜರುಗಿತು,
ಕವಿಗೋಷ್ಠಿ ಯಲ್ಲಿ ಸೋಮಶೇಖರ ಕಂಚಿ,
ಶಿವಪ್ಪ ಕೋಗಳಿ, ಡಾ. ಸಂಗಮೇಶ್ವರ ಪಾಟೀಲ,
ಶಶಿಕಲಾ, ಹನಮಂತಪ್ಪ,
ಶಿ. ಕಾ.ಬಡಿಗೇರ, ಎಸ್ ಎಂ. ಕಂಬಾಳಿಮಠ, ಅಮೀನ್ ಸಾಬ್ ಮುಲ್ಲಾ ಸೇರಿದಂತೆ ಹದಿನೇಳು ಕವಿಗಳು ಕವನ, ವಾಚನ ಮಾಡಿದರು.
ಕವಿಗೋಷ್ಠಿಯ ಅಧ್ಯಕ್ಷ ತೆಯನ್ನು ಶ್ರೀಮತಿ
ಸಾವಿತ್ರಿ ಮುಜಮದಾರ್ ವಹಿಸಿ, ಕವಿಗಳ ಕವನಗಳ ವಿಶ್ಲೇಷಣೆ ಮಾಡಿ, ಅಧ್ಯಕ್ಷೀಯ ಮಾತುಗಳನ್ನಾಡಿದರು.
ಕಾರ್ಯಕ್ರಮವನ್ನು ಡಾ. ಮಹಾಂತೇಶ ನೆಲಾಗಣಿ,
ನಿರೂಪಿಸಿದರು, ಅಕ್ಕ ಮಹಾದೇವಿ ಪ್ರಾರ್ಥಿಸಿದರು.
ಯಲ್ಲಪ್ಪ ಹರ್ನಾಳಗಿಯವರು ವಂದಿಸಿದರು.
- ಕರುನಾಡ ಕಂದ ಪತ್ರಿಕೆ




















