ಸೊಲ್ಲಾಪುರಕ್ಕೆ ಹೆಸರು ಬರಲು ಕಾರಣ ಹದಿನಾರು ಹಳ್ಳಿಗಳನ್ನು ಸೇರಿಸಿಕೊಂಡು ಒಂದು ಪಟ್ಟಣ ಅದೇ ಮುಂದೆ ಸೊಲ್ಲಾಪೂರ ಜಿಲ್ಲೆಯಾಗಿ ಗುರುತಿಸಿಕೊಂಡಿದೆ.
ಡಾII ಜಯದೇವಿತಾಯಿ ಲಿಗಾಡೆಯವರ ನಿರಂತರ ಹೋರಾಟದಿಂದ ಕನ್ನಡ ಇಂದು ಜನ ಸಾಮಾನ್ಯರ ಭಾಷೆಯಾಗಿ ಬಳಕೆಯಾಗುತ್ತಿರುವುದು. ಕನ್ನಡ ಕಟ್ಟಿ ಬೆಳೆಸಿದ ಗಡಿನಾಡು ದೇವತೆಗೆ ನಮನ ಸಲ್ಲಿಸಲೇ ಬೇಕು. ಸ್ವಾಭಿಮಾನ ಜೊತೆಗೆ ಅಭಿಮಾನ ಬೆಳೆಸಿಕೊಂಡ ಅನೇಕರು ತಮ್ಮ ಜೀವನವನ್ನು ಕನ್ನಡಗೋಸ್ಕರ ತ್ಯಾಗ ಮಾಡಿದವರು ಅವರ ಬಗ್ಗೆ ಬೆಳಕು ಚೆಲ್ಲುವ ಒಂದು ಪ್ರಯತ್ನದ ಒಂದು ಕಿರುನೋಟ ನಿಮ್ಮ ಮುಂದೆ….
ಎನ್.ಆರ್.ಕುಲಕರ್ಣಿಯವರು ಎಚ್.ಜಿ. ಪ್ರಚಂಡೆ ಪ್ರೌಢ ಶಾಲೆಯಲ್ಲಿ ಕನ್ನಡ ಶಿಕ್ಷಕ ವೃತ್ತಿಯ ಜೊತೆಗೆ ಹಾಗೂ ನಿವೃತ್ತಿಯ ನಂತರವೂ ಸಹ ಕನ್ನಡ ಅಭಿವೃದ್ಧಿ ಪರ ಕಾರ್ಯಗಳಲ್ಲಿ ತೊಡಗಿಸಿಕೊಂಡವರು. ಇವರು ಶಿಕ್ಷಕರಾಗಿ ನಾಗಣಸೂರಕ್ಕೆ ಬಂದ ಸಂದರ್ಭದಲ್ಲಿ ಮರಾಠಿಯು ಅಟ್ಟಹಾಸದಿಂದ ಮೆರೆಯುತ್ತಿತ್ತು ಪರಿಸ್ಥಿತಿಯನ್ನು ಅರಿತುಕೊಂಡು ಕುಲಕಣಿ೯ಯವರು ಕನ್ನಡ ನೆಲದಲ್ಲಿ ಅಟ್ಟಹಾಸದಿಂದ ಮೆರೆಯುತ್ತಿದ್ದ ಮರಾಠಿಯನ್ನು ಮಟ್ಟಹಾಕಿ ಕನ್ನಡವನ್ನು ಉಳಿಸಿ ಬೆಳೆಸಿ ಅಭಿವೃದ್ಧಿ ಪಡಿಸಲು ಕ೦ಕಣ ಬದ್ದರಾಗಿ ನಿಂತರು.
ರೇವಣಸಿದ್ಧ ದೊಡಮನಿಯವರು ದೂರ ದೂರದ ವಸತಿಗಳಿಂದ ಚಿಕ್ಕ ಚಿಕ್ಕ ಮಕ್ಕಳು ಮುಳ್ಳು ಕಲ್ಲುಗಳನ್ನು ತುಳಿಯುತ್ತಾ ಚಳಿ ಮಳೆ ಬಿಸಿಲಿಗೆ ಬೆದರದೆ ಶಾಲೆಗೆ ಬರುತ್ತಿದ್ದ ಚಿತ್ರ ದೊಡಮನಿಯವರ ಹೃದಯ ವಿಲಿವಿಲಿ ಒದ್ದಾಡಿತು. ಇವರ ಪ್ರಯತ್ನದ ಫಲವಾಗಿ 09-05-1995ರಲ್ಲಿ ನಾವಿ೦ದಗಿ ಸಮೀಪದ ರೇವುಗೋಳ ವಸತಿಯಲ್ಲಿ ಪ್ರಥಮ ವಸತಿ ಶಾಲೆ ಆರಂಭವಾಯಿತು 1998ರಲ್ಲಿ ಹೊಸೂರು ಗ್ರಾಮದ ಸಮೀಪವಿರುವ ಮಾಯನಾಳೆ ವಸತಿಯಲ್ಲಿ ಇನ್ನೊಂದು ಕನ್ನಡ ಶಾಲೆಯನ್ನು ಆರಂಭಿಸಿದರು ಇಂದಿರಾನಗರ ಝೋಪಡಪಟ್ಟಿ ಗೌಡಗಾ೦ವ ಕು೦ಭಾರ ವಸತಿಯಲ್ಲಿ ಕನ್ನಡ ವಸತಿ ಶಾಲೆ ಆಗಬೇಕು ಶಿಕ್ಷಣ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು.
ದೊಡಮನಿಯವರು ತಮ್ಮ ಅಲ್ಪ ಜೀವಿತಾವಧಿಯಲ್ಲಿ ಗಡಿನಾಡ ಕನ್ನಡ ಮಕ್ಕಳಿಗಾಗಿ ಜ್ಞಾನಜ್ಯೋತಿ ಎಂಬ ಮಾಸಪತ್ರಿಕೆಯನ್ನು ಆರಂಭಿಸಿ ಕನ್ನಡ ಮಕ್ಕಳಿಗೆಆಶಾ ಕಿರಣಹಾಗೂ ಸ್ಫೂರ್ತಿಯಾಗಿ ನಿಂತವರು. ಹೀಗೆ ಕನ್ನಡಕ್ಕಾಗಿ ನಿರಂತರ ಹೋರಾಡಿದ ಈ ಕನ್ನಡ ಜೀವ ಮಧ್ಯ ವಯಸ್ಸಿನಲ್ಲಿ ನಿಧನರಾದರೂ ಇವರು ಮಾಡಿದ ಕನ್ನಡ ಕಾರ್ಯಗಳು ಇಂದಿಗೂ ಅಮರ..
ದೊಡ್ಡಯ್ಯ ಸ್ವಾಮಿ ಹಿರೇಮಠ ಅಪ್ಪಟ ಕನ್ನಡ ಹೋರಾಟಗಾರ. ಡಾ.ಜಯದೇವಿತಾಯಿ ಲಿಗಾಡೆ, ಸಿದ್ದನಾಥ ಬಳ್ಳಾರಿ, ಬಸಯ್ಯ ಜಂಗಮ ವಕೀಲ ಮಹಾದೇವಪ್ಪ ಅಡವಿ ತೋಟೆಯಂತಹ ಹೋರಾಟಗಾರರೊಂದಿಗೆ ಕೂಡಿಕೊಂಡು ಅಪ್ಪಟ ಕನ್ನಡ ಪ್ರದೇಶಗಳಾದ ಸೊಲ್ಲಾಪುರ ಹಾಗೂ ಅಕ್ಕಲಕೋಟ ಕನ್ನಡ ಪ್ರದೇಶಗಳನ್ನು ಕರ್ನಾಟಕಕ್ಕೆ ಸೇರಿಸಲು ನಿರಂತರ ಹೋರಾಟ ಮಾಡಿದವರು. ಇದರಿಂದ ಬಹಳಷ್ಟು ನಿರಾಶೆಯಾಗಿ ಈ ಕನ್ನಡ ಜೀವ ಸತ್ತರೆ ನಾನು ಕರ್ನಾಟಕದಲ್ಲಿ ಸಾಯುತ್ತೇನೆಂದು ತಮ್ಮ ಹಳ್ಳಿಯಾದ ಕರಜಗಿ ತೊರೆದು ಕುಟುಂಬ ಸಹಿತವಾಗಿ ಕರ್ನಾಟಕ ಅಂಚಿನಲ್ಲಿರುವ ಮಣೂರ ಗ್ರಾಮದಲ್ಲಿ ನೆಲೆಸಿದರು. ಕನ್ನಡಕ್ಕಾಗಿ ಹೋರಾಡಿದ ಈ ಅಪ್ಪಟ ಕನ್ನಡ ಹೋರಾಟಗಾರನ ಸಮಾಧಿ ಇಲ್ಲದೇ ಇರುವುದು ನಿಜಕ್ಕೂ ನಾಚಿಕೆಗೇಡು. ನಾವು ನಮ್ಮ ನಾಡು,ನಮ್ಮ ಭಾಷಾಭಿಮಾನ ಕೊರತೆಯೆಂದರೆ ತಪ್ಪಗಲಾರದು…
ಲೇಖನಕ್ಕೆ ಸಹಕಾರ ನೀಡಿದ ಗಡಿನಾಡು ಹೋರಾಟಗಾರ ಅ.ಭಾ.ಚಿಕ್ಕಮಣ್ಣೂರ ಅವರಿಗೆತುಂಬು ಹೃದಯದ ಧನ್ಯವಾದಗಳು.
ಲೇಖಕರು: ದಯಾನಂದ ಪಾಟೀಲ ಅಧ್ಯಕ್ಷರು ಭಾರತೀಯ ಕನ್ನಡ ಸಾಹಿತ್ಯ ಬಳಗ ಮಹಾರಾಷ್ಟ…




















