ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕನ್ನಡ ಲಿಪಿಯ 4 ಸಾಲಿನ ಶಾಸನ ಪತ್ತೆ

ಬಳ್ಳಾರಿ / ಕಂಪ್ಲಿ : ಪಟ್ಟಣದ ಭಾರತ ಚಿತ್ರಮಂದಿರ ಬಳಿಯ ದೇವಾಂಗ ಸಮುದಾಯದ ಶ್ರೀರಾಮಲಿಂಗ ದೇವಸ್ಥಾನದ ಕಂಬವೊಂದರಲ್ಲಿ ನಾಲ್ಕು ಸಾಲಿನ ಕನ್ನಡ ಲಿಪಿಯ ತೆಲುಗು ಭಾಷೆಯ ನಾಲ್ಕು ಸಾಲಿನ ಶಾಸನವನ್ನು ಸಂಡೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ತಳವಾರ ನರಸಿಂಹ ಹಾಗೂ ಬಂಗಿ ದೊಡ್ಡ ಮಂಜುನಾಥ ಪತ್ತೆ ಮಾಡಿದ್ದಾರೆ.
ಕಂಬದ ಕೆಳಭಾಗದಲ್ಲಿ ಯೇಂಪುರಿತಿಪ್ಪನಕೂಂತ ರುಚಿನ ವಿರಮಯೀ ಬಸವನಗುಡಿ ಕಟಿಂಚೆನು ಯೀ ಪೆ ಎನ್ನುವ ಅಕ್ಷರಗಳಿವೆ. ಇದನ್ನು ಇತಿಹಾಸ ಸಂಶೋಧಕರಾದ ತಳವಾರ ನರಸಿಂಹ, ಗಂಗಾವತಿಯ ಕೋಲ್ಕಾರ ಶರಣಬಸಪ್ಪ, ಶಾಸನ ತಜ್ಞರಾದ ಚಿತ್ರದುರ್ಗದ ಡಾ.ಬಿ.ರಾಜಶೇಖರಪ್ಪ, ಧನಪಾಲ್, ಗೋಪಿನಾಥ್, ಮರಿ ಜೋಸೆಫ್ ಓದಿ ಚಿನ್ನ ವೀರಮ್ಮ ವೀರಮ್ಮ ಎಂಬಾಕೆ ಬಸವನಗುಡಿ ಕಟ್ಟಿಸಿದ್ದು ಎಂದು ಅರ್ಥೈಸಿದ್ದಾರೆ.

ಕಂಪ್ಲಿ ತಾಲೂಕಿನಲ್ಲಿ ಒಟ್ಟಾರೆ 22 ಶಾಸನಗಳು ಪತ್ತೆಯಾಗಿದ್ದು, ಇವುಗಳಲ್ಲಿ ಎರಡು ತೆಲುಗು ಶಾಸನಗಳಿವೆ. ಕಣವಿ ತಿಮ್ಮಲಾಪುರ ಗ್ರಾಮದಲ್ಲಿ ದೊರೆತ ಕೃಷ್ಣದೇವರಾಯನ ತೆಲುಗು ಶಾಸನ ಬಿಟ್ಟರೆ, ಕಂಪ್ಲಿ ರಾಮಲಿಂಗನ ಗುಡಿಯ ಕಂಬದ ನಾಲ್ಕು ಸಾಲಿನ ಶಾಸನವಾಗಿದೆ.

ರಾಮಲಿಂಗ ದೇವಸ್ಥಾನದಲ್ಲಿನ ಗರ್ಭಗುಡಿಯಲ್ಲಿನ ಲಿಂಗವು ಕಲ್ಯಾಣ ಚಾಲುಕ್ಯರ ಕಾಲದಾಗಿದ್ದು ದೇವಸ್ಥಾನ ಕಾಲಕಾಲಕ್ಕೆ ಜೀರ್ಣೋದ್ದಾರಗೊಂಡಿದೆ. ನಾಲ್ಕು ಕಂಬಗಳು ನಾಲ್ಕು ರೀತಿಯ ಶೈಲಿಯಲ್ಲಿವೆ. ಶಿವನ ದೇವಸ್ಥಾನದಲ್ಲಿ ಶಂಕು, ಚಕ್ರ ವೈಷ್ಣವ ಲಾಂಛನ ಇರುವ ಕಂಬ ಒಂದಿದೆ. ಬಹುಶಃ ಎಲ್ಲಿಯೋ ಇದ್ದ ಕಂಬಗಳನ್ನು ತಂದು ದೇವಸ್ಥಾನ ನಿರ್ಮಾಣಕ್ಕೆ ಬಳಸಿರುವ ಸಾಧ್ಯತೆಯಿದ್ದು, ನಾಲ್ಕರ ಒಂದು ಕಂಬದಲ್ಲಿ ನಾಲ್ಕು ಸಾಲಿನ ಶಾಸನ ಇರುವುದನ್ನು ಕಾಣಬಹುದು. ಹಿಟ್ನಾಳ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಇತಿಹಾಸ ಉಪನ್ಯಾಸಕ ಕೆ.ಅಂಜಿನಯ್ಯ, ದೇವಾಂಗ ಸಮಾಜದ ಅಧ್ಯಕ್ಷ ಸಪ್ಪರದ ರಾಘವೇಂದ್ರ, ಮಾಜಿ ಕಾರ್ಯದರ್ಶಿ ಬಂಗಿ ದೊಡ್ಡ ಮಂಜುನಾಥ ಇತರರಿದ್ದರು.

ವರದಿ : ಜಿಲಾನಸಾಬ್ ಬಿಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!