
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ ಶ್ರೀ ಶೈಲ ಮಲ್ಲಿಕಾರ್ಜುನ ( ಮಲ್ಲಯ್ಯ ಸ್ವಾಮಿಗೆ ) ಶಿವಪ್ಪ ಮಾಲಾಧಾರಿಗಳ ಪಾದಯಾತ್ರೆಯ ನಿಮಿತ್ತ ವಿಶೇಷ ಪೂಜಾ ಅಲಂಕಾರ ನೆರವೇರಿತು.
ಇದೇ ಸಮಯದಲ್ಲಿ ತಾಲೂಕಿನ ಡಣಾಪೂರ ಗ್ರಾಮದ ಶ್ರೀ ಶೈಲ ಮಲ್ಲಿಕಾರ್ಜುನ ಸ್ವಾಮಿಗೆ ಶಿವಪ್ಪ ಮಾಲಾಧಾರಿಗಳಿಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು.
ಒಂದು ಕ್ವಿಂಟಾಲ್ ಹೂವಿನಿಂದ ಅಲಂಕಾರ ಸೇವಂತಿಗೆ , ಮಲ್ಲಿಗೆ ,ಗುಲಾಬಿ , ಕನಕಾಂಬರ, ಬಿಲ್ವ ಪತ್ರೆ, ತುಳಸಿ ಸೇರಿ ಒಂದು ಕ್ವಿಂಟಾಲ್ ಹೂನಿಂದ ನಾಲ್ಕು ತಾಸುಗಳ ಕಾಲ ಅಲಂಕಾರ ನಡೆಯಿತು.
17 ಜನ ಶಿವಪ್ಪ ಮಾಲಾಧಾರಿಗಳು ಇಂದು ಸಂಜೆ ಪಾದಯಾತ್ರೆ ಮೂಲಕ ಒಂದು ವಾರದ ಪಾದಯಾತ್ರೆಯು ಗ್ರಾಮದಲ್ಲಿ 21 ವರ್ಷಗಳಿಂದ ನಡೆದು ಬಂದಿದೆ ಎಂದು ಬಸವರಾಜ ಸ್ವಾಮಿಯವರು ತಿಳಿಸಿದರು.
ಶಿವಪ್ಪ ಮಾಲಾಧಾರಿಗಳಾದ ಬಸವರಾಜ ಯಮಗನೂರ , ವೀರನಾಗಪ್ಪ , ವೀರನಗೌಡ , ಮಂಜುನಾಥ ಪಿ. ಪಿ , ಮಲ್ಲನಗೌಡ ಜೆ , ಪಿಡ್ಡಪ್ಪ , ವೀರೇಶ ಬಕ್ಕಾರ , ಲಿಂಗರಾಜ ಹೂಗಾರ , ಮಂಜುನಾಥ ಮಡ್ಡೇರ ,ಮಲ್ಲೇಶ ಮಳಗಿ , ವೆಂಕಟರಮಣ , ಮಾರುತಿ ಬಾತ್ , ಶಿವಮಣಿ , ಮಲ್ಲಯ್ಯಸ್ವಾಮಿ ಪೂಜಾರಿ , ಹನುಮೇಶ, ತಿಪ್ಪೇಸ್ವಾಮಿ ಗ್ರಾಮದ ಹಿರಿಯರಾದ ಮಲ್ಲನಗೌಡ , ಪಕೀರಪ್ಪ , ಚಿದಾನಂದಪ್ಪ , ಅಯ್ಯಪ್ಪ , ಹನುಮಂತ , ಈರಪ್ಪ ಸೇರಿದಂತೆ ಇತರರು ಇದ್ದರು.
ವರದಿ ಹನುಮೇಶ ಭಾವಿಕಟ್ಟಿ



















