ಬಳ್ಳಾರಿ / ಕಂಪ್ಲಿ : ಯೋಗಿನಾರಾಯಣ ಯತಿಂದ್ರ ಪ್ರಸಿದ್ದ ಸಂತ, ಕವಿ, ಕನ್ನಡ ತೆಲುಗು ಭಾಷೆಗಳಲ್ಲಿ ಕೀರ್ತನೆ ತತ್ವಜ್ಞಾನದ ಕೃತಿಗಳನ್ನು ರಚಿಸಿದ ಜೊತೆಗೆ ಸಮಾಜ ಸುಧಾರಕರಾಗಿದ್ದಾರೆ ಎಂದು ತಹಶೀಲ್ದಾರ್ ಜೂಗಲ್ ಮಂಜುನಾಥ ನಾಯಕ ಹೇಳಿದರು. ಪಟ್ಟಣದ ತಹಶೀಲ್ದಾರ್ ಕಛೇರಿಯ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಯೋಗಿನಾರಾಯಣ ಯತಿಂದ್ರರವರ ಜಯಂತ್ಯೋತ್ಸವದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಮಾತನಾಡಿ ಯೋಗಿನಾರಾಯಣ ರವರ ತತ್ವಾದರ್ಶಗಳು ನಮ್ಮ ನಿತ್ಯದ ಬದುಕಿಗೆ ಮಾರ್ಗದರ್ಶಕಗಳಾಗಿವೆ ಅವುಗಳನ್ನು ಅಳವಡಿಸಿಕೊಳ್ಳಿ ಎಂದರು. ಬಲಿಜ ಸಮಾಜದ ಅಧ್ಯಕ್ಷ ಡಿ.ಶ್ರೀನಿವಾಸ ಮಾತನಾಡಿ ಶೈಕ್ಷಣಿಕ ಸಾಮಾಜಿಕ ಆರ್ಥಿಕವಾಗಿ ಹಿಂದುಳಿದ ಸಮುದಾಯವಾಗಿದ್ದ ಸರ್ಕಾರ ನಮ್ಮ ಸಮುದಾಯಕ್ಕೆ ಸೌಲಭ್ಯ ನೀಡಲು ಮುಂದಾಗಬೇಕು ಎಂದರು. ಬಲಿಜ ಸಮಾಜದ ಉಪಾಧ್ಯಕ್ಷ ಎಂ ಮಲ್ಲಿಕಾರ್ಜುನ, ಖಜಾಂಚಿ ಕವಿತಾಳ ಶಿವಕುಮಾರ, ಕಾರ್ಯದರ್ಶಿ ತಿರುಮಲ, ಉಪ ತಹಶೀಲ್ದಾರ್ ಬಿ.ರವೀಂದ್ರಕುಮಾರ್, ಶೀರೆಸ್ತದಾರ ಪಂಪಾಪತಿ,ಟಿ. ಎಂ. ಬಸವರಾಜ, ರಮೇಶ ಎಫ್ ಡಿ.ಸಿ ಮಾಲತೇಶ ಮುಖಂಡರಾದ ವೆಂಕೋಬಣ್ಣ, ಪ್ರಕಾಶ, ಲೋಕೇಶ, ಯಮನೂರಪ್ಪ, ಇಂಗಳಗಿ ನಾರಾಯಣಪ್ಪ, ಸುನಂದಮ್ಮ, ನಾಗಭೂಷಣ ಹಾಗೂ ಸಮಾಜದವರು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















