ಬಳ್ಳಾರಿ / ಕಂಪ್ಲಿ : ತಾಲೂಕು ರೈಲ್ವೆ ಮಾರ್ಗಕ್ಕಾಗಿ ಕ್ರಿಯಾಸಮಿತಿ ಕಾರ್ಯದರ್ಶಿ ರಾಮಸಾಗರದ ಗ್ರಾಮೀಣ ಭಾಗದ ಹಾದಿಮನಿ ಕಾಳಿಂಗವರ್ಧನ ಇವರ ವ್ಯವಹಾರ ಮತ್ತು ಸಾಮಾಜಿಕ ಸೇವಕ ವಿವಿಧ ಕ್ಷೇತ್ರದಲ್ಲಿ ಸಾಧನೆ ಜೊತೆಗೆ ಸಮಾಜದ ಸೇವೆ ಗುರುತಿಸಿ, ಈ ಅಕಾಡೆಮಿಯು ಏಷಿಯಾ ಇಂಟರ್ ನ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ ಮತ್ತು ಇದು ಭಾರತ ಸರ್ಕಾರದ ನೀತಿ ಆಯೋಗದಡಿ ನೋಂದಾಯಿತ ಸಂಸ್ಥೆಯಾಗಿದೆ.
ಸಮಾಜದ ವಿವಿಧ ಕ್ಷೇತ್ರಗಳಲ್ಲಿ (ಶಿಕ್ಷಣ, ಸಮಾಜ ಸೇವೆ, ಸಂಶೋಧನೆ) ಅತ್ಯುತ್ತಮ ಸಾಧನೆ ಮಾಡಿದ ವ್ಯಕ್ತಿಗಳನ್ನು ಗುರುತಿಸಿ ಈ ಗೌರವ ಪದವಿಯನ್ನು ನೀಡಲಾಗುತ್ತದೆ ಹಾಗೆಯೇ ಹೊಸೂರಿನ ಏಷಿಯಾ ಇಂಟರ್ ನ್ಯಾಷನಲ್ ರಿಸರ್ಚ್ ಅಕಾಡೆಮಿಯವರು ಶನಿವಾರ ಗೌರವ ಡಾಕ್ಟರೇಟ್ನೊಂದಿಗೆ, 2026ರ ಗೋಲ್ಡನ್ ಐಕಾನಿಕ್ ಮತ್ತು ಸೇವಾ ರತ್ನ ಅವಾರ್ಡ್ ನೀಡಿ ಗೌರವಿಸಿದ್ದಾರೆ. ಪ್ರಮುಖರಾದ ಕೆ.ಎ.ಮನೋಕಾರನ್, ಡಾ.ಕೃಷ್ಣಮೂರ್ತಿ ಮಹಾಸ್ವಾಮೀಜಿ, ಡಾ.ಎ.ಶ್ರೀಧರ್, ಡಾ.ಕೆ.ಎಸ್.ಸುಬ್ರಹ್ಮಣ್ಯಂ, ಆರ್.ಬಿ.ಪಾಟೀಲ್, ಡಾ.ವೈಭವ್ ಗುಣಶೇಖರ, ಡಾ.ಕರುಪಣ್ಣ ಸ್ವಾಮೀಜಿ ಸೇರಿದಂತೆ ಕುಟುಂಬ ವರ್ಗದವರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















