ನದಿ ಸ್ನಾನಕ್ಕೆ ಹೋಗುವವರಿಗೆ ಎಚ್ಚರಿಕೆ !
ಬಳ್ಳಾರಿ / ಕಂಪ್ಲಿ : ಹೋಳಿಹಬ್ಬದ ರಂಗಿನಾಟದ ಬಳಿಕ ನಗರದ ಬಹುತೇಕರು ಕಂಪ್ಲಿ ಗಂಗಾವತಿ ಸೇತುವೆಯ ಸಮೀಪ ಇರುವ ತುಂಗಭದ್ರಾ ನದಿಯಲ್ಲಿ ಸ್ನಾನಕ್ಕೆ ಹೋಗುವುದು ಸಹಜ. ಆದರೆ ಈ ಬಾರಿ ನದಿಸ್ನಾನಕ್ಕೆ ಹೋಗುವವರು ಅಲ್ಲಿ ಮೊಸಳೆಗಳಿದ್ದು ಜಾಗೃತಿ ವಹಿಸುವಂತೆ ನಮ್ಮ ” ಕರುನಾಡ ಕಂದ ಪತ್ರಿಕೆ ” ಮನವಿ ಮಾಡುತ್ತದೆ.
ಇತ್ತೀಚೆಗೆ ನದಿಯ ಸಮೀಪ ನಡೆದ ಧಾರ್ಮಿಕ ಕಾರ್ಯಕ್ರಮದ ವರದಿಗೆ ತೆರಳಿದ್ದ ಸಂದರ್ಭದಲ್ಲಿ ನದಿ ಪಾತ್ರದಲ್ಲಿ ಮೊಸಳೆ ಕಾಣಿಸಿಕೊಂಡಿದೆ. ಆಗಾಗ್ಗೆ ಅಲ್ಲಿ ಮೊಸಳೆ ಕಾಣುತ್ತಿವೆ ಎಂದು ಸ್ಥಳೀಯ ರೈತರು ತಿಳಿಸಿದ್ದಾರೆ. ಹೋಳಿಯ ಬಣ್ಣದಾಟದ ಬಳಿಕ ಬಹುತೇಕರು ಕಂಪ್ಲಿ ಗಂಗಾವತಿ ನದಿ ಪಾತ್ರದಲ್ಲಿ ಔತಣಕೂಟ, ಗುಂಡು-ತುಂಡಿನ ಪಾರ್ಟಿಯ ಬಳಿಕ ಸ್ನಾನಕ್ಕೆಂದು ನದಿಗೆ ಇಳಿಯುತ್ತಾರೆ. ಕೆಲವರು ಕುಡಿದ ಅಮಲಿನಲ್ಲಿ ನದಿಗೆ ಇಳಿಯುವ ಸಾಧ್ಯತೆ ಇದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು, ಪೊಲೀಸ್ ಇಲಾಖೆ ಈ ಬಗ್ಗೆ ನಿಗಾ ವಹಿಸಬೇಕು.
“ಮೊಸಳೆಗಳ ಹಾವಳಿ ಬಗ್ಗೆ ರೈತರಿಗೂ ಸಮಸ್ಯೆಯಾಗಿದ್ದು, ಈ ಬಗ್ಗೆ ಸಾಕಷ್ಟು ಬಾರಿ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾದರೂ ಸಂಬಂಧಿತ ಅರಣ್ಯ ಇಲಾಖೆ ಕನಿಷ್ಠ ಪಕ್ಷ ಫಲಕಗಳನ್ನು ಸಹ ಹಾಕಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿಲ್ಲ,
ಆಳವಾದ ಮರುಳಿನ ಗುಂಡಿಗಳಿದ್ದು ದಯವಿಟ್ಟು ನದಿಗೆ ಇಳಿಯುವಾಗ ಎಚ್ಚರ ವಹಿಸಬೇಕೆಂದು ನಮ್ಮ ಪತ್ರಿಕೆಯ ಕಳಕಳಿಯ ಮನವಿ ನಿಮ್ಮ ಜೀವನ ಸದಾ ಬಣ್ಣಗಳಿಂದ ತುಂಬಿರಲಿ,
ಹಬ್ಬದ ದಿನದಂದು ನೈಸರ್ಗಿಕ ಬಣ್ಣಗಳಿಂದ ಅಥವಾ
ಗಿಡಮೂಲಿಕೆಗಳು ಹೂವುಗಳು, ಬೇವಿನ ಎಲೆ,
ಮುಂತಾದ ನೈಸರ್ಗಿಕ ಮತ್ತು ಎಲೆಗಳನ್ನು ನೀರಿನಲ್ಲಿ
ಕುದಿಸಿ, ಆ ಬಣ್ಣದ ನೀರಿನಿಂದ ಹೋಳಿಯನ್ನು
ಸಂಭ್ರಮದಿಂದ ಆಚರಿಸಿ. ಇದರಿಂದ ನಿಮಗೆ ಚರ್ಮ
ರೋಗಗಳು ಬರುವುದಿಲ್ಲ ಮತ್ತು ಕೆಮಿಕಲ್
ಬಣ್ಣಗಳಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ. ನಂತರ ನದಿಯಲ್ಲಿ ಸ್ಥಾನ ಮಾಡುವುದರಿಂದ ಆ ಬಣ್ಣದಿಂದ ನದಿಯ ನೀರು ಕೂಡ ಅಶುದ್ಧವಾಗುತ್ತದೆ. ಆ ನೀರನ್ನು ಬಳಸುವುದರಿಂದ ಜನರಿಗೆ ಹಲವಾರು ರೋಗಗಳು ಬರುತ್ತವೆ. ಆದ್ದರಿಂದ ಎಲ್ಲರೂ ನೈಸರ್ಗಿಕ ಬಣ್ಣಗಳನ್ನು ಬಳಸಿ ಪ್ರಕೃತಿಗೆ ಮಾದರಿಯಾಗಿ.
ಸರ್ವರಿಗೂ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು.
ವರದಿ : ಜಿಲಾನಸಾಬ್ ಬಡಿಗೇರ್




















