
ಬೀದರ್ ಜಿಲ್ಲೆ ಬಸವಕಲ್ಯಾಣದ ಶ್ರೀ ಘನಲಿಂಗ ರುದ್ರಮುನಿ ಶಿವಾಚಾರ್ಯ ಗವಿಮಠದ ವತಿಯಿಂದ 2026 ನೇ ಸಾಲಿನ ಪ್ರತಿಷ್ಠಿತ “ಅಭಿನವ ಘನಲಿಂಗ ಶ್ರೀ ಪ್ರಶಸ್ತಿ” ಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಏಳು ಗಣ್ಯರನ್ನು ಆಯ್ಕೆ ಮಾಡಲಾಗಿದೆ.
- ಬಸವ ಬೆರಳಚ್ಚು ಸಂಸ್ಥೆಯ ಪ್ರಾಚಾರ್ಯರಾದ ಶ್ರೀ ಎ.ಜಿ. ಪಾಟೀಲ ಬಸವಕಲ್ಯಾಣ,
- ಹರಿ ಓಂ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ದಿಲೀಪಗೀರ ಕಿಶನಗೀರ ಗೋಸಾವಿ ಗೋಕುಳ,
- ಕೃಷಿ ಇಲಾಖೆಯ ನಿವೃತ್ತ ವ್ಯವಸ್ಥಾಪಕರಾದ ಶ್ರೀ ಜಯಪ್ರಕಾಶ ಬಸವರಾಜ ಸ್ವಾಮಿ ಉಮರ್ಗಾಕರ್ ಹುಮನಾಬಾದ,
- ನಿವೃತ್ತ ಮುಖ್ಯ ಗುರುಗಳಾದ ಶ್ರೀಮತಿ ಸರಸ್ವತಿ ಶಿವಕುಮಾರ ಬೆಂಬಳಿ ಬಸವಕಲ್ಯಾಣ,
- ಜಿಲ್ಲಾ ಭಜರಂಗದಳ ಸಹ ಸಂಯೋಜಕರಾದ ಶ್ರೀ ರವಿ ವೀರಣ್ಣ ನಾವದ್ಗೇಕರ ಬಸವಕಲ್ಯಾಣ,
- ಸಮಾಜ ಸೇವಕರಾದ ಶ್ರೀ ಶಿವಕುಮಾರ ಬಿರಾದಾರ ಬಸವಕಲ್ಯಾಣ,
- ಸಮಾಜ ಸೇವಕರಾದ ಶ್ರೀ ಲೋಕೇಶ ಮೊಳಕೆರೆ ಪ್ರತಾಪೂರ ತಾ.ಬಸವಕಲ್ಯಾಣ
ಈ ವಿಷಯವನ್ನು ಗವಿಮಠದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಷಟ್ ಸ್ಥಲ ಬ್ರಹ್ಮ ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಪ್ರಕಟಿಸಿದ್ದಾರೆ.
ಶ್ರೀ ಘನಲಿಂಗ ರುದ್ರಮುನಿ ಜಾತ್ರಾ ಮಹೋತ್ಸವದ ಅಂಗವಾಗಿ ದಿನಾಂಕ: ಏಪ್ರಿಲ್ 7, 2026 ಮಂಗಳವಾರದಂದು ಸಮಯ: ಬೆಳಿಗ್ಗೆ 11:00 ಗಂಟೆಗೆ ,ಗವಿಮಠ ಆವರಣದಲ್ಲಿ ಈ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ” ಗುರು ಘನಲಿಂಗರ ಗುರುವಿನ ಲೀಲಾ ” ಧ್ವನಿ ಸುರಳಿ ಬಿಡುಗಡೆ ಸಮಾರಂಭ ಹಾಗೂ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ.
ಈ ಕಾರ್ಯಕ್ರಮಕ್ಕೆ ನಾಡಿನ ಹರ ಗುರು ಚರಮೂರ್ತಿಗಳು, ರಾಜಕೀಯ ಮುಖಂಡರು, ಸಾಹಿತಿಗಳು, ಕವಿ, ಕಲಾವಿದರು ಸೇರಿದಂತೆ ಅತಿಥಿಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಸಕಲ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಘನಲಿಂಗ ರುದ್ರಮುನಿ ಶಿವಯೋಗಿಗಳ ದರ್ಶನ, ಆಶೀರ್ವಾದ ಪಡೆದು ಮಹಾಪ್ರಸಾದ ಸ್ವೀಕರಿಸಿ ಪುನೀತರಾಗಬೇಕೆಂದು ಗವಿಮಠ ಟ್ರಸ್ಟ್ ಹಾಗೂ ಗವಿಮಠದ ಸಕಲ ಭಕ್ತ ವೃಂದದ ವತಿಯಿಂದ ಕೋರಲಾಗಿದೆ.
ವರದಿ : ಶ್ರೀನಿವಾಸ ಬಿರಾದಾರ




















